ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ನೃತ್ಯಕಲಾವಿದರು ನೃತ್ಯದ ಮಾಧ್ಯಮದಿಂದ ದೇವರನ್ನು ಅನುಭವಿಸಲು ಪ್ರಯತ್ನಿಸುತ್ತಾರೆ ! – ಡಾ. ಸಹನಾ ಭಟ್, ಸಂಸ್ಥಾಪಕಿ ‘ನಾಟ್ಯಾಂಜಲಿ ಕಲಾ ಕೇಂದ್ರ, ಹುಬ್ಬಳ್ಳಿ

ಡಾ. (ಸೌ.) ಸಹನಾ ಭಟ್

ಹುಬ್ಬಳ್ಳಿಯ ‘ನಾಟ್ಯಾಂಜಲಿ ಕಲಾ ಕೇಂದ್ರದ ಸಂಸ್ಥಾಪಕಿ ಡಾ. ಸಹನಾ ಭಟ್ (ಭರತನಾಟ್ಯಮ್ ನೃತ್ಯಕಲಾವಿದೆ) ಇವರು ೨೦೨೨ ರಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರು ಅಲ್ಲಿ ನಡೆದ ನೃತ್ಯದ ಸಂಶೋಧನಾತ್ಮಕ ಪ್ರಯೋಗಗಳಲ್ಲಿ ಪಾಲ್ಗೊಂಡಿದ್ದರು.

ಅನಂತರ ಕರ್ನಾಟಕದಲ್ಲಿನ ವೇಣುಧ್ವನಿ ಕೆ.ಎಲ್.ಈ. ಎಂಬ ಆಕಾಶವಾಣಿ ಕೇಂದ್ರದಲ್ಲಿ ಡಾ. ಸಹನಾ ಭಟ್‌ರವರ ಸಂದರ್ಶನ ನಡೆಯಿತು. ಈ ಸಂದರ್ಶನದಲ್ಲಿ ಡಾ. ಸಹನಾ ಅವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ನೀಡಿದ ಭೇಟಿಯ ಕಾಲಾವಧಿಯಲ್ಲಿ ‘ನೃತ್ಯ ಮತ್ತು ಸಾಧನೆ ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಅನುಭವಿಸಿದ ಪ್ರಸಂಗಗಳು, ಅವರಿಗೆ ಆ ಸಮಯದಲ್ಲಿ ಬಂದ ವೈಶಿಷ್ಟ್ಯಪೂರ್ಣ ಅನುಭೂತಿಗಳು ಮತ್ತು ಅವರ ಗಮನಕ್ಕೆ ಬಂದಿರುವ ಕೆಲವು ವಿಷಯಗಳನ್ನು ಹೇಳಿದರು. ಈ ಸಂದರ್ಶನದ ಸಾರಾಂಶವನ್ನು ಡಾ. ಸಹನಾ ಭಟ್ ಅವರ ಮಾತುಗಳಲ್ಲಿ ಕೆಳಗಿನ ಲೇಖನದಲ್ಲಿ ಮಂಡಿಸಲಾಗಿದೆ.

೧. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ನೃತ್ಯಕಲಾವಿದರು ನೃತ್ಯಗಳ ಮಾಧ್ಯಮದಿಂದ ದೇವರನ್ನು ಅನುಭವಿಸಲು ಪ್ರಯತ್ನಿಸುತ್ತಿದ್ದು, ಅಲ್ಲಿ ನೃತ್ಯವನ್ನು ಮಾಡುವಾಗ ವಿವಿಧ ದಿವ್ಯ ಅನುಭೂತಿಗಳು ಬರುತ್ತವೆ

‘ಗೋವಾದ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರ ದಲ್ಲಿ ನೃತ್ಯವನ್ನು ಮಾಡುವುದು’, ಇದು ನನಗೆ ಒಂದು ಉತ್ತಮ ಮತ್ತು ಬೇರೆಯೇ ಅನುಭವವಾಗಿತ್ತು. ಅಲ್ಲಿ ಗಾಯನ, ವಾದನ ಮತ್ತು ನೃತ್ಯ ಇವುಗಳಿಗೆ ಸಂಬಂಧಿತ ಸಂಶೋಧನಾ ಕಾರ್ಯವು ನಡೆಯುತ್ತಿದೆ. ಈ ಸಂಶೋಧನೆಗಾಗಿ ನಾನು ೪-೫ ದಿನಗಳಿಗಾಗಿ ಅಲ್ಲಿ ಹೋದಾಗ ನನಗೆ ಬಂದ ಅನುಭವವು ಬೇರೆಯೇ ಆಗಿತ್ತು. ಗಾಯನ, ವಾದನ ಮತ್ತು ನೃತ್ಯ ಇವು ದೇವರ ಕಾರ್ಯಕ್ಕಾಗಿಯೇ (ಭಕ್ತಿಗಾಗಿಯೇ) ಇವೆ. ಕೆಲವರು ಇದನ್ನು ಚಿಕ್ಕಂದಿನಿಂದಲೇ ಕಲಿಯುತ್ತಾ ಬಂದಿದ್ದಾರೆ. ನೃತ್ಯದ ಮಾಧ್ಯಮದಿಂದ ನಾವು ದೇವರ ಆರಾಧನೆಯನ್ನೇ ಮಾಡುತ್ತಿರುತ್ತೇವೆ. ನೃತ್ಯವೆಂದರೆ ನನಗೆ ‘ಒಂದು ರೀತಿಯಲ್ಲಿ ದೇವರ ಪೂಜೆಯೇ ಆಗಿದೆ !’, ಎಂದು ಅನಿಸುತ್ತದೆ. ಅದು ಮಾನಸಪೂಜೆ ಆಗಿರಬಹುದು ಅಥವಾ ದೈಹಿಕಪೂಜೆ ಆಗಿರಬಹುದು. ಇಲ್ಲಿ ನೃತ್ಯಕಲಾವಿದರು ನೃತ್ಯದ ಮಾಧ್ಯಮದಿಂದ ದೇವರನ್ನು ಅನುಭವಿಸಲು ಪ್ರಯತ್ನಿಸುತ್ತಾರೆ. ಯಾವುದಾದರೊಂದು ಮುದ್ರೆಯನ್ನು ಮಾಡಿದಾಗ ‘ಅಂತರ್ಮನಸ್ಸಿಗೆ ಏನು ಅರಿವಾಗುತ್ತದೆ ?’, ಎಂಬುದರ ಅಧ್ಯಯನವನ್ನು ಮಾಡುತ್ತಾರೆ. ನಾನೂ ಸಹ ಇಂತಹ ವಾತಾವರಣದಲ್ಲಿಯೇ ಬೆಳೆದಿದ್ದೇನೆ. ಹೊರಗಿನ ಕೆಲವು ಕಲಾವಿದರೂ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಈ ಭಾವನೆ ಯನ್ನೇ ಇಟ್ಟುಕೊಂಡಿರುತ್ತಾರೆ. ಇದೇ ದೃಷ್ಟಿಕೋನದಿಂದ ನೃತ್ಯದ ಸಂಶೋಧನಾತ್ಮಕ ಪ್ರಯೋಗಗಳಿಗಾಗಿ ಅವರು ನನ್ನನ್ನು ಆಮಂತ್ರಿಸಿದ್ದರು ಮತ್ತು ನನಗೆ ಅಲ್ಲಿ ತುಂಬಾ ಒಳ್ಳೆಯ ದಿವ್ಯ ಅನುಭವಗಳನ್ನು ಪಡೆಯಲು ಸಾಧ್ಯವಾಯಿತು.

೨. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಛಾಯಾಚಿತ್ರವನ್ನು ನೋಡಿದಾಗ ಅವರ ಕಣ್ಣುಗಳಲ್ಲಿ ಭಗವಂತನ ತೇಜವಿರುವುದರ ಅರಿವಾಗುವುದು ಮತ್ತು ಅವರಿಂದಲೇ ಸಂಶೋಧನೆಯ ಬಹಳ ದೊಡ್ಡ ಕಾರ್ಯವಾಗುತ್ತಿರುವುದು ಗಮನಕ್ಕೆ ಬರುವುದು

ಆಗಸ್ಟ್ ೨೦೨೨ ರಲ್ಲಿ ನಾನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಆಗ ನಾನು ಸನಾತನದ ಆಶ್ರಮಕ್ಕೂ ಭೇಟಿ ನೀಡಿದ್ದೆ. ಅಲ್ಲಿ ಶ್ರೀ ಸಿದ್ಧಿವಿನಾಯಕ ಮತ್ತು ಶ್ರೀ ಭವಾನಿದೇವಿಯ ಮೂರ್ತಿಗಳಿವೆ. ಆಶ್ರಮದ ಸ್ಪಂದನಗಳು ತುಂಬಾ ಚೆನ್ನಾಗಿವೆ. ನಮಗೆ ಅಲ್ಲಿನ ವಿವಿಧ ಕಾರ್ಯಗಳ ಪರಿಚಯವನ್ನು ಮಾಡಿಕೊಟ್ಟರು. ಇದೆಲ್ಲವನ್ನು ನೋಡಿದಾಗ ನನಗೆ ಒಂದು ದಿವ್ಯ ಅನುಭೂತಿ ಬಂದಿತು. ಆಶ್ರಮದಲ್ಲಿನ ಧ್ಯಾನಮಂದಿರದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯದ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಛಾಯಾಚಿತ್ರವಿದೆ. ಅವರು ಈ ವಿಶ್ವವಿದ್ಯಾಲಯದ ಸಂಸ್ಥಾಪಕರಾಗಿದ್ದಾರೆ, ಎಂಬುದು ನನಗೆ ಗೊತ್ತಿರಲಿಲ್ಲ; ಆದರೆ ‘ಅವರ ಕೇವಲ ಛಾಯಾಚಿತ್ರವನ್ನು ನೋಡಿದ ಕೂಡಲೇ ಅವರ ಕಣ್ಣುಗಳಲ್ಲಿ ನನಗೆ ಭಗವಂತನ ಅಸಾಧಾರಣ ಕಾಂತಿಯಿದೆ’, ಎಂದು ಅರಿವಾಯಿತು. ಅನಂತರ ನನಗೆ, ‘ಇವರೇ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾಗಿದ್ದು ಅವರಿಂದಲೇ ಇಷ್ಟೊಂದು ಸಂಶೋಧನೆ ಗಳನ್ನು ಮಾಡಲು ಸುಲಭವಾಗುತ್ತಿದೆ’ ಎಂಬುದು ತಿಳಿಯಿತು.

೩. ‘ಜಿ.ಡಿ.ವಿ’ ಈ ವೈಜ್ಞಾನಿಕ ಉಪಕರಣದ ಮಾಧ್ಯಮದಿಂದ ಮನುಷ್ಯನ ಸಪ್ತಚಕ್ರಗಳ ಸ್ಥಿತಿಯ ಅಧ್ಯಯನವನ್ನು ಹೇಗೆ ಮಾಡಬಹುದು ?’, ಎಂಬುದು ತಿಳಿಯುವುದು

ಸೌ. ಸಾವಿತ್ರಿ ಇಚಲಕರಂಜಿಕರ (ನೃತ್ಯ ಅಧ್ಯಯನಕಾರರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ) ಇವರು ನಮಗೆ ಕೆಲವು ಸಂಶೋಧನಾತ್ಮಕ ಯಂತ್ರಗಳ ಪರಿಚಯವನ್ನು ಮಾಡಿಕೊಟ್ಟರು ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಇದುವರೆಗೆ ಆಗಿರುವ ೭೦೦ ಕ್ಕಿಂತಲೂ ಹೆಚ್ಚು ಸಂಶೋಧನಾತ್ಮಕ ಪ್ರಯೋಗ ಗಳ ಬಗ್ಗೆ ಪವರ್ ಪಾಯಿಂಟ್ ತಂತ್ರಾಂಶದ (ಪಿ.ಪಿ.ಟಿ.ಯ) ಮೂಲಕ ಮಾಹಿತಿಯನ್ನು ನೀಡಿದರು. ಅಲ್ಲಿ ಕೆಲವು ಸಾಧಕರಿಗೆ ಸೂಕ್ಷ್ಮಜ್ಞಾನ ಸಿಗುತ್ತದೆ. ಉಪಕರಣ ಮತ್ತು ಸೂಕ್ಷ ಜ್ಞಾನ ಹೀಗೆ ಎರಡು ರೀತಿಯ ಅಧ್ಯಯನವನ್ನು ಮಾಡಲಾಗುತ್ತದೆ. ಅನಂತರ ಸುಶ್ರೀ (ಕು.) ತೇಜಲ ಪಾತ್ರೀಕರ (ಸಂಗೀತ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಆಧ್ಯಾತ್ಮಿಕ ಮಟ್ಟ ಶೇ. ೬೧) ಇವರು ನಮಗೆ ಸಪ್ತಚಕ್ರಗಳ ಬಗೆಗಿನ ಮಾಹಿತಿಯನ್ನು ನೀಡಿದರು.

‘ಜಿ.ಡಿ.ವಿ’ (Gas Discharge Visualization) ಈ ಉಪಕರಣದ ಮೂಲಕ ಸಪ್ತಚಕ್ರಗಳ ಸ್ಥಿತಿಯನ್ನು ನೋಡ ಬಹುದು. ‘ಯಾವುದಾದರೊಂದು ನೃತ್ಯವನ್ನು ಮಾಡುವ ಮೊದಲು, ಹಾಗೆಯೇ ನೃತ್ಯವನ್ನು ಮಾಡಿದ ನಂತರ ಸಪ್ತಚಕ್ರಗಳ ಸ್ಥಿತಿ ಹೇಗಿರುತ್ತದೆ ?’ ಎಂಬುದರ ಅಧ್ಯಯನವನ್ನು ನಾವು ಮಾಡಬಹುದು. ಅದೇ ರೀತಿ ಯಾವಾಗ ಮನುಷ್ಯನ ವೃತ್ತಿಯು ಶಾಂತ ಮತ್ತು ಅಂತರ್ಮುಖ ವಾಗಿರುತ್ತದೆಯೋ, ಆಗ ಚಕ್ರಗಳ ಸ್ಥಿತಿ ಹೇಗಿರುತ್ತದೆ ? ಯಾವಾಗ ನಾವು ಅನಾವಶ್ಯಕವಾಗಿ ಹರಟೆ ಹೊಡೆಯುತ್ತೇವೆ, ಅಂದರೆ ವೃತ್ತಿ ಬಹಿರ್ಮುಖವಾಗಿರುತ್ತದೆಯೋ, ಆಗ ಚಕ್ರಗಳ ಸ್ಥಿತಿ ಹೇಗಿರುತ್ತದೆ ? ಈ ಎಲ್ಲವೂ ಉಪಕರಣದಿಂದ ಹೇಗೆ ತಿಳಿಯುತ್ತದೆ ?’, ಎಂಬುದರ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು.

೪. ‘ಯು.ಎ.ಎಸ್’ ಈ ವೈಜ್ಞಾನಿಕ ಉಪಕರಣದ ಮಾಧ್ಯಮದಿಂದ ಪ್ರಭಾವಲಯಗಳ ಅಧ್ಯಯನವನ್ನು ಹೇಗೆ ಮಾಡುತ್ತಾರೆ ?’, ಎಂಬುದು ತಿಳಿಯುವುದು

ಯಾವುದೇ ಸಂಗೀತದ ಪ್ರಯೋಗವಾಗುವ ಮೊದಲು ಗಾಯಕರ ಅಥವಾ ನರ್ತಕಿಯರ, ಅವರ ಜೊತೆಗಿರುವ ವಾದಕರ ಮತ್ತು ಪ್ರೇಕ್ಷಕರ ಪ್ರಭಾವಲಯಗಳನ್ನು ಪ್ರಯೋಗದ ಮೊದಲು ಮತ್ತು ಪ್ರಯೋಗದ ನಂತರ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಉಪಕರಣದಿಂದ ಮೀಟರ್‌ನಲ್ಲಿ ಅಳೆಯಲಾಗುತ್ತದೆ. ಅಲ್ಲಿ ಹೋದನಂತರ ‘ಸಾಮಾನ್ಯ ಜನರ ಸಕಾರಾತ್ಮಕ ಪ್ರಭಾವಲಯ ೧ ಮೀಟರ ನಷ್ಟೂ ಇರುವುದಿಲ್ಲ ಎಂದು ನನಗೆ ಹೇಳಲಾಯಿತು. ಸಾಧಕನು ಭಕ್ತಿ ಮಾರ್ಗಕ್ಕನುಸಾರ ಸಾಧನೆ ಮತ್ತು ನಾಮಜಪವನ್ನು ಮಾಡಿದರೆ ಅವನಲ್ಲಿನ ಸಕಾರಾತ್ಮಕ ಊರ್ಜೆ ಅವನ ಭಾವಕ್ಕನುಸಾರ ನಿಧಾನವಾಗಿ ಹೆಚ್ಚಾಗುತ್ತಾ ಹೋಗುತ್ತದೆ ಎಂದು ತಿಳಿಯಿತು. ಈ ಉಪಕರಣದಿಂದ ಮನುಷ್ಯನ ಸಕಾರಾತ್ಮಕ ಪ್ರಭಾವಲಯದೊಂದಿಗೆ ನಕಾರಾತ್ಮಕ ಪ್ರಭಾವಲಯವನ್ನೂ ಅಳೆಯಬಹುದು. ಅನಂತರ ನಮಗೆ ‘ಪ್ರತ್ಯಕ್ಷ ‘ರೀಡಿಂಗ್’ ಹೇಗೆ ತೆಗೆದುಕೊಳ್ಳುತ್ತಾರೆ ? ಎಂಬುದನ್ನು ತೋರಿಸಿದರು. ಆ ಸಮಯದಲ್ಲಿ ‘ಇಲ್ಲಿ ಎಲ್ಲ ಅಧ್ಯಯನವನ್ನು ಸ್ಪಂದನಶಾಸ್ತ್ರ ಮತ್ತು ವೈಜ್ಞಾನಿಕ ಉಪಕರಣದ ಸಹಾಯದಿಂದ ಹೇಗೆ ಮಾಡಲಾಗುತ್ತದೆ ?’, ಎಂಬುದು ನಮಗೆ ತಿಳಿಯಿತು.

೫. ‘ಆಧ್ಯಾತ್ಮಿಕ ದೃಷ್ಟಿಕೋನದಿಂದ ನೃತ್ಯ’ ಈ ಹೊಸ ದೃಷ್ಟಿಕೋನ ಕಲಿಯಲು ಸಿಕ್ಕಿತು

ಅ. ‘ಭರತನಾಟ್ಯಮ್’ ಎಂದ ಕೂಡಲೇ, ನಾವು ‘ನೃತ್ಯವನ್ನು ಕೇವಲ ತಾಂತ್ರಿಕ ದೃಷ್ಟಿಯಿಂದ ನೋಡುತ್ತೇವೆ. ‘ನೃತ್ಯ ಎಂದ ರೇನು ? ನಾಟ್ಯ ಎಂದರೇನು ? ಅವುಗಳಲ್ಲಿನ ಅಭಿನಯ ಮತ್ತು ಅಭಿವ್ಯಕ್ತಿ ಎಂದರೇನು ?’, ಇದರ ಬಗ್ಗೆ ನನಗೆ ತುಂಬಾ ಅನುಭವಗಳು ಬಂದವು. ಅನೇಕ ಸಂಶೋಧನಾ ಕಾರ್ಯ ಗಳಲ್ಲಿ ಮತ್ತು ಕಾರ್ಯಶಾಲೆಗಳಲ್ಲಿ ನಾನು ಪಾಲ್ಗೊಂಡು ಅಲ್ಲಿ ನೃತ್ಯವನ್ನು ಕಲಿಸಿದ್ದೇನೆ. ವಯಸ್ಸಿನಿಂದ ತೀರ ಚಿಕ್ಕವರಿಂದ ಹಿಡಿದು ಹಿರಿಯ ವಿದ್ವಾನರವರೆಗೆ ಎಲ್ಲರಿಂದ ಒಳ್ಳೆಯ ಬೆಂಬಲ ದೊರಕಿ ಅದರಲ್ಲಿ ನಮಗೆ ಆನಂದ ಸಿಗುತ್ತದೆ; ಆದರೆ ಇದುವರೆಗೆ ನಾವು ಕೇವಲ ತಾಂತ್ರಿಕ ವಿಷಯದಲ್ಲಿನ ಆನಂದವನ್ನೇ ಅನುಭವಿಸಿದೆವು.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆಯ ಕಾರ್ಯದಲ್ಲಿ ನನಗೆ ಒಂದು ವಿಶೇಷ ಅನುಭೂತಿ ಬಂದಿತು. ಅಲ್ಲಿ ನಾವು ಪ್ರಯೋಗದಲ್ಲಿನ ಪ್ರತಿಯೊಂದು ವಿಷಯದ ಕಡೆಗೆ ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದೆವು. ಯಾವಾಗ ಪ್ರಯೋಗ ಪ್ರಾರಂಭವಾಗುತ್ತದೆಯೋ, ಆಗ ಎಲ್ಲವನ್ನೂ ಆಧ್ಯಾತ್ಮಿಕ ದೃಷ್ಟಿ ಕೋನದಿಂದ ನೋಡಲಾಗುತ್ತಿತ್ತು.

ಆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದಲ್ಲಿ ಉತ್ತಮ ಚಿತ್ರೀಕರಣದ ವ್ಯವಸ್ಥೆಯಿದೆ. ನಾನು ಪೂರ್ಣ ತಯಾರಾಗಿ ಪ್ರಯೋಗದ ಸ್ಥಳವನ್ನು ತಲುಪಿದೆನು ಮತ್ತು ‘ಪೂತನಾ ಮೋಕ್ಷ’ ಎಂಬ ನೃತ್ಯವನ್ನು ಪ್ರಸ್ತುತ ಪಡಿಸಿ ದೆನು. ಪೂತನಾ ರಾಕ್ಷಸಿಯಾಗಿದ್ದಳು; ಆದರೆ ಅವಳ ಮಾತೃತ್ವದ ಸ್ಥಾಯೀಭಾವವನ್ನಿಟ್ಟು ನಾನು ಆ ನೃತ್ಯವನ್ನು ಪ್ರಸ್ತುತಪಡಿಸಿದೆನು. ಪ್ರಯೋಗದ ಪರಿಣಾಮದ ಅಧ್ಯಯನಕ್ಕಾಗಿ ನಾನು ಒಂದೇ ನೃತ್ಯವನ್ನು ಎರಡು ಬಾರಿ ಮಾಡಿದೆನು. ನೃತ್ಯದ ಮೊದಲು ಮತ್ತು ನಂತರ ನನ್ನ ರಕ್ತದೊತ್ತಡ (ಬಿ.ಪಿ.) ಮತ್ತು ಅನಂತರ ‘ಯುನಿವರ್ಸಲ್ ಔರಾ ಸ್ಕ್ಯಾನರ್’ದಿಂದ ನನ್ನ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆಯ ಪ್ರಭಾವಲಯ ವನ್ನು ಅಳೆಯಲಾಯಿತು. ಅವರು ನನಗೆ, ಪ್ರಯೋಗದ ಮೊದಲು ಮತ್ತು ನಂತರದ ನಿರೀಕ್ಷಣೆಯಲ್ಲಿ ಬದಲಾವಣೆ ಯಾಗುತ್ತದೆ, ಎಂದು ಹೇಳಿದರು. ‘ನಮಗೆ ಪ್ರಯೋಗದಿಂದ ಎಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಸಿಕ್ಕಿತು ?’, ಎಂಬುದರ ಅಧ್ಯಯನವನ್ನೂ ನಾವು ಮಾಡಬಹುದು.

ಇ. ನಾನು ಪ್ರಯೋಗದಲ್ಲಿ ‘ಪೂತನಾ ಮೋಕ್ಷ’ ಈ ನೃತ್ಯವನ್ನು ಪ್ರಸ್ತುತಪಡಿಸಿದ್ದೆನು. ‘ಪೂತನಾ’ ಇವಳು ರಾಕ್ಷಸಿಯಾಗಿದ್ದರೂ ಅವಳ ಮೃತ್ಯುವಿನ ಆಧಾರದಲ್ಲಿ ಮಾಡಿದ ನೃತ್ಯದ ನಂತರ ಕಂಡು ಬಂದಿರುವ ನಿರೀಕ್ಷಣೆಯಲ್ಲಿ ನನ್ನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗಿತ್ತು. ನೃತ್ಯವನ್ನು ನೋಡುವವರಲ್ಲಿಯೂ ಸಕಾರಾತ್ಮಕ ಪರಿಣಾಮವಾಗಿತ್ತು. ಇದನ್ನು ಶಬ್ದಗಳಲ್ಲಿ ಹೇಳಲು ಬಹಳ ಕಠಿಣವಾಗಿದೆ. ‘ನೃತ್ಯವನ್ನು ಮಾಡಿದ ನಂತರ ಸಕಾರಾತ್ಮಕ ಊರ್ಜೆ ಸಿಗುತ್ತದೆ. ಪ್ರೇಕ್ಷಕರಿಗೆ ಆನಂದ ದೊರಕಿ ಅವರ ಮೇಲೆಯೂ ಒಳ್ಳೆಯ ಪರಿಣಾಮವಾಗುತ್ತದೆ; ಏಕೆಂದರೆ ಅವರ ಮೇಲೆ ವಾತಾವರಣದ ಪರಿಣಾಮವೂ ಆಗುತ್ತದೆ’, ಎಂಬುದನ್ನು ನಾವು ಕೇವಲ ಕೇಳಿದ್ದೇವೆ; ಆದರೆ ಇಲ್ಲಿ ಅದನ್ನು ನಾವು ಪ್ರತ್ಯಕ್ಷ ಅನುಭವಿಸಿದೆವು.

– ಡಾ. ಸಹನಾ ಭಟ್ (ಭರತನಾಟ್ಯಮ್ ನೃತ್ಯಕಲಾವಿದೆ, ನೃತ್ಯಗುರು), ಸಂಚಾಲಕರು ‘ನಾಟ್ಯಾಂಜಲಿ ಕಲಾ ಕೇಂದ್ರ’, ಹುಬ್ಬಳ್ಳಿ