ರಾಜ್ಯದ ದೇವಸ್ಥಾನಗಳಲ್ಲಿ ಮೊಬೈಲ್ ನಿಷೇಧ ! – ಮುಜರಾಯಿ ಇಲಾಖೆಯು ಆದೇಶ

ಬೆಂಗಳೂರು – ಇತ್ತೀಚೆಗೆ ಮೊಬೈಲ್ ಬಳೆಕೆಯ ಪ್ರಮಾಣ ಹೆಚ್ಚಾಗುತ್ತಿದ್ದು ಅದು ಈಗ ಪವಿತ್ರ ದೇವಸ್ಥಾನಗಳಲ್ಲಿ ಶಾಂತಿ ಭಂಗಕ್ಕೂ ಕಾರಣವಾಗಿದೆ. ದೇವಸ್ಥಾನ ಆವರಣದಲ್ಲಿ ಮೊಬೈಲ್‌ ಬಳಕೆಯಿಂದ ಅಲ್ಲಿ ಧ್ಯಾನ, ಪೂಜೆ ಇತ್ಯಾದಿಗಳಿಗೂ ವ್ಯತ್ಯಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮುಜರಾಯಿ ಇಲಾಖೆಯು ಆದೇಶ ಹೊರಡಿಸಿದ್ದು `ದೇವಾಲಯಗಳ ಆವರಣದಲ್ಲಿ ಮೊಬೈಲ್‌ ಅನ್ನು ನಿಷೇಧಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ದೇವರ ದರ್ಶನದ ಸಮಯದಲ್ಲಿ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್‌ ಆಫ್ ಮಾಡಿ, ದೇವರ ದರ್ಶನ ಮಾಡುವಂತೆ ಸೂಚಿಸಲಾಗಿದೆ’. ಇದು ವರೆಗೂ ದೇವಸ್ಥಾನಗಳಲ್ಲಿ ಗರ್ಭಗುಡಿ ಹಾಗೂ ಪವಿತ್ರ ಸ್ಥಳಗಳಲ್ಲಿ ಛಾಯಾಚಿತ್ರ ತೆಗೆಯಲು ನಿಷೇಧವಿತ್ತು. ಅಲ್ಲದೇ ಮೊಬೈಲ್‌ ನಿಷೇಧದ ಕುರಿತು ಸೂಚನಾ ಫಲಕವನ್ನು ಹಾಕುವಂತೆಯೂ ಸೂಚನೆ ನೀಡಿದೆ.

ಕೆಲವು ದಿನಗಳ ಹಿಂದೆ ಕೇದಾರನಾಥ ದೇವಸ್ಥಾನದಲ್ಲಿ ಓರ್ವ ಮಹಿಳೆಯು ದೇವಸ್ಥಾನದ ಪರಿಸರದಲ್ಲಿ ಆಕೆಯ ಪ್ರಿಯಕರನಿಗೆ ವಿವಾಹಕ್ಕಾಗಿ ಮನವಿ ಮಾಡಿದ್ದಳು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾದ ನಂತರ ದೇವಸ್ಥಾನದ ಅಡಳಿತವು ಬೇಸರ ವ್ಯಕ್ತಪಡಿಸಿತ್ತು. ಅನಂತರ ಕೇದಾರನಾಥ ದೇವಸ್ಥಾನದ ಪರಿಸರದಲ್ಲಿಯೂ ಮೊಬೈಲ್ ಬಳಕೆಯ ಮೇಲೆ ನಿರ್ಬಂಧ ಹೆರಲಾಗಿತ್ತು, ಎಂದು ಇಲ್ಲಿ ಸ್ಮರಿಸಬಹುದಾಗಿದೆ

ಸಂಪಾದಕೀಯ ನಿಲುವು

ಸರಕಾರವು ಮೊಬೈಲ್‌ ನಿಷೇಧಿಸಿರುವುದು ಒಳ್ಳೆಯ ಕ್ರಮ ಆದರೆ ಸರಕಾರವು ಅದೇ ರೀತಿ ಮಸೀದಿ ಮೇಲಿನ ಬೋಂಗಾಗಳನ್ನೂ ನಿಷೇಧಿಸುವ ಆದೇಶವನ್ನೂ ಹೊರಡಿಸುವುದೇ ?

ದೇವಸ್ಥಾನದ ಪಾವಿತ್ರ್ಯ ಕಾಪಾಡುವ ದೃಷ್ಟಿಯಿಂದ ಸರಕಾರವು ದೇವಸ್ಥಾನಗಳನ್ನು ಭಕ್ತರ ವಶಕ್ಕೊಪ್ಪಿಸಬೇಕು ಎಂಬುದು ಹಿಂದೂಗಳ ಬೇಡಿಕೆಯಾಗಿದೆ