ಶಿಕ್ಷಕ ನಫೀಸ್ ಮಹಮ್ಮದ್ ನಿಂದ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ : ಮತಾಂತರಕ್ಕೆ ಒತ್ತಡ

ಡೆಹರಾಡೂನ್ (ಉತ್ತರಾಖಂಡ) – ಉಧಮಸಿಂಹನಗರ ಜಿಲ್ಲೆಯ ಖಾತಿಮಾದಲ್ಲಿನ ಸರಕಾರಿ ಉಚ್ಚಮಾಧ್ಯಮಿಕ ಶಾಲೆಯ ಶಿಕ್ಷಕ ನಫೀಸ್ ಮಹಮ್ಮದ್ ಮೇಲೆ ಹಿಂದೂ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪವಿದೆ. (ಇಂತಹ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಯಾವ ನೈತಿಕ ಶಿಕ್ಷಣ ನೀಡುವರು ? – ಸಂಪಾದಕರು) ಆರೋಪಿ ಶಿಕ್ಷಕನ ಮೇಲೆ ಕ್ರಮ ಕೈಗೊಳ್ಳದೆ ಇರುವುದರಿಂದ ಆಕ್ರೋಶಗೊಂಡಿರುವ ಸಂಬಂಧಿಕರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದರು. (ಇಂತಹ ಕಾಮುಕ ಶಿಕ್ಷಕರಿಗೆ ಶಿಕ್ಷೆ ಆಗದಿರುವುದು ಸರಕಾರ ಮತ್ತು ಪೊಲೀಸರಿಗೆ ನಾಚಿಕೆಗೇಡು ! – ಸಂಪಾದಕರು) ಆರೋಪಿ ಶಿಕ್ಷಕನ ಮೇಲೆ ಎರಡು ತಿಂಗಳ ಹಿಂದೆ ಕೂಡ ಒಬ್ಬ ಹುಡುಗಿಯನ್ನು ಶೋಷಣೆ ಮಾಡಿರುವ ಆರೋಪ ಮಾಡಲಾಗಿತ್ತು ; ಆದರೆ ಅದರ ನಂತರ ಮುಖ್ಯೋಪಾಧ್ಯಾಯರು ಕ್ರಮ ಕೈಗೊಳ್ಳುವ ಬದಲು ಸಂತ್ರಸ್ತ ಹುಡುಗಿಯ ಮೇಲೆ ಒತ್ತಡ ತಂದು ಪ್ರಕರಣ ಮುಚ್ಚಿ ಹಾಕಿದರು. (ಇಂತಹ ಮುಖ್ಯೋಪಾಧ್ಯಾಯರ ಮೇಲೆ ಕೂಡ ಕಠಿಣ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)

ಪ್ರಸಾರ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ, ವಿದ್ಯಾರ್ಥಿನಿಯರ ಆರೋಪದ ನಂತರ ಅವರ ಸಂಬಂಧಿಕರು ಮುಖ್ಯೋಪಾಧ್ಯಾಯರನ್ನು ಭೇಟಿ ಮಾಡಿ ಆರೋಪಿ ಶಿಕ್ಷಕ ನಫೀಸ್ ಮಹಮ್ಮದ್ ನ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು ; ಆದರೆ ಅದರ ನಂತರ ಕೂಡ ಮುಖ್ಯೋಪಾಧ್ಯಾಯರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಆಕ್ರೋಶಗೊಂಡಿರುವ ಕುಟುಂಬದವರು ಮತ್ತು ಪೋಷಕ ಶಿಕ್ಷಕ ಸಂಘಟನೆಯರು ಸೇರಿ ಶಾಲೆಗೆ ಮುತ್ತಿಗೆ ಹಾಕಿದರು. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ಸಂತ್ರಸ್ತ ವಿದ್ಯಾರ್ಥಿನಿಯ ವತಿಯಿಂದ ಪೊಲೀಸರಲ್ಲಿ ದೂರು ಸಲ್ಲಿಸಲಾಯಿತು. ಈ ದೂರಿನಲ್ಲಿ ಶಿಕ್ಷಕ ನಫಿಸ್ ಮಹಮ್ಮದ್ ಇವನ ಮೇಲೆ ಹುಡುಗಿಯರನ್ನು ಒಬ್ಬಂಟಿಯಾಗಿ ಕರೆದು ಅವರ ಮೇಲೆ ದೌರ್ಜನ್ಯ ಮಾಡುವುದು, ಮತಾಂತರಕ್ಕಾಗಿ ಒತ್ತಡ ಹೇರುವುದು, ಅನುತ್ತಿರ್ಣ ಗೊಳಿಸುವ ಬೆದರಿಕೆ ನೀಡುವುದು ಮಾತ್ರವಲ್ಲ ಜೊತೆಗೆ ಇನ್ನೂ ಅನೇಕ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ .