ಭಾರೀ ಮಳೆಯ ನಂತರ ಆಕಸ್ಮಿಕವಾಗಿ ಕೆಲವು ದಿನ ಕಡು ಬಿಸಿಲು ಬಂದರೆ ಮುಂದಿನ ಕಾಳಜಿಯನ್ನು ವಹಿಸಿ

‘ಮಳೆಗಾಲದಲ್ಲಿ ಕೆಲವೊಮ್ಮೆ ಕೆಲವು ದಿನ ಭಾರೀ ಮಳೆ ಬೀಳುತ್ತದೆ ಮತ್ತು ನಂತರ ಇದ್ದಕ್ಕಿದ್ದಂತೆ ಕೆಲವು ದಿನ ಬಹಳ ಬಿಸಿಲು ಬರುತ್ತದೆ. ಭಾರೀ ಮಳೆಯನಂತರ ಇದ್ದಕ್ಕಿದ್ದಂತೆ ಬಹಳ ಬಿಸಿಲು ಬೀಳುವುದರಿಂದ ಶರೀರದಲ್ಲಿ ಆಕಸ್ಮಿಕವಾಗಿ ಪಿತ್ತ ಹೆಚ್ಚಾಗುತ್ತದೆ ಮತ್ತು ಕಣ್ಣು ಬರುವುದು, ಬಾಯಿ ಹುಣ್ಣು, ಮೈಮೇಲೆ ಗುಳ್ಳೆಗಳಾಗುವುದು, ಜ್ವರ, ಕುರ ಆಗುವುದು, ಕೈಕಾಲುಗಳು ಉರಿಯುವುದು, ಮೂತ್ರದ ಜಾಗದಲ್ಲಿ ಉರಿಯಾಗುವುದು, ಇಂತಹ ಪಿತ್ತದ ರೋಗಗಳಾಗುವ ಸಾಧ್ಯತೆ ಇರುತ್ತದೆ. ಇಂತಹ ವಾತಾವರಣವಿದ್ದರೆ ಮುಂದಿನ ಕಾಳಜಿಯನ್ನು ವಹಿಸಿರಿ.

೧. ಹುಳಿ, ಉಪ್ಪು, ಖಾರ, ಎಣ್ಣೆಯುಕ್ತ, ಹಾಗೆಯೇ ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನುವುದನ್ನು ತಡೆಗಟ್ಟಬೇಕು.

೨. ಮೊಸರು ತಿನ್ನಬಾರದು. (ಮೊಸರು ಕಡಿದು ತಯಾರಿಸಿದ ಮಜ್ಜಿಗೆ ಕುಡಿಯಬಹುದು.)

೩. ಹೊಟ್ಟೆತುಂಬುವಷ್ಟು ಊಟ ಮಾಡದೇ ಸ್ವಲ್ಪ ಹಸಿವು ಇಟ್ಟು ಊಟ ಮಾಡಬೇಕು.

೪. ಬಿಸಿಲಿಗೆ ಹೋಗುವುದನ್ನು ತಡೆಯಬೇಕು. ಹೋಗುವುದಾದರೆ ಬಿಸಿಲು ತಡೆಗಟ್ಟಲು ಛತ್ರಿಯನ್ನು ಉಪಯೋಗಿಸಬೇಕು.

೫. ಮಧ್ಯಾಹ್ನ ಅಥವಾ ಹಗಲಿನಲ್ಲಿ ಮಲಗಬಾರದು, ಮಲಗುವುದಿದ್ದರೆ ಕುಳಿತಲ್ಲಿಯೇ ಮಲಗಬೇಕು.

೬. ಸತತವಾಗಿ ಜೋರಾಗಿ ತಿರುಗುವ ಫ್ಯಾನಿನ ಗಾಳಿಯನ್ನು ತಡೆಯಬೇಕು. (ಫ್ಯಾನಿನ ವೇಗವು ಕಡಿಮೆ ಮಾಡಿ ಹಚ್ಚಬಹುದು.)’

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೭.೨೦೨೩)

ಲೇಖಮಾಲಿಕೆಯಲ್ಲಿನ ಎಲ್ಲ ಲೇಖನಗಳನ್ನು ಓದಲು ಲಿಂಕ್ : bit.ly/3LG2JM3