ದೆಹಲಿಯಲ್ಲಿನ ಕಾನೂನುಬಾಹಿರ ಮಸೀದಿಯ ಮೇಲೆ ಕ್ರಮ ಕೈಗೊಳ್ಳಲು ದೆಹಲಿ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ

ನವ ದೆಹಲಿ – ದೆಹಲಿಯಲ್ಲಿನ ಬಾಬರ್ ರೋಡನ ಬಚ್ಚು ಶಾಹ ಮಸೀದಿ (ಬಂಗಾಲಿ ಮಾರ್ಕೆಟ್ ಮಸೀದಿ) ಮತ್ತು ಟಿಳಕ ರೈಲ್ವೆ ಸೇತುವೆ ಹತ್ತಿರದ ತಕಿಯ ಬಬ್ಬರ ಶಾಹ ಮಸೀದಿಗಳ ಮೇಲೆ ಕ್ರಮ ಕೈಗೊಳ್ಳಲು ದೆಹಲಿ ಉಚ್ಚ ನ್ಯಾಯಾಲಯ ತಡೆಆಜ್ಞೆ ನೀಡಿದೆ. ಈ ಎರಡು ಮಸೀದಿ ಕಾನೂನಬಾಹಿರ ಇರುವುದೆಂದು ಅವರಿಗೆ ೧೫ ದಿನದಲ್ಲಿ ಸ್ಥಳ ಖಾಲಿ ಮಾಡುವುದಕ್ಕೆ ರೈಲ್ವೆ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಇದರ ವಿರುದ್ಧ ವಕ್ಟ್ ಬೋರ್ಡ್ ನಿಂದ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.