Zoho Foundation Chief Statement : ಗೋಮೂತ್ರವು ಔಷಧೀಯ ಗುಣಗಳನ್ನು ಹೊಂದಿದೆ ಎಂದು ‘ಐ.ಐ.ಟಿ. ಮದ್ರಾಸ್’ನ ನಿರ್ದೇಶಕರ ಹೇಳಿಕೆಯನ್ನು ಜೊಹೊ ಫೌಂಡೇಶನ್ ಮುಖ್ಯಸ್ಥರಿಂದ ಬೆಂಬಲ

(ಐ.ಐ.ಟಿ. ಎಂದರೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – ಭಾರತೀಯ ತಂತ್ರಜ್ಞಾನ ಸಂಸ್ಥೆ)

‘ಐ.ಐ.ಟಿ. ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಮತ್ತು ಜೊಹೊ ಕಂಪನಿಯ ಸಿಇಒ ಶ್ರೀಧರ್ ವೆಂಬು

ನವ ದೆಹಲಿ – ‘ಐ.ಐ.ಟಿ. ಮದ್ರಾಸ್’ ನಿರ್ದೇಶಕ ವಿ. ಕಾಮಕೋಟಿ ಇವರು ಗೋಮೂತ್ರವು ಔಷಧೀಯ ಗುಣಗಳನ್ನು ಹೊಂದಿದೆ ಎಂದು ಹೇಳಿಕೆ ನಿಡಿದ್ದರಿಂದ ವಿವಾದ ನಿರ್ಮಾಣವಾದಾಗ ‘ಜೊಹೊ’ ಕಂಪನಿಯ ಸಿಇಒ ಶ್ರೀಧರ ವೆಂಬು ಇವರು ವಿ. ಕಾಮಕೋಟಿಗೆ ಬೆಂಬಲ ನೀಡಿದ್ದಾರೆ.

ವೆಂಬು ‘X’ ನಲ್ಲಿ ಪೋಸ್ಟ್ ಮಾಡಿ,

1. ಐ.ಐ.ಟಿ. ಮದ್ರಾಸ್ ನ ನಿರ್ದೇಶಕ ಪ್ರಾ. ಕಾಮಕೋಟಿ ಒಬ್ಬ ಗೌರವಾನ್ವಿತ ಸಂಶೋಧಕ ಮತ್ತು ಶಿಕ್ಷಕರಾಗಿದ್ದಾರೆ. ಅವರು ಗೋಮೂತ್ರದ ಲಾಭಗಳ ಆಧಾರದ ಮೇಲೆ ವೈಜ್ಞಾನಿಕ ಸಂಶೋಧನೆಯ ಉದಾಹರಣೆಗಳನ್ನು ನೀಡಿದ್ದಾರೆ. ಆಧುನಿಕ ವಿಜ್ಞಾನವು ಈಗ ಹಿಂದೂಗಳ ಸಾಂಪ್ರದಾಯಿಕ ಜ್ಞಾನದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ; ಆದರೆ ಆನ್‌ಲೈನ್ ಟೀಕೆಯನ್ನು ಅವರ ಪೂರ್ವಾಗ್ರಹಗಳನ್ನು ತೋರಿಸುತ್ತಿದ್ದಾರೆ, ಅವುಗಳಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಪ್ರಾ. ಕಾಮಕೋಟಿ, ದೃಢವಾಗಿರಿ. ಈ ಟೀಕೆಗೆ ಮಣಿಯುವ ಅಗತ್ಯವಿಲ್ಲ. ಎಂದು ಹೇಳಿದ್ದಾರೆ.

2. ಕರುಳಿನ ಬ್ಯಾಕ್ಟೀರಿಯಾಗಳು ಮಾನವನ ರೋಗನಿರೋಧಕ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು, ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ, ಗೋಮೂತ್ರ ಮತ್ತು ಗೋಮಯದ ಲಾಭದಾಯಕ ಗುಣಗಳು ಮೂಢನಂಬಿಕೆಯಲ್ಲ. ಆಧುನಿಕ ವಿಜ್ಞಾನವೂ ಈಗ ಇದನ್ನು ಒಪ್ಪಲು ಪ್ರಾರಂಭಿಸಿದೆ.