ನವ ದೆಹಲಿ – ರಾಜಸ್ಥಾನದ ಭಿವಾಡಿಯ ವಿವಾಹಿತ ಕ್ರೈಸ್ತ ಮಹಿಳೆ ಅಂಜೂ ಪಾಕಿಸ್ತಾನಕ್ಕೆ ಹೋಗಿ ತನ್ನ ಪ್ರಿಯಕರನೊಂದಿಗೆ ವಿವಾಹವಾಗಿದ್ದಾಳೆ. ಅವಳು ಮುಸ್ಲಿಂ ಧರ್ಮವನ್ನು ಸ್ವೀಕರಿಸಿದ್ದಾಳೆ. ವಿಶೇಷವೆಂದರೆ ಅಂಜೂ ಹಿಂದೂ ಆಗಿದ್ದಳು ಮತ್ತು ಬಳಿಕ ಅವಳು ಕ್ರೈಸ್ತ ಆಗಿದ್ದಳು. ಈ ಪ್ರಕರಣದ ಕುರಿತು ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರಳನ್ನು ಪ್ರಶ್ನಿಸಿದಾಗ ಅಂಜೂ ಭಾರತದಲ್ಲಿ ವಾಸಿಸುತ್ತಿದ್ದಳು. ಭಾರತ ಎಂತಹ ದೇಶವೆಂದರೆ ಇಲ್ಲಿ ಜನರು ಏನು ಬೇಕಾದರೂ ಮಾಡಬಹುದು ಏಕೆಂದರೆ ಅವರಿಗೆ ಹಾಗೆ ಮಾಡುವ ಸ್ವಾತಂತ್ರ್ಯವಿದೆ. ಪಾಕಿಸ್ತಾನ ಎಂತಹ ದೇಶವೆಂದರೆ ಅಲ್ಲಿ ನಾನು ದೇಶವನ್ನು ಬಿಡುವವಳಿದ್ದೇನೆ ಎನ್ನುವ ವಿಷಯ ತಿಳಿದಿದ್ದರೆ, ನನ್ನೊಂದಿಗೆ ಏನು ಬೇಕಾದರೂ ನಡೆಯಬಹುದಿತ್ತು. ಹೈದರನಿಗೆ (ಸೀಮಾಳ ಪತಿ) ನಾನು ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದೇನೆಂದು ತಿಳಿದಿದ್ದರೆ, ಅವನು ನನ್ನ ಹತ್ಯೆ ಮಾಡುತ್ತಿದ್ದನು ಎಂದು ಹೇಳಿದಳು.
ಸೀಮಾಗೆ ಭಾರತ ಮತ್ತು ಪಾಕಿಸ್ತಾನದಲ್ಲಿ ಮಹಿಳೆಯರೊಂದಿಗೆ ವರ್ತಿಸುವ ಬಗ್ಗೆ ಕೇಳಿದಾಗ, ಪಾಕಿಸ್ತಾನದ ಸಿಂಧ್ ಮತ್ತು ಬಲೂಚಿಸ್ತಾನದಲ್ಲಿ ಮಹಿಳೆಯರಿಗೆ ಸ್ವಲ್ಪವೂ ಗೌರವವಿಲ್ಲವೆಂದು ಹೇಳಿದಳು. ಸಿಂಧ್ ನಲ್ಲಿ ನನ್ನ ವಯಸ್ಸಿನ ಒಬ್ಬಳೂ ವಿದ್ಯಾವಂತ ಮಹಿಳೆಯಿಲ್ಲ. ಅಪ್ಪಿತಪ್ಪಿ ಮಹಿಳೆಯ ಸೆರಗು ತಲೆಯಿಂದ ಕೆಳಗಿಳಿದರೆ, ಅವಳನ್ನು ನಿಂದಿಸಲಾಗುತ್ತದೆ. ಸಿಂಧ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಲ್ಲಿ ಮಹಿಳೆಯರಿಗೆ ಅತ್ಯಂತ ಕಠಿಣ ನಿಯಮಗಳಿವೆ. ನಮಗೆ ಬುರಖಾ ಧರಿಸಬೇಕಾಗುತ್ತದೆ. ಆದರೆ ಭಾರತದಲ್ಲಿ ಆ ಸ್ಥಿತಿಯಿಲ್ಲ. ಭಾರತದಲ್ಲಿ ಮಹಿಳೆಯರಿಗೆ ಬಹಳ ಗೌರವ ನೀಡಲಾಗುತ್ತದೆ. ನಾನು ಭಾರತಕ್ಕೆ ಬಂದಾಗಿನಿಂದ ನನ್ನನ್ನೂ ಗೌರವದಿಂದ ನಡೆಸಿಕೊಳ್ಳಲಾಗಿದೆ ಎಂದು ಹೇಳಿದ್ದಾಳೆ.