ದೇಶದಲ್ಲಿನ ಎಲ್ಲಾ ದೇವಸ್ಥಾನಗಳ ಒಗ್ಗೂಡುವಿಕೆ ದೇಶವನ್ನು ಸಮೃದ್ಧಗೊಳಿಸಬಹುದು ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ವಾರಾಯಣಸಿಯಲ್ಲಿ ೩೦ ದೇಶಗಳ ೧ ಸಾವಿರದ ೬೦೦ ದೇವಸ್ಥಾನಗಳ ಪದಾಧಿಕಾರಿಗಳ ಮಹಾಸಮ್ಮೇಳನ !

ವಾರಣಾಸಿ (ಉತ್ತರಪ್ರದೇಶ ) – ಇಲ್ಲಿ ಜುಲೈ ೨೨ ರಿಂದ ೩೦ ದೇಶಗಳಲ್ಲಿನ ೧ ಸಾವಿರ ೬೦೦ ದೇವಸ್ಥಾನಗಳ ಪದಾಧಿಕಾರಿಗಳ ಮಹಾಸಮ್ಮೇಳನ ಆರಂಭವಾಗಿದೆ. ಇಲ್ಲಿಯ ‘ರುದ್ರಾಕ್ಷ ಕನ್ವೆನ್ಷನ್ ಸೆಂಟರ್’ ನಲ್ಲಿ ಈ ಮಹಾಸಮ್ಮೇಳನ ಆಯೋಜಿಸಲಾಗಿದೆ. ಪ. ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರು ಉದ್ಘಾಟನೆ ಮಾಡಿದರು. ‘ದೇವಸ್ಥಾನಗಳಿಂದ ಶಿಕ್ಷಣ, ಸಂಸ್ಕಾರ, ಸೇವಾಭಾವ ಮತ್ತು ಪ್ರೇರಣೆ ದೊರೆಯಬೇಕು. ಇಲ್ಲಿ ಜನರ ದುಃಖ ದೂರಗೊಳಿಸುವ ವ್ಯವಸ್ಥೆ ಆಗಬೇಕು. ಎಲ್ಲ ಸಮಾಜದ ಕಾಳಜಿ ವಹಿಸುವವರು ದೇವಸ್ಥಾನದಲ್ಲಿ ಇರಬೇಕು.

ದೇಶದಲ್ಲಿನ ಎಲ್ಲಾ ದೇವಸ್ಥಾನಗಳನ್ನು ಒಗ್ಗೂಡಿಸಿ ಸಮಾಜವನ್ನು ಜೋಡಿಸಬಹುದು, ದೇಶವನ್ನು ಸಮೃದ್ಧ ಗೊಳಿಸಬಹುದು’, ಎಂದು ಸರಸಂಘಚಾಲಕರು ಪ್ರತಿಪಾದಿಸಿದರು. ಈ ಸಮಯದಲ್ಲಿ ಕೇಂದ್ರ ಸಚಿವ ಶ್ರೀ. ಅಶ್ವಿನಿ ಕುಮಾರ ಚೌಬೆ ಇವರು ಕೂಡ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಸಮಯದಲ್ಲಿ ಪ್ರಧಾನಮಂತ್ರಿ ಮೋದಿ ಇವರ ಸಂದೇಶ ಓದಲಾಯಿತು. ‘ಎಲ್ಲಾ ದೇವಸ್ಥಾನಗಳು ಒಟ್ಟಾಗಿ ಸೇರಿದರೆ, ‘ಒಂದು ಭಾರತ-ಶ್ರೇಷ್ಠ ಭಾರತ’ ಈ ಕನಸು ಸಾಕಾರಗೊಳಿಸಲು ಸಾಧ್ಯವಾಗಬಹುದು’, ಎಂದು ಪ್ರಧಾನಮಂತ್ರಿ ಮೋದಿ ಇವರು ಹೇಳಿದರು. ಈ ಸಮ್ಮೇಳನಕ್ಕೆ ತಿರುಪತಿ ದೇವಸ್ಥಾನದ ಮುಖ್ಯ ಕಾರ್ಯಕಾರಿ ಅಧಿಕಾರಿ ಎ.ವ್ಹಿ. ಧರ್ಮಾ ರೆಡ್ಡಿ, ಪಂಡರಪುರದ ವಿಠಲ ದೇವಸ್ಥಾನದ ಉಪಾಧ್ಯಕ್ಷ ಗಹಿನಿನಾಥ ಮಹರಾಜ ಹಾಗೂ ಇಸ್ಕಾನ್ ದೇವಸ್ಥಾನದ ಗೌರಂಗ ದಾಸ ಪ್ರಭು ಮತ್ತು ವಿಶ್ವ ಹಿಂದೂ ಪರಿಷತ್ತಿನ ಅಂತರಾಷ್ಟ್ರೀಯ ಮಹಾ ಸಚಿವ ಮಿಲಿಂದ ಪರಾಂಡೆ ಇವರು ಮಾರ್ಗದರ್ಶನ ಮಾಡಲಿದ್ದಾರೆ.

ಪ.ಪೂ. ಸರಸಂಘಚಾಲಕರು ತಮ್ಮ ಮಾರ್ಗದರ್ಶನದಲ್ಲಿ ಮಂಡಿಸಿರುವ ಅಂಶಗಳು

೧ .ದೇವಸ್ಥಾನಗಳು ನಮ್ಮ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಸಂಪೂರ್ಣ ಸಮಾಜವನ್ನು ಒಂದು ಧೇಯ್ಯದಿಂದ ಮುಂದೆ ಕೊಂಡೊಯ್ಯುವುದಕ್ಕಾಗಿ ಮಠಗಳು ಮತ್ತು ದೇವಸ್ಥಾನಗಳ ಅವಶ್ಯಕತೆ ಇದೆ.

೨. ದೇವಸ್ಥಾನಗಳನ್ನು ಹೊಸ ಪೀಳಿಗೆ ಹೇಗೆ ನಿರ್ವಹಿಸಬೇಕು. ಅದಕ್ಕಾಗಿ ಅವರಿಗೆ ಪ್ರಶಿಕ್ಷಣ ನೀಡಬೇಕು.

೩. ದೇವಸ್ಥಾನಗಳು ಪಾವಿತ್ರದ ಆಧಾರವಾಗಿದೆ. ಅದರ ಸ್ವಚ್ಛತೆಯ ಕಡೆಗೆ ಗಮನ ನೀಡಬೇಕು. ಗುರುದ್ವಾರಗಳಲ್ಲಿ ಹೋಗುವ ಮೊದಲು ಕೈಕಾಲುಗಳನ್ನು ತೊಳೆಯಬೇಕಾಗುತ್ತದೆ; ಆದರೆ ದೇವಸ್ಥಾನದಲ್ಲಿ ಹಾಗೆ ಮಾಡುವುದಿಲ್ಲ. ನಮಗೆ ದೇವಸ್ಥಾನಗಳ ಸ್ವಚ್ಛತೆಗಾಗಿ ಎಲ್ಲವೂ ಮಾಡಬೇಕಿದೆ.

೪. ನಮ್ಮ ಓಣಿಗಳಲ್ಲಿ ಇರುವ ಚಿಕ್ಕ ದೇವಸ್ಥಾನಗಳ ಪಟ್ಟಿಯನ್ನು ಮಾಡಬೇಕು. ಅಲ್ಲಿ ಪ್ರತಿದಿನ ಪೂಜೆ ನಡೆಯುವ ಹಾಗೆ ಮತ್ತು ಸ್ವಚ್ಛತೆಯ ಕಡೆ ಗಮನ ನೀಡಬೇಕು. ನಾವೆಲ್ಲರೂ ಸೇರಿ ಇದರ ಆಯೋಜನೆ ಮಾಡೋಣ.

೫. ದೇವಸ್ಥಾನ ಭಕ್ತರ ಆಧಾರವಾಗಿ ನಡೆಯುತ್ತದೆ. ದೇವಸ್ಥಾನಗಳಲ್ಲಿ ಹಿಂದೆ ಗುರುಕುಲ ನಡೆಯುತ್ತಿತ್ತು. ಕಥೆ, ಪ್ರವಚನ ಮತ್ತು ಪುರಾಣಗಳ ಮೂಲಕ ಹೊಸ ಪೀಳಿಗೆ ಸುಶಿಕ್ಷಿತವಾಗುತ್ತಿತ್ತು.

ಸಂಪಾದಕೀಯ ನಿಲುವು

ಈ ಮಹಾಸಮ್ಮೇಳನದಲ್ಲಿ ದೇವಸ್ಥಾನದ ಸರಕಾರಿಕರಣ ರದ್ದುಗೊಳಿಸಿ ಅದನ್ನು ಭಕ್ತರ ವಶಕ್ಕೆ ನೀಡುವ ಬೇಡಿಕೆ ಮಾಡಬೇಕು ಹಾಗೂ ಪ್ರತಿಯೊಂದು ದೇವಸ್ಥಾನದಲ್ಲಿ ಹಿಂದುಗಳಿಗೆ ಧರ್ಮಶಿಕ್ಷಣ ದೊರೆಯುವ ವ್ಯವಸ್ಥೆ ಮಾಡಬೇಕು !