ಪಾಕಿಸ್ತಾನದ ಪ್ರಧಾನ ಮಂತ್ರಿಗಳ ರಕ್ಷಣಾ ಸಹಾಯಕ ಮಲಿಕ್ ಅಹಮದ ಖಾನ್ ಇವರ ಸ್ವೀಕೃತಿ !
ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದ ಪಂಜಾಬದಲ್ಲಿ ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ಮಾಡುವುದಕ್ಕಾಗಿ ಪಾಕಿಸ್ತಾನವು ಡ್ರೋನ್ ಉಪಯೋಗಿಸುತ್ತಿದೆ, ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿಯ ರಕ್ಷಣಾ ವಿಶೇಷ ಸಹಾಯಕ ಮಲಿಕ್ ಮಹಮ್ಮದ್ ಅಹಮದ್ ಖಾನ ಇವರು ಒಪ್ಪಿಕೊಂಡಿದ್ದಾರೆ. ಅವರು ಪಾಕಿಸ್ತಾನದ ಪಂಜಾಬಿನ ಶಾಸಕರೂ ಆಗಿದ್ದಾರೆ. ಅವರು ಕಸೂರ ಘಾಟಿ ಈ ಚುನಾವಣಾ ಕ್ಷೇತ್ರವು ಭಾರತದ ಪಂಜಾಬಗಡಿಯ ಸಮೀವ ಇದೆ.
Shehbaz aide admits drones are dropping drugs in Punjab on Pak TV show@AnvitSrivastava shares more details@ridhimb | #Pakistan pic.twitter.com/DxKvduLlfr
— News18 (@CNNnews18) July 28, 2023
೧. ಪಾಕಿಸ್ತಾನಿ ಪತ್ರಕರ್ತ ಹಾಮಿದ ಮಿರ್ ಇವನು ನಡೆಸಿರುವ ಸಂದರ್ಶನದಲ್ಲಿ ಮಲಿಕ್ ಇವರು, ಇತ್ತೀಚಿನ ಎರಡು ಘಟನೆಯಲ್ಲಿ ೧೦ ಕೇಜಿ ಹೇರೈನ್ ಡ್ರೋನ್ ಗೆ ಕಟ್ಟಿ ಭಾರತಕ್ಕೆ ಕಳುಹಿಸಿದೆ. ಪಾಕಿಸ್ತಾನದಲ್ಲಿನ ನೆರೆಪೀಡಿತರಿಗೆ ಸರಕಾರದಿಂದ ಸಹಾಯ ಮಾಡದೇ ಇದ್ದರೆ ಅವರು ಕೂಡ ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ ಮಾಡಬಹುದು ಎಂದು ಹೇಳಿದರು.
೨. ಹಾಮಿದ್ ಮಿರ್ ಇವರು, ಮಲಿಕ ಅಹಮದ್ ಖಾನ್ ಇವರು ನೀಡಿರುವ ಒಪ್ಪಿಗೆ ಮಹತ್ವದ್ದಾಗಿದೆ. ಅವರು ಪಾಕಿಸ್ತಾನ ಸರಕಾರಕ್ಕೆ ಮತ್ತು ಸೈನ್ಯಕ್ಕೆ ಆಪ್ತರಾಗಿದ್ದಾರೆ. ಮಾಜಿ ಸೈನ್ಯದಳ ಪ್ರಮುಖ ಬಾಜವ ಇವರಿಗೆ ಕೂಡ ಆಪ್ತರಾಗಿದ್ದಾರೆ. ರಕ್ಷಣಾ ವ್ಯವಸ್ಥೆಯಿಂದ ಕಸೂರ ಘಾಟಿಯ ಹತ್ತಿರ ಮೊಬೈಲ್ ಸಿಗ್ನಲ್ ತಡೆಯಲಾಗಿದೆ, ಆದರೂ ಈ ಪ್ರದೇಶದಿಂದ ಮಾದಕ ಪದಾರ್ಥ ಮತ್ತು ಮದ್ಯದ ಕಳ್ಳ ಸಾಗಾಣಿಕೆ ಮಾಡಲಾಗುತ್ತದೆ. ಇಲ್ಲಿ ಮೊಬೈಲ್ ನೆಟ್ವರ್ಕ್ ಸಿಗದೇ ಇರುವುದರಿಂದ ಸ್ಥಳೀಯರಿಂದ ಖಾನ್ ಇವರನ್ನು ವಿರೋಧಿಸಲಾಗುತ್ತಿದೆ.
೩. ಭಾರತದ ಪಂಜಾಬ ಪೊಲೀಸರ ಅಂಕಿಅಂಶಗಳ ಪ್ರಕಾರ ಜುಲೈ ೨೦೨೨ ರಿಂದ ಜುಲೈ ೨೦೨೩ ಈ ಸಮಯದಲ್ಲಿ ಮಾದಕ ಪದಾರ್ಥಗಳ ಕುರಿತು ೭೯೫ ದೂರಗಳು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಮಾದಕ ಪದಾರ್ಥ ವಶಪಡಿಸಿಕೊಂಡಿರುವ ಘಟನೆ ಪಾಕಿಸ್ತಾನ ಗಡಿಗೆ ತಾಗಿರುವ ಪ್ರದೇಶದಲ್ಲಿ ನಡೆದಿವೆ. ಈ ಗಡಿಯಲ್ಲಿ ಡ್ರೋನ್ ಮೂಲಕ ಮಾದಕ ಪದಾರ್ಥಗಳ ಕಳ್ಳ ಸಾಕಾಣಿಕೆ ನಡೆಯುತ್ತದೆ. ಕಳೆದ ವರ್ಷ ೨೬೦ ಕೇಜಿ ಹೆರೈನ್, ೧೯ ಬಂದುಕಗಳು, ೩೦ ಕಾಟ್ರಿಜ್ ಮತ್ತು ೩೦ ಪಾಕಿಸ್ತಾನಿ ಡ್ರೋನ್ ವಶಪಡಿಸಿಕೊಳ್ಳಲಾಗಿದೆ.
ಸಂಪಾದಕೀಯ ನಿಲುವುಪಾಕಿಸ್ತಾನಕ್ಕೆ ಇದು ತಿಳಿದಿದ್ದರೂ ಪಾಕಿಸ್ತಾನ ಸರಕಾರ ಇದನ್ನು ತಡೆಯುವುದಿಲ್ಲ ಇದನ್ನು ತಿಳಿದುಕೊಳ್ಳಿ ! |