ಪಾಕಿಸ್ತಾನದಲ್ಲಿರುವ ಚೀನಾದ ರಾಯಭಾರಿಯ ಪತ್ನಿಯಿಂದ ಪಾಕಿಸ್ತಾನಿ ಸೇವಕಿಯ ಮೇಲೆ ಹಲ್ಲೆ !

ಈ ವಿಷಯದಲ್ಲಿ ಪಾಕಿಸ್ತಾನ ಮೌನವಾಗಿದೆ, ಆದರೆ ಚೀನಾ ಸರಕಾರ ವಿಚಾರಣೆ ಮಾಡಲಿದೆ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ಥಾನದಲ್ಲಿರುವ ಚೀನಿ ರಾಯಭಾರಿ ನೊಂಗ್ ರೊಂಗ್ ಇವರ ಪತ್ನಿಯು ತನ್ನ ಸೇವಕಿಯನ್ನು ಜನದಟ್ಟಣ ಇರುವ ರಸ್ತೆಯಲ್ಲಿ ಥಳಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ವಿಡಿಯೋದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪಾಕಿಸ್ತಾನ ಚೀನಾದ ವಶದಲ್ಲಿದೆಯೆಂದು ಟೀಕೆಗಳು ವ್ಯಕ್ತವಾಗುತ್ತಿವೆ !

ಈ ಘಟನೆಯ ಕುರಿತು ಪಾಕಿಸ್ತಾನ ಸರಕಾರ ತನಿಖೆಯನ್ನು ಪ್ರಾರಂಭಿಸಿದ್ದು, ಸೇವಕಿಗೆ ಸೂಕ್ತ ವೈದ್ಯಕೀಯ ನೆರವು ನೀಡಲಾಗಿದೆಯೆಂದು ಹೇಳಿದೆ. ಆದರೆ ಆರೋಪಿಯ ವಿರುದ್ಧ ಯಾವ ಕ್ರಮ ಕೈಕೊಳ್ಳಲಾಗುವುದು ? ಎನ್ನುವ ವಿಷಯದಲ್ಲಿ ಮೌನವಹಿಸಿದೆ. ಇನ್ನೊಂದೆಡೆ ಚೀನಿ ಸರಕಾರವೂ `ನಾವು ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಕೊಳ್ಳುತ್ತೇವೆ’ ಎಂದು ಹೇಳಿದೆ.

(ಸೌಜನ್ಯ : Oneindia News)