ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ !

ಇಂಫಾಲ (ಮಣಿಪುರ) – ಮಣಿಪುರದ ಥೋರ್ಬಂಗ್ ಮತ್ತು ಕಾಂಗ್ವೆಯಲ್ಲಿ ಹಿಂದೂ ಮೈತೇಯಿ ಸಮುದಾಯ ಮತ್ತು ಕ್ರೈಸ್ತ ಕುಕಿ ಸಮುದಾಯದ ನಡುವೆ ಮತ್ತೆ ಗುಂಡಿನ ದಾಳಿ ಹಾಗೂ ಹಿಂಸಾಚಾರ ನಡೆದಿದೆ. ಇದಕ್ಕೂ ಮೊದಲು ಜುಲೈ 26 ರಂದು ಮ್ಯಾನ್ಮಾರ್ ಗಡಿಯಲ್ಲಿ ಗುಂಡಿನ ದಾಳಿ ಮತ್ತು ಬೆಂಕಿ ಹಚ್ಚಲಾಗಿತ್ತು. ಈ ಪ್ರದೇಶದಲ್ಲಿ ಕ್ರೈಸ್ತ ಕುಕಿಗಳು ಬಹುಸಂಖ್ಯಾತರಾಗಿದ್ದಾರೆ. ಅಲ್ಲಿ ಮರುದಿನವೂ ಹಿಂಸಾಚಾರ ನಡೆಯಿತು.

1. ಹಿಂಸಾಚಾರದಿಂದಾಗಿ ಮಣಿಪುರದ ಕುಕಿ-ಜೋಮಿ ಸಮುದಾಯದ ಅಂದಾಜು 13,000 ಜನರು ಪಲಾಯನ ಮಾಡಿ ನೆರೆಯ ರಾಜ್ಯಗಳಲ್ಲಿ ಆಶ್ರಯ ಪಡೆದಿದ್ದಾರೆ. ಮಿಜೋರಾಂ ರಾಜಧಾನಿ ಐಜ್ವಾಲ್‌ನಲ್ಲಿ ಕುಕಿ ಸಮುದಾಯವನ್ನು ಬೆಂಬಲಿಸಿ ಮೆರವಣಿಗೆ ನಡೆಸಲಾಗಿತ್ತು. ಇದರಲ್ಲಿ ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಕೂಡ ಭಾಗವಹಿಸಿದ್ದರು. 50 ಸಾವಿರ ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ಹೇಳಲಾಗಿದೆ.

2. ಮಣಿಪುರದ ಮುಖ್ಯಮಂತ್ರಿ ಬಿರೇನ್ ಸಿಂಗ್ ಐಜ್ವಾಲ್‌ನಲ್ಲಿ ಕುಕಿ ಸಮುದಾಯವನ್ನು ಬೆಂಬಲಿಸುವ ಮೆರವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಿಜೋರಾಂ ಮುಖ್ಯಮಂತ್ರಿ ಝೋರಂಥಂಗಾ ಅವರು ಬೇರೆ ರಾಜ್ಯದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರು. ಇದು ಡ್ರಗ್ಸ್ ವಿರುದ್ಧ ರಾಜ್ಯ ಸರಕಾರದ ಹೋರಾಟವಾಗಿದೆ. ಮಣಿಪುರ ಸರಕಾರ ರಾಜ್ಯದಲ್ಲಿ ವಾಸಿಸುತ್ತಿರುವ ಕುಕಿ ಸಮುದಾಯದ ವಿರುದ್ಧ ಅಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳ ಮೇಲೆ ಸರಕಾರ ಕಣ್ಣಿಟ್ಟಿದೆ. ಮಣಿಪುರದ ಸಮಗ್ರತೆಯನ್ನು ಹಾಳು ಮಾಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.