ಇಬ್ಬರೂ ಇಸಿಸ್ ನ ಅಲ್ ಸುಫಾ ಸಂಘಟನೆಯ ಜೊತೆ ಸಂಬಂಧ !
ಪುಣೆ – ಕೊಥರುಡ್ ಪೊಲೀಸರು ಬಂಧಿಸಿರುವ ೨ ಭಯೋತ್ಪಾದಕರು ಪುಣೆ, ಸಾತಾರಾ ಮತ್ತು ಕೊಲ್ಲಾಪುರದ ಅರಣ್ಯದಲ್ಲಿ ಬಾಂಬ್ ಸ್ಪೋಟದ ಪರೀಕ್ಷಣೆ ನಡೆಸಿರುವುದು ಉಗ್ರ ನಿಗ್ರಹ ದಳದಿಂದ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿರುವ ವರದಿಯಿಂದ ಸ್ಪಷ್ಟವಾಗಿದೆ. ಇಬ್ಬರೂ ಭಯೋತ್ಪಾದಕರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಹಾಜರಪಡಿಸಲಾಯಿತು. ಅವರಿಗೆ ಸತ್ರ ನ್ಯಾಯಾಧೀಶ ಎಸ್.ವಿ. ಕಚರೇ ಇವರ ನ್ಯಾಯಾಲಯದಿಂದ ಆಗಸ್ಟ್ ೫ ರ ವರೆಗೆ ಪೊಲೀಸ ಕಸ್ಟಡಿ ವಿಧಿಸಿದೆ. ಇಬ್ಬರೂ ಇಸಿಸ್ ನ ಅಲ್ ಸೂಫಾ ಸಂಘಟನೆಗೆ ಸಂಬಂಧ ಪಟ್ಟವರಾಗಿದ್ದು ದೇಶ ವಿರೋಧಿ ಕಾರ್ಯಾಚರಣೆ ನಡೆಸುವ ಉದ್ದೇಶವಾಗಿತ್ತು. ೪೩೬ ಪುಟಗಳ ತನಿಖಾ ವರದಿ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಗಿದೆ. ಉಗ್ರ ನಿಗ್ರಹ ದಳದಿಂದ ಇಬ್ಬರು ಆರೋಪಿಯ ಮನೆಯ ಪರಿಶೀಲನೆ ನಡೆದಾಗ ವಿವಿಧ ವಸ್ತುಗಳು ದೊರೆತಿವೆ. ಅದರಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಜೊತೆಗೆ ಬಿಳಿಯ ಪೌಡರ್ ದೊರೆತಿದ್ದು. ಈ ಪೌಡರ್ ಸ್ಪೋಟಕ ಇರುವುದು ಎಂದು ಎಕ್ಸ್ಪ್ಲೋಸಿವ್ ವೇಪರ್ ಡಿಟೆಕ್ಟರ್’ನಲ್ಲಿ ಸ್ಪಷ್ಟವಾಗಿದೆ ಜೊತೆಗೆ ಪೊಲೀಸರ ‘ಡಾಗ್ ಸ್ಕಾಡ್’ ಕೂಡ ಇದರ ಬಗ್ಗೆ ‘ಪಾಸಿಟಿವ್ ರಿಪೋರ್ಟ್’ ನೀಡಿದೆ. ಈ ಪೌಡರ್ ನಿಖರವಾಗಿ ಯಾವ ಸ್ಪೋಟಕವಾಗಿದೆ ? ಇದಕ್ಕಾಗಿ ವಿಧಿವಿಜ್ಞಾನ ಪ್ರಯೋಗ ಶಾಲೆಯಲ್ಲಿ ಪರಿಶೀಲನೆಗಾಗಿ ಕಳುಹಿಸಲಾಗಿದ್ದು ವರದಿ ಬರುವುದು ಬಾಕಿ ಇದೆ.
Two men with terror links held in Pune were trained in various methods of terror attacks and had conducted bomb tests in the jungles of Pune, Kolhapur and Satara districts. https://t.co/Nyys6vRamS
— Pune City Life (@PuneCityLife) July 26, 2023
‘ಲಷ್ಕರ-ಎ-ತೊಯ್ಬ’ ದ ಕುಖ್ಯಾತ ಭಯೋತ್ಪಾದಕ ಫಯಾಜ್ ಕಾಝಿ ಇವನ ಬೆಂಬಲಿಗರಾಗಿದ್ದರು !
ಇಮ್ರಾನ್ ಖಾನ್ ಮತ್ತು ಮಹಮ್ಮದ್ ಸಾಕಿ ಈ ಇಬ್ಬರು ಭಯೋತ್ಪಾದಕರು ‘ಲಷ್ಕರ-ಎ-ತೋಯ್ಬ’ ದ ಕುಖ್ಯಾತ ಭಯೋತ್ಪಾದಕ ಹಾಗೂ ೨೦೧೬ ರಲ್ಲಿ ಮದಿನಾದಲ್ಲಿ ಆತ್ಮಾಹುತಿ ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದ ಕಮಾಂಡರ್ ಫೈಯಾಜ್ ಕಾಝಿ ಇವನ ಬೆಂಬಲಿಗರಾಗಿದ್ದರು ಎಂದು ಪೊಲೀಸರು ವಶಪಡಿಸಿಕೊಂಡಿರುವ ಲ್ಯಾಪ್ಟಾಪ್ ನಲ್ಲಿನ ಮಾಹಿತಿಯಿಂದ ಬೆಳಕಿಗೆ ಬಂದಿದೆ. ಕಾಝಿ ಮಹಾರಾಷ್ಟ್ರ ಸಹಿತ ದೇಶದ ವಿವಿಧ ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಕಾಝಿ ಗುಜರಾತ ಗಲಭೆಯ ವಿಡಿಯೋ ತೋರಿಸಿ ಯುವಕರನ್ನು ಕಟ್ಟರವಾದಿಗಳನಾಗಿ ಮಾಡುತ್ತಿದ್ದನು. ಎಲ್. ಈ. ಟಿ. ಯಲ್ಲಿ ಭಾಗಿಯಾಗಿರುವ ಕಾಝಿಯು ೨೦೦೬ ರ ಸಂಭಾಜಿನಗರ ಶಸ್ತ್ರಾಸ್ತ್ರ ಸಂಗ್ರಹದ ಪ್ರಕರಣ, ಪುಣೆಯಲ್ಲಿನ ೨೦೧೦ರ ಜರ್ಮನ್ ಬೇಕರಿ ಮತ್ತು ಅಲ್ಲಿಯ ಜೆ.ಎಂ. ರೋಡ್ ಸರಣಿ ಬಾಂಬ್ ಸ್ಪೋಟದ ಪ್ರಕರಣದಲ್ಲಿ ಮಹತ್ವದ ಪಾತ್ರವಹಿಸಿದ್ದನು. ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯಲ್ಲಿನ ಭಯೋತ್ಪಾದಕ ಅಬು ಜುಂದಾಲ್ ಸಹಿತ ಭಾರತದಿಂದ ಭಯೋತ್ಪಾದಕರನ್ನು ನೇಮಿಸಿದ್ದನು. ‘ಇಂಡಿಯನ್ ಮುಜಾಹಿದ್ದಿನ’ನ ಸಂಸ್ಥಾಪಕ ಯಾಸೀನ್ ಭಟ್ಕಳ ಇವನ ಸಂಪರ್ಕದಲ್ಲಿದ್ದನು.