ಕೋಲಂಬೋ (ಶ್ರೀಲಂಕಾ) – ಭಾರತದ ಜೊತೆಗಿನ ನಮ್ಮದು ಹತ್ತಿರದ ಸಂಬಂಧವಿದೆ. ಭಾರತದ ಜೊತೆಗಿನ ದೃಢವಾದ ಸಂಬಂಧ ಶ್ರೀಲಂಕಾದ ವಿಕಾಸಕ್ಕಾಗಿ ಮಹತ್ವದ್ದಾಗಿದೆ. ಇದರಿಂದ ದೇಶಕ್ಕೆ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗುವುದು, ಎಂದು ಶ್ರೀಲಂಕಾದ ವಿದೇಶಾಂಗ ರಾಜ್ಯ ಸಚಿವ ಠರಕಾ ಬಾಲಾಸೂರ್ಯ ಇವರು ಹೇಳಿದರು. ಶ್ರೀಲಂಕಾದ ರಾಷ್ಟ್ರಪತಿ ರಾನಿಲ ವಿಕ್ರಮಸಿಂಘೆ ಇವರು ಭಾರತದ ೨ ದಿನಗಳ ಪ್ರವಾಸದ ನಂತರ ಶ್ರೀಲಂಕಾಗೆ ಹಿಂತಿರುಗಿದರು. ಅವರ ಪ್ರವಾಸದ ಬಗ್ಗೆ ಮಾಹಿತಿ ನೀಡಲು ಬಾಲಸೂರ್ಯ ಇವರು ಪತ್ರಿಕಾಗೋಷ್ಠೀ ಆಯೋಜಿಸಿದ್ದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.
ಬಾಲಾಸೂರ್ಯ ಮಾತು ಮುಂದುವರಿಸಿ, ವಿಕ್ರಮ ಸಿಂಘೆ ಇವರು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇನ್ನೂ ಕೆಲವು ಗಣ್ಯರನ್ನು ಭೇಟಿ ಮಾಡಿದರು. ಇದರಿಂದ ನೆರೆಯ ದೇಶದ ಜೊತೆಗೆ ನಮ್ಮ ಸಂಬಂಧ ಹೆಚ್ಚು ಸದೃಢವಾಗುವ ಸಾಧ್ಯತೆ ಇದೆ. ಭಾರತ ಮತ್ತು ಶ್ರೀಲಂಕಾ ಇವರಲ್ಲಿ ನೇರ ನೌಕಾ ಸೇವೆ ಹಾಗೂ ಜಾಫನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅತ್ಯಾಧುನಿಕ ಮಾಡುವುದಕ್ಕಾಗಿ ಚರ್ಚಿಸುತ್ತಿದೆ. ನಾವು ಏನಾದರೂ ಭಾರತದ ಜೊತೆಗೆ ಚರ್ಚೆ ನಡೆಸಿ ಸದ್ಯದ ಬಂದರಿನ ವಿಸ್ತಾರ ಮಾಡಿದರೆ ನಮಗೆ ಆರ್ಥಿಕ ಲಾಭ ಆಗಬಹುದು. ಶ್ರೀಲಂಕಾದಲ್ಲಿ ಗಾಳಿ, ಸೌರ ಮತ್ತು ಹಸಿರು ಶಕ್ತಿಯ ಅಭಿವೃದ್ಧಿ ಮಾಡುವುದಕ್ಕಾಗಿ ಕೂಡ ಭಾರತದ ಜೊತೆಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಸಂಪಾದಕೀಯ ನಿಲುವುಭಾರತದ ಜೊತೆಗಿನ ದೃಢವಾದ ಸಂಬಂಧ ನಿರ್ಮಾಣ ಮಾಡುವಾಗ ಚೀನಾನನ್ನು ದೂರ ಇಡುವುದು ಮತ್ತು ಶ್ರೀಲಂಕಾದಲ್ಲಿನ ತಮಿಳು ಹಿಂದುಗಳ ರಕ್ಷಣೆ ಮಹತ್ವದ್ದಾಗಿದೆ. ಶ್ರೀಲಂಕಾವು ಇದರ ಬಗ್ಗೆ ಭಾರತಕ್ಕೆ ಮನವರಿಗೆ ಮಾಡಿಕೊಡಬೇಕು. |