‘ರಾಜ್ಯದಲ್ಲಿ ನಡೆದ ಗಲಭೆಯಲ್ಲಿ ಅಮಾಯಕ ಆರೋಪಿಗಳ ಮೇಲಿನ ಆರೋಪಗಳನ್ನು ಹಿಂಪಡೆಯಿರಿ !’

ಆಡಳಿತಕ್ಕೆ ಗೃಹಸಚಿವ ಪರಮೇಶ್ವರ ಅವರ ಸೂಚನೆ

ಬೆಂಗಳೂರು – ರಾಜ್ಯದ ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಮುಂತಾದೆಡೆ ಕಳೆದ ಕೆಲವು ವರ್ಷಗಳಿಂದ ನಡೆದ ಗಲಭೆಯಲ್ಲಿ ಅಮಾಯಕ ಯುವಕರು, ವಿದ್ಯಾರ್ಥಿಗಳು ಸುಳ್ಳು ಪ್ರಕರಣಗಳಲ್ಲಿ ಬಂಧಿತರಾಗಿದ್ದು ಸದರಿ ಮೊಕದ್ದಮೆಯನ್ನು ಮರುಪರಿಶೀಲಿಸಿ ನಿಯಮಾನುಸಾರ ಹಿಂಪಡೆದು ಕ್ರಮಕೈಗೊಳ್ಳುವಂತೆ ಗೃಹ ಸಚಿವ ಪರಮೇಶ್ವರ ಅವರು ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಶಾಸಕ ತನ್ವೀರ ಸೇಠ ಅವರು ಈ ಬಗ್ಗೆ ಮನವಿ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

ಮುಸ್ಲಿಮರ ಓಲೈಕೆಯ ಪ್ರಯತ್ನ ! – ಭಾಜಪದ ಟೀಕೆ

ಭಾಜಪದ ಮುಖಂಡ ಬಸನಗೌಡ ಪಾಟೀಲ(ಯತ್ನಾಳ) ಅವರು ಈ ಕುರಿತು ಟ್ವೀಟ್ ಮಾಡುತ್ತಾ, ಈ ಆರೋಪಿಗಳು ಪೋಲೀಸರ ವಿರುದ್ಧ ಕಲ್ಲು ತೂರಿರುವವರು, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರು ಹಾಗು ಗಲಭೆ ನಡೆಸಿದವರು ಇದ್ದಾರೆ. ಹಿಂದೆ ಇವರದ್ದೇ ಸರಕಾರ PFI ಗೂಂಡಾಗಳು ವಿರುದ್ಧ ಕೇಸುಗಳನ್ನು ವಾಪಸ್ ಪಡೆದು ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಲು ಪ್ರಚೋದನೆ ನೀಡಿದ್ದರು’ ಎಂದು ಟೀಕಿಸಿದರು.

ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ಸರಕಾರ ಇದರಲ್ಲಿ ಮೂಗು ತೂರಿಸಬಾರದು ! – ಹಿಂದೂ ಜನಜಾಗೃತಿ ಸಮಿತಿ

‘ಈ ಗಲಭೆಗಳ ಹಿಂದೆ ಮತಾಂಧ ಶಕ್ತಿಗಳ ಕೈವಾಡವಿದ್ದು, ಪ್ರಾಮಾಣಿಕ ನ್ಯಾಯಾಂಗ ತನಿಖೆ ನಡೆದು ನ್ಯಾಯಾಲಯದ ಪ್ರಕ್ರಿಯೆ ಮುಗಿದು ಅಪರಾಧಿಗಳಿಗೆ ಶಿಕ್ಷೆಯಾಗುವವರೆಗೆ ರಾಜ್ಯ ಸರಕಾರ ಈ ಪ್ರಕರಣದಲ್ಲಿ ಮೂಗು ತೂರಿಸಬಾರದು’, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಅವರು ಟ್ವೀಟ್ ಮಾಡಿದ್ದಾರೆ.

ಸಂಪಾದಕೀಯ ನಿಲುವು

  • ಕರ್ನಾಟಕದಲ್ಲಿ ನಡೆದ ಗಲಭೆಗಳನ್ನು ಮತಾಂಧರು ಮಾಡಿದ್ದಾರೆ ಮತ್ತು ಅದಕ್ಕಾಗಿಯೇ ಅವರ ಮೇಲೆ ದೂರು ದಾಖಲಿಸಿ ಅವರನ್ನು ಬಂಧಿಸಲಾಗಿದೆ. ಆದರೆ ಈಗ ಸರಕಾರ ಇಂತಹ ಸೂಚನೆಗಳನ್ನು ನೀಡಿ ಏನು ಹೇಳಲು ಬಯಸುತ್ತದೆ ?
  • ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸಲ್ಮಾನರ ಓಲೈಕೆಗಾಗಿ ಜಾತ್ಯತೀತತೆ.
  • ಜನರೇನು ಹೇಳುತ್ತಾರೆ? ಹಿಂದೂಗಳು ಏನು ಹೇಳುತ್ತಾರೆ? ಇದರ ಬಗ್ಗೆ ಯೋಚಿಸದೆ ನೇರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ; ಆದರೆ ಯಾವ ರಾಜಕೀಯ ಪಕ್ಷವೂ ಹಿಂದೂಗಳ ಪರವಾಗಿ ನೇರ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಇದು ಹಿಂದೂಗಳ ದೌರ್ಭಾಗ್ಯ !