ಸರ್ವೋಚ್ಚ ನ್ಯಾಯಾಲಯದಿಂದ ಕಿರಿಯ ನ್ಯಾಯಾಲಯದವರೆಗೆ ಒಟ್ಟು ೫ ಕೋಟಿ ಮೊಕದ್ದಮೆ ಬಾಕಿ ! – ಕೇಂದ್ರ ಕಾನೂನು ಸಚಿವ ಅರ್ಜುನರಾಮ ಮೇಘವಾಲ

ಕೇಂದ್ರ ಕಾನೂನು ಸಚಿವ ಅರ್ಜುನರಾಮ ಮೇಘವಾಲ ಇವರು ಲೋಕಸಭೆಯಲ್ಲಿ ನೀಡಿದ ಮಾಹಿತಿ !

ನವದೆಹಲಿ – ಸರ್ವೋಚ್ಚ ನ್ಯಾಯಾಲಯ ಸಹಿತ ದೇಶದಲ್ಲಿನ ೨೫ ನ್ಯಾಯಾಲಯಗಳು ಮತ್ತು ಕಿರಿಯ ನ್ಯಾಯಾಲಯಗಳಲ್ಲಿ ೫ ಕೋಟಿ ೨ ಲಕ್ಷ ಮೊಕದ್ದಮೆ ಬಾಕಿ ಇವೆ, ಎಂದು ಕೇಂದ್ರ ಕಾನೂನು ಸಚಿವ ಅರ್ಜುನರಾಮ ಮೇಘವಾಲ ಇವರು ಜುಲೈ ೨೯ ರಂದು ಒಂದು ಪ್ರಶ್ನೆಗೆ ಲಿಖಿತ ಉತ್ತರ ನೀಡುವಾಗ ಲೋಕಸಭೆಯಲ್ಲಿ ಮಾಹಿತಿ ನೀಡಿದರು.
ಕಾನೂನು ಸಚಿವರು ತಮ್ಮ ಮಾತನ್ನು ಮುಂದುವರೆಸುತ್ತಾ, ಕಳೆದ ೩೦ ವರ್ಷಗಳಕ್ಕಿಂತಲೂ ಹೆಚ್ಚಿನ ಸಮಯದಿಂದ ದೇಶದಲ್ಲಿನ ಉಚ್ಚ ನ್ಯಾಯಾಲಯದಲ್ಲಿ ಜುಲೈ ೨೪, ೨೦೨೩ ವರೆಗಿನ ೭೧ ಸಾವಿರದ ೨೦೪ ಮೊಕದ್ದಮೆ ಬಾಕಿ ಇವೆ. ಹಾಗೂ ಜಿಲ್ಲಾ ಮತ್ತು ಕಿರಿಯ ನ್ಯಾಯಾಲಯದಲ್ಲಿ ಒಂದು ಲಕ್ಷ ಒಂದು ಸಾವಿರದ ೮೩೭ ಮೊಕದ್ದಮೆಗಳು ಬಾಕಿ ಇವೆ. ಭಾರತದ ಸರ್ವೋಚ್ಚ ನ್ಯಾಯಾಲಯವು ಏಕೀಕೃತ ಪ್ರಕರಣ ನಿರ್ವಹಣೆಯಿಂದ ದೊರೆತಿರುವ ಅಂಕಿಅಂಶಗಳ ಪ್ರಕಾರ ಜುಲೈ ಒಂದರವರೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ೬೯ ಸಾವಿರದ ೭೬೬ ಪ್ರಕರಣಗಳು ಬಾಕಿ ಇವೆ.

ಮೊಕದ್ದಮೆ ಬಾಕಿ ಉಳಿಯುವ ಹಿಂದಿನ ಪ್ರಮುಖ ಕಾರಣಗಳು !

  • ಎಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಖಾಲಿ ಸ್ಥಾನ
  • ಮೂಲಭೂತ ಭೌತಿಕ ಸೌಲಭ್ಯದ ಕೊರತೆ
  • ನ್ಯಾಯಾಲಯದ ಸಿಬ್ಬಂದಿಗಳ ಸಹಕಾರದ ಕೊರತೆ
  • ಮೊಕದ್ದಮೆಗೆ ಸಂಬಂಧಿತ ತಥ್ಯಗಳಲ್ಲಿನ ತೋಡಕು
  • ಅಪರಾಧ ಸಾಬೀತು ಪಡಿಸಲು ಸಾಕ್ಷಿಗಳ ಕೊರತೆ,
  • ಬಾರ್ ಕೌನ್ಸಿಲ್, ತನಿಖಾ ಸಂಸ್ಥೆ, ಸಾಕ್ಷಿಗಳು ಮತ್ತು ಅರ್ಜಿದಾರರ ಸಹಭಾಗ
  • ನ್ಯಾಯಾಲಯ ಪ್ರಕ್ರಿಯೆಯನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸದೇ ಇರುವ ಕೊರತೆ

ಸಂಪಾದಕೀಯ ನಿಲುವು

ಕಳೆದ ಅನೇಕ ದಶಕಗಳಲ್ಲಿ ಎಲ್ಲಾ ಪಕ್ಷದ ಸರಕಾರಗಳು ಬಂದು ಹೋದವು ! ‘ಈ ಗಂಭೀರ ಸಮಸ್ಯೆಯ ನಿವಾರಣೆಗೆ ಶಾಶ್ವತ ಪರಿಹಾರ ಮಾಡದೆ ಪ್ರತಿಯೊಂದು ಸಂಸತ್ತಿನ ಅಧಿವೇಶನದಲ್ಲಿ ಕೇವಲ ಬಾಕಿ ಇರುವ ಮೊಕದ್ದಮೆಯೇ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿ ಏನು ಪ್ರಯೋಜನ ?’, ಹೀಗೆ ರಾಷ್ಟ್ರಪ್ರೇಮಿಗೆ ಅನಿಸಿದರೆ ಅದರಲ್ಲಿ ತಪ್ಪೇನು ?