ಕಾವಡ ಯಾತ್ರಿಕರನ್ನು ಹತ್ಯೆ ಮಾಡುವಂತೆ ಅಲ್ವಿ ಕರೆ ನೀಡಿದ ಬಳಿಕ ಕಲ್ಲು ತೂರಾಟ ಪ್ರಾರಂಭ !
ಬರೇಲಿ (ಉತ್ತರಪ್ರದೇಶ) – ಇಲ್ಲಿನ ವನಖಂಡಿ ದೇವಸ್ಥಾನದ ಮೊದಲು ಒಂದು ಮಸೀದಿಯ ಹತ್ತಿರ ಕಾವಡ ಯಾತ್ರಿಕರ ಮೇಲೆ ದೊಡ್ಡ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಯಿತು. ಈ ಪ್ರಕರಣದಲ್ಲಿ ಪೊಲೀಸರು ಉಸ್ಮಾನ ಅಲ್ವಿ, ಮಸೀದಿಯ ಮೌಲಾನಾ (ಇಸ್ಲಾಂನ ವಿದ್ವಾಂಸ) ಮತ್ತು ಅವನ ಪುತ್ರ ಸಲೀಂ ಶಾಹ, ಛೋಟೆ ಶಾಹ, ಮಮ್ಮಾ ಢೋಲ, ರಾಶೀದ್ ಮುಖಬಿರ್, ವಾಹಿದ್, ಚಾಂದ್ ಮಹಮ್ಮದ, ಗುಡ್ಡು, ಸರದಾರ ಶಾಹ, ಭೂರಾ ಮತ್ತು ಇತರೆ 150 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ ಉಸ್ಮಾನ ಅಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ಇಲ್ಲಿನ ಮಾಜಿ ನಗರಸೇವಕನಾಗಿದ್ದಾನೆ. ಈ ಕಲ್ಲು ತೂರಾಟದಲ್ಲಿ ಮಹಿಳೆಯರು ಸೇರಿದಂತೆ ಕಾವಡ ಯಾತ್ರಿಕರು ಗಾಯಗೊಂಡಿದ್ದಾರೆ. ವಿಶೇಷವೆಂದರೆ ಈ ಘಟನೆ ನಡೆದಾಗ, ಪೊಲೀಸರು ಅಲ್ಲಿಯೇ ಉಪಸ್ಥಿತರಿದ್ದರು.
ಕಾವಡ ಯಾತ್ರಿಕರು ನೀಡಿದ ದೂರಿನಲ್ಲಿ, ಮಸೀದಿಯ ಹತ್ತಿರದಿಂದ ಹೋಗುತ್ತಿರುವಾಗ ಉಸ್ಮಾನ ಅಲ್ವಿ ಏರು ಧ್ವನಿಯಲ್ಲಿ `ಈ ಜನರನ್ನು ಕೊಲ್ಲಿರಿ’ ಎಂದು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದನು. ತದನಂತರ ಮಸೀದಿಯ ಮೇಲ್ಛಾವಣಿಯಿಂದ ಕಲ್ಲು ತೂರಾಟ ನಡೆಸಿದರು ಎಂದು ಹೇಳಿದ್ದಾರೆ.
(ಸೌಜನ್ಯ : Dastak Times )
ಗುಲಾಲ ಹಾರಿಸಿದಕ್ಕೆ ಮುಸಲ್ಮಾನರಿಂದ ಕಲ್ಲು ತೂರಾಟ !
ಮುಸಲ್ಮಾನರು, ಕಾವಡ ಯಾತ್ರಿಕರ ಮೆರವಣಿಗೆಯಲ್ಲಿ ಚಿತ್ರರಥವಿತ್ತು ಮತ್ತು ಅಲ್ಲಿ ಗುಲಾಲ ಎರಚಲಾಗುತ್ತಿತ್ತು. ಅಲ್ಲಿ ಒಂದು ಫ್ಯಾನ್ ಇತ್ತು. ಚಿತ್ರರಥ ಮಸೀದಿಯ ಹತ್ತಿರ ಬಂದಾಗ ಫ್ಯಾನ್ ದಿಕ್ಕನ್ನು ಮಸೀದಿಯ ಕಡೆಗೆ ತಿರುಗಿಸಲಾಯಿತು. ಇದರಿಂದ ಫ್ಯಾನಿನ ಗಾಳಿಯಿಂದ ಗುಲಾಲ ಮಸೀದಿಯ ಹತ್ತಿರ ನಿಂತಿದ್ದ ಜನರ ಮೇಲೆ ಹಾರಿತು ಮತ್ತು ವಿವಾದ ನಡೆದು ಕಲ್ಲು ತೂರಾಟ ನಡೆಯಿತು ಎಂದು ದಾವೆ ಮಾಡಿದ್ದಾರೆ. (ಕೇವಲ ಗುಲಾಲ ಹಾರಿದ್ದರಿಂದ ಹಿಂದೂಗಳ ಧಾರ್ಮಿಕ ಯಾತ್ರೆಯ ಮೇಲೆ ದಾಳಿ ನಡೆಸಲಾಗುತ್ತದೆ; ಆದರೆ ದಿನದಲ್ಲಿ 5 ಸಲ ಮಸೀದಿಯಿಂದ `ಅಲ್ಲಾಗಿಂತ ಯಾರೂ ದೊಡ್ಡವರಲ್ಲ’ ಎನ್ನುವ ಕರ್ಕಶ ಧ್ವನಿಯಲ್ಲಿ ಹೇಳಲಾಗುವ ವಿಷಯದಲ್ಲಿ ಇತರೆ ಧರ್ಮೀಯರು ಮೌನವಾಗಿರುತ್ತಾರೆ. ಇದನ್ನು ಜಾತ್ಯತೀತವಾದಿಗಳು ಯಾವಾಗ ಗಮನಿಸುವರು ?-ಸಂಪಾದಕರು)
ಸಂಪಾದಕರ ನಿಲುವು* ಮಣಿಪುರದ ಘಟನೆಯ ಬಗ್ಗೆ ಮಾತನಾಡುವ ರಾಜಕೀಯ ಪಕ್ಷಗಳು ಬರೇಲಿಯಲ್ಲಿ ನಡೆದ ಘಟನೆಯ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಇಲ್ಲಿ ಹಲ್ಲೆಗೊಳಗಾದವರು ಹಿಂದೂಗಳು ಮತ್ತು ಹಲ್ಲೆ ಮಾಡಿದವರು ಮುಸಲ್ಮಾನರಾಗಿರುವುದರಿಂದಲೇ ಅವರು ಮೌನ ತಾಳಿದ್ದಾರೆ. ಒಂದು ವೇಳೆ ಇದರ ವಿರುದ್ಧವಾಗಿ ನಡೆದಿದ್ದರೆ, ರಾಜಕೀಯ ಪಕ್ಷಗಳು ಮುಗಿಬೀಳುತ್ತಿದ್ದವು ! * ಕಲ್ಲು ತೂರಾಟ ಮಾಡುವ ಮಸೀದಿಗಳ ಮೇಲೆ ಉತ್ತರ ಪ್ರದೇಶ ಸರಕಾರ ಬುಲ್ಡೋಜರ ಮೂಲಕ ಕ್ರಮ ಜರುಗಿಸುವುದೇ ? ಎದು ಕಾನೂನು ಪ್ರೇಮಿ ಜನರು ಪ್ರಶ್ನೆ ಕೇಳಿದರೆ ಆಶ್ಚರ್ಯ ಪಡಬಾರದು ! * ಭಕ್ತಿಯ ಬದಲು ಶಕ್ತಿ ಪ್ರದರ್ಶಿಸುವ ದೇವಸ್ಥಾನಗಳನ್ನು ಮುಚ್ಚುವಂತೆ ನ್ಯಾಯಾಂಗದಿಂದ ಆದೇಶಿಸಲಾಗುತ್ತದೆ, ಆದರೆ ನಿಜವಾದ ಅರ್ಥದಿಂದ ಎಲ್ಲಿ ಹಿಂಸೆಯನ್ನು ನಡೆಸಲಾಗುತ್ತಿದೆಯೋ ಆ ಪ್ರಾರ್ಥನಾ ಸ್ಥಳಗಳನ್ನು ನಿಷೇಧಿಸುವ ಕುರಿತು ಯಾರೂ ಯಾವತ್ತೂ ಏಕೆ ಮಾತನಾಡುವುದಿಲ್ಲ ? |