ಕಳೆದ ೫ ವರ್ಷಗಳಲ್ಲಿ ದೇಶದ ೨ ಲಕ್ಷ ೭೫ ಸಾವಿರ ಮಕ್ಕಳು ನಾಪತ್ತೆ !

ನಾಪತ್ತೆಯಾಗುವ ಮಕ್ಕಳಲ್ಲಿ ಹುಡುಗರಗಿಂತ ಹುಡುಗಿಯರ ಸಂಖ್ಯೆ ಹೆಚ್ಚು !

ನವದೆಹಲಿ – ಕೇಂದ್ರ ಸರಕಾರದ ವರದಿಯ ಪ್ರಕಾರ ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ 2 ಲಕ್ಷ ೭೫ ಸಾವಿರದ ೧೨೫ ಮಕ್ಕಳು ನಾಪತ್ತೆಯಾಗಿದ್ದಾರೆ. ಇದರಲ್ಲಿ 2 ಲಕ್ಷ ೪೦ ಸಾವಿರ ಮಕ್ಕಳು ದೊರೆತಿದ್ದಾರೆ. ನಾಪತ್ತೆಯಾದ ಮಕ್ಕಳಲ್ಲಿ ಹುಡುಗಿಯರ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಸರಕಾರವು ಸಂಸತ್ತಿನಲ್ಲಿ ಇದಕ್ಕೆ ಸಂಬಂಧ ಪಟ್ಟ ಪ್ರಶ್ನೆಗೆ ಉತ್ತರ ನೀಡುವಾಗ, ಇಲ್ಲಿಯವರೆಗೆ ಮಕ್ಕಳ ಪತ್ತೆಯಾಗದಿರುವುದರ ಪೈಕಿ ಮಧ್ಯ ಪ್ರದೇಶ ಮತ್ತು ಬಂಗಾಳ ರಾಜ್ಯದ ಮಕ್ಕಳು ಎಲ್ಲಕ್ಕಿಂತ ಹೆಚ್ಚಾಗಿವೆ. ಚೈಲ್ಡ್ ಹೆಲ್ಪಲೈನ್ ನಾಪತ್ತೆಯಾದ ಮಕ್ಕಳನ್ನು ಹುಡುಕುವ ಕಾರ್ಯ ಮಾಡುತ್ತದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಈ ರೀತಿ ಮಕ್ಕಳು ನಾಪತ್ತೆ ಆಗುವುದು ಪೊಲೀಸರಿಗೆ ಲಚ್ಚಾಸ್ಪದ !