ಒಟ್ಟು ೨೦ ಲಕ್ಷ ಜನರಿಗೆ ೨ ಸಾವಿರದ ೫೩೭ ಕೋಟಿ ರೂಪಾಯಿ ವಂಚನೆ !
ನವ ದೆಹಲಿ – ದೇಶದಲ್ಲಿ ಕಳೆದ 3 ವರ್ಷಗಳಲ್ಲಿ ಸೈಬರ್ ಅಪರಾಧವು ಸುಮಾರು ಮೂರು ಪಟ್ಟು ಹೆಚ್ಚಳ ಆಗಿದೆ ಎಂದು ಸಂಸದೀಯ ಸಮಿತಿಯ ವರದಿಯಲ್ಲಿ ಹೇಳಲಾಗಿದೆ. ಸೈಬರ್ ಅಪರಾಧದ ಪರಿಶೀಲನೆ ಮಾಡುವ ಸಂಸದೀಯ ಸಮಿತಿಯಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗೆ, ೨೦೨೧ ರಲ್ಲಿ ಸೈಬರ್ ವಂಚನೆಯಲ್ಲಿ ೫ ಲಕ್ಷ ೫ ಸಾವಿರ ಪ್ರಕರಣಗಳು ಇದ್ದವು, ಆದರೆ ೨೦೨೩ ರಲ್ಲಿ ಇಲ್ಲಿಯವರೆಗೆ ಅವು ೧೯ ಲಕ್ಷ ೯೪ ಸಾವಿರದಷ್ಟು ಆಗಿವೆ. ಈ 3 ವರ್ಷಗಳಲ್ಲಿ ವಂಚನೆಗೆ ಸಿಲುಕಿರುವ ಹಣಗಳ ಪೈಕಿ ೫೪೨ ಕೋಟೆ ೭ ಲಕ್ಷ ರೂಪಾಯಂದ ೨ ಸಾವಿರದ ೫೩೭ ಕೋಟಿ ೩೫ ಲಕ್ಷ ರೂಪಾಯಿಷ್ಟು ಆಗಿದೆ.
नई दिल्ली: संसदीय समिति ने साइबर अपराध से निपटने के लिए नियम बनाने को कहा https://t.co/N6cIOQLFJR
— डाइनामाइट न्यूज़ हिंदी (@DNHindi) July 27, 2023
೧. ದೇಶದಲ್ಲಿ ಪ್ರತಿದಿನ ಪ್ರತಿ ೬೦ ಸಾವಿರ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಒಂದರಲ್ಲಿ ಮೋಸ ಆಗುತ್ತಿದೆ ಮತ್ತು ಜನರ ಹಣ ಸಿಲುಕುತ್ತಿದೆ. ಇದರಲ್ಲಿ ಕೂಡ ಸೈಬರ್ ವಂಚನೆ ಕಂಡುಹಿಡಿಯಲು ನಿರ್ಮಿಸಿರುವ ವ್ಯವಸ್ಥೆ ೧೦೦ ರೂಪಾಯಿಗಳಲ್ಲಿ ಕೇವಲ ೮ ರೂಪಾಯಿ ಮೋಸ ಕಂಡು ಹಿಡಿಯುತ್ತದೆ. (ಇದು ಪೊಲೀಸರಿಗೆ ಲಜ್ಜಾಸ್ಪದ ! – ಸಂಪಾದಕರು)
೨. ಗೃಹ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ತಾಜಾ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಶೇಕಡ ೮೧ ರಷ್ಟು ಸೈಬರ್ ಅಪರಾಧ ೧೦ ಜಿಲ್ಲೆಗಳಲ್ಲಿ ಘಟಿಸುತ್ತಿವೆ. ಹೀಗಿರುವಾಗಲು ಸರಾಸರಿ ಕೇವಲ ಶೇಕಡ ೧.೭ ಪ್ರಕರಣಗಳ ದೂರು ದಾಖಲಿಸಲಾಗುತ್ತಿದೆ.
೩. ಸಂಸದೀಯ ಸಮಿತಿಯಿಂದ ರಿಸರ್ವ್ ಬ್ಯಾಂಕಿಗೆ, ಬ್ಯಾಂಕಿನಿಂದ ಹಣ ತೆಗೆಯುವಾಗ ಮತ್ತು ಜಮಾ ಮಾಡುವ ಸಂಪೂರ್ಣ ಓಟಿಪಿ (ಒನ್ ಟೈಮ್ ಪಾಸ್ವರ್ಡ್) ಆಧಾರಿತ ಪದ್ಧತಿ ಮಾಡಬೇಕು ಎಂದು ಶಿಫಾರಸ್ಸು ಮಾಡಿದೆ, ಇದರಿಂದ ಯಾವುದೇ ರೀತಿಯ ವ್ಯವಹಾರದ ಮಾಹಿತಿ ಖಾತೆದಾರನಿಗೆ ತಕ್ಷಣ ದೊರೆಯಬಹುದು.
೪. ಸಮಿತಿಯ ವರದಿಯ ಪ್ರಕಾರ ಬ್ಯಾಂಕ್, ಎಟಿಎಂ ಅಥವಾ ಮೊಬೈಲ್ ಬ್ಯಾಂಕಿಂಗ್ ನ ತುಲನೆಯಲ್ಲಿ ಯುಪಿಐ (ಗೂಗಲ್ ಪೇ, ಭೀಮ್, ಪೇಟಿಎಂ (ಯೂನಿಫಾಯಿಡ ಪೇಮೆಂಟ್ಸ್ ಇಂಟರ್ಫೇಸ್ ) ವ್ಯವಹಾರ ತುಲನೆಯಲ್ಲಿ ಸುರಕ್ಷಿತವಾಗಿದೆ. ಇಲ್ಲಿ ವಂಚನೆಯ ದೂರುಗಳು ಕಡಿಮೆ ಇವೆ. ದೇಶದಲ್ಲಿ ಪ್ರತಿದಿನ ೩೮ ಕೋಟಿ ವ್ಯವಹಾರಗಳ ಪೈಕಿ ಶೇಕಡಾ ೭೬ ‘ಯುಪಿಐ’ ಮೂಲಕ ಆಗುತ್ತದೆ. 3 ವರ್ಷಗಳ ಸಮೀಕ್ಷೆಯಲ್ಲಿ 1 ಕೋಟಿ ೧೫ ಲಕ್ಷ ಯುಪಿಐ ವ್ಯವಹಾರದಲ್ಲಿ ವಂಚನೆ ಹಾಗೂ ಬ್ಯಾಂಕಿಂಗ್ ನಲ್ಲಿ ೬೦ ಸಾವಿರಗಳಲ್ಲಿ 1 ವಂಚನೆ ನಡೆಯುತ್ತದೆ ಎಂದು ವರದಿ ಮಾಡಿದೆ.
೫. ಕಂದಾಯ ಸಚಿವಾಲಯದ ಪ್ರಕಾರ ಎಲ್ಲಕ್ಕಿಂತ ಹೆಚ್ಚು ಮೋಸ ‘ಎಟಿಎಂ’ ನ ಮೂಲಕ ನಡೆಯುತ್ತಿದೆ. ೨೦೨೦ ರಲ್ಲಿ ‘ಎಟಿಎಂ’ ಮೂಲಕ ನಡೆದಿರುವ ವಂಚನೆಯಲ್ಲಿ ೧೦ ಲಕ್ಷ ೮೦ ಸಾವಿರಗಿಂತಲೂ ಹೆಚ್ಚಿನ ಪ್ರಕರಣಗಳಿದ್ದವು. ೨೦೨೨ ರಲ್ಲಿ ಅವು ೧೭ ಲಕ್ಷ ೬೦ ಸಾವಿರಕ್ಕೆ ತಲುಪಿತು. ಇಂತಹ ಪ್ರಕರಣದಲ್ಲಿ ಸಿಲುಕಿರುವ ಹಣ ಕೂಡ ೧ ಸಾವಿರದ ೧೧೯ ಕೋಟಿ ರೂಪಾಯಿಯಿಂದ ೨ ಸಾವಿರದ ೧೧೩ ಕೋಟಿ ರೂಪಾಯಿ ಆಗಿದೆ.
೬. ದೇಶದಲ್ಲಿನ ೩೫ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಇವುಗಳಲ್ಲಿನ ೨೧ ರಾಜ್ಯಗಳಲ್ಲಿ ಕೇವಲ ೧-೨ ಸೈಬರ್ ಪೋಲಿಸ್ ಠಾಣೆ ಇದೆ. ಸೈಬರ್ ಅಪರಾಧದಲ್ಲಿ ಸಿಲುಕಿರುವ ೮೭೨ ಜನರು ನಂತರ ೨ ಲಕ್ಷ ೬೭ ಸಾವಿರಗಿಂತಲೂ ಹೆಚ್ಚಿನ ಪ್ರಕರಣದಲ್ಲಿ ಸಹಭಾಗಿ ಇರುವುದು ಕಂಡು ಬಂದಿದೆ.
ಸಂಪಾದಕೀಯ ನಿಲುವುಇದು ಮಾಹಿತಿ ಮತ್ತು ತಂತ್ರಜ್ಞಾನದ ಇನ್ನೊಂದು ಸಮಾಜಕಂಟಕ ಮುಖವಾಗಿದೆ ! ಸಾಮಾನ್ಯವಾಗಿ ಆಧುನಿಕತೆಯ ಡಂಗುರ ಸಾರುವ ಸರಕಾರಕ್ಕೆ ಸೈಬರ್ ಅಪರಾಧಗಳನ್ನು ಬಗೆಹರಿಸಲು ಪ್ರಭಾವಿ ವ್ಯವಸ್ತೆ ಇಲ್ಲಿಯವರೆಗೆ ಕಂಡುಹಿಡಿಯಲು ಸಾಧ್ಯವಾಗದೇ ಇರುವುದು ಲಚ್ಚಾಸ್ಪದ ! |