|
ಬೊಕಾರೋ (ಜಾರ್ಖಂಡ್) – ಒಂಬತ್ತನೆಯ ತರಗತಿಯಲ್ಲಿ ಓದುತ್ತಿರುವ ಓರ್ವ ಹಿಂದೂ ವಿದ್ಯಾರ್ಥಿಯು ಕೈಯಲ್ಲಿ ಧಾರ್ಮಿಕ ದಾರ ಕಟ್ಟಿದ್ದರಿಂದ ಕಾರ್ಮೆಲ್ ಕಾನ್ವೆಂಟ್ ಶಾಲೆಯ ಶಿಕ್ಷಕನು ವಿದ್ಯಾರ್ಥಿಗೆ ಥಳಿಸಿ ದಾರ ಕತ್ತರಿಸಿದರು. ಅಮಿತ ಲಕಡಾ ಎಂದು ಈ ಶಿಕ್ಷಕನ ಹೆಸರಾಗಿದೆ, ಹುಡುಗನು ಬ್ಲೇಡಿನಿಂದ ದಾರಾ ಕತ್ತರಿಸುವಷ್ಟು ಶಿಕ್ಷಕರು ಒತ್ತಡ ಹೇರಿದರು. ‘ಈ ದಾರಾ ಎಂದರೆ ನಮ್ಮ ಧಾರ್ಮಿಕ ಪ್ರತೀಕವಾಗಿದೆ’, ಎಂದು ಸಂತ್ರಸ್ತ ವಿದ್ಯಾರ್ಥಿ ಲಕಡಾ ಇವರಿಗೆ ಹೇಳಲು ಪ್ರಯತ್ನಿಸಿದನು; ಆದರೆ ಲಕಡಾ ಇವರು ಅವನ ಯಾವುದೇ ಮಾತು ಕೇಳದೆ ಥಳಿಸಿದರು.
Jharkhand: Missionary school teacher thrashes student for refusing to remove his Kalawa, pressurises him to chop it off, Hindu outfits protesthttps://t.co/z8JZEsyVq9
— OpIndia.com (@OpIndia_com) July 20, 2023
ಜುಲೈ ೧೮ ರಂದು ಈ ಘಟನೆ ನಡೆದಿದ್ದು ಭಾಜಪ ಮತ್ತು ಸ್ಥಳೀಯ ಹಿಂದುತ್ವನಿಷ್ಠ ಸಂಘಟನೆಗಳು ಈ ಘಟನೆಯನ್ನು ಗಂಭೀರವಾಗಿ ಆಕ್ಷೇಪಿಸಿದ್ದಾರೆ. ಆರೋಪಿ ಶಿಕ್ಷಕನ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಶಾಲೆಯ ಪ್ರಾಚಾರ್ಯರು ಸಿಸ್ಟರ್ ಜಯಸ್ ಕುಲ್ಲು ಇವರು ಶಿಕ್ಷಕನ ಮೇಲೆ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ. ಬೊಕಾರೋದ ಪೊಲೀಸ ಆಯುಕ್ತರು ಮತ್ತು ಹಿರಿಯ ಜಿಲ್ಲಾಧಿಕಾರಿ ಇವರ ಬಳಿ ಕೂಡ ಹಿಂದುತ್ವನಿಷ್ಠ ಸಂಘಟನೆಗಳು ಈ ಪ್ರಕರಣದಲ್ಲಿ ಗಮನಹರಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ. ಅವರು ಈ ಪ್ರಕರಣದ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಆಶ್ವಾಸನೆ ಕೂಡ ನೀಡಿದ್ದಾರೆ.
ಸಂಪಾದಕೀಯ ನಿಲುವು
|