ಕಲಬೆರಕೆ ಇಲ್ಲದ, ಹಾಗೂ ಉತ್ತಮ ಗುಣಮಟ್ಟದ ಸನಾತನದ ಔಷಧಿಯ ಚೂರ್ಣಗಳನ್ನು ಬಳಸಿ

‘ಅನೇಕ ಬಾರಿ ಔಷಧಿಗಳ ಬೆಲೆ ಕಡಿಮೆ ಮಾಡಲು ಕಲ ಬೆರಕೆಯ ಮಾರ್ಗವನ್ನು ಅವಲಂಬಿಸಲಾಗುತ್ತದೆ. ಈ ಕಲಬೆರಕೆ ಸಾಮಾನ್ಯ ಜನರ ಗಮನಕ್ಕೆ ಬರುವುದಿಲ್ಲ. ಕಲಬೆರಕೆಯ ಕೆಲವು ಉದಾಹರಣೆಗಳು ಈ ರೀತಿಯಾಗಿವೆ. ಶುಂಠಿ ಚೂರ್ಣದಲ್ಲಿ ಹಿಟ್ಟು ಬೆರೆಸುವುದು. ನೆಲ್ಲಿಕಾಯಿ ಚೂರ್ಣ ಮಾಡುವಾಗ ಬೀಜಗಳ ಸಮೇತ ನೆಲ್ಲಿಕಾಯಿ ಬೀಸುವುದು. ಜೇಷ್ಠಮಧದ ಹಗುರವಾದ ಕಡ್ಡಿಗಳಿಂದ ಚೂರ್ಣ ಮಾಡುವುದು. ಬದಲಾಗಿ ಸನಾತನದ ಆಯುರ್ವೇದದ ಔಷಧಿ ತಯಾರಿಸುವಾಗ ಉತ್ತಮ ಗುಣಮಟ್ಟವನ್ನು ಕಾಪಾಡಲು ಪ್ರಯತ್ನಿಸಲಾಗಿದೆ. ಶುಂಠಿ ಚೂರ್ಣದಲ್ಲಿ ಸ್ವಲ್ಪವೂ ಹಿಟ್ಟನ್ನು ಕಲಬೆರಕೆ ಮಾಡಿಲ್ಲ. ನೆಲ್ಲಿಕಾಯಿಯ ಬೀಜ ತೆಗೆದು ಕೇವಲ ತಿರುಳನ್ನು ಒಣಗಿಸಿ ಅದರಿಂದ ಚೂರ್ಣ ಮಾಡಲಾಗುತ್ತದೆ. ಉತ್ತಮ ಗುಣಮಟ್ಟದ ಜೇಷ್ಠಮಧದಿಂದ ಅದರ ಚೂರ್ಣ ಮಾಡಲಾಗುತ್ತದೆ. ಇತರ ಚೂರ್ಣಗಳಲ್ಲೂ ಒಳ್ಳೆಯ ಗುಣಮಟ್ಟದ ಕಚ್ಚಾ ಸಾಮಗ್ರಿಗಳನ್ನು ಉಪಯೋಗಿಸಲಾಗಿದೆ. ಇದರಿಂದಲೇ ‘ಸನಾತನದ ಔಷಧಿ ಚೂರ್ಣಗಳಿಂದ ಒಳ್ಳೆಯ ಪರಿಣಾಮ ಕಂಡು ಬರುತ್ತದೆ’, ಎಂದು ಅನೇಕರು ಅನುಭವಿಸಿದ್ದಾರೆ.’