ಸೀಮಾ ಹೈದರ ಇವಳನ್ನು 3 ದಿನಗಳಲ್ಲಿ ಪಾಕಿಸ್ತಾನಕ್ಕೆ ಗಡಿಪಾರು ಮಾಡಿ ಇಲ್ಲದಿದ್ದರೆ ತೀವ್ರ ಪ್ರತಿಭಟನೆ ! – ಗೋರಕ್ಷ ಹಿಂದೂ ದಳದ ಎಚ್ಚರಿಕೆ

ಸೀಮಾ ಹೈದರ, ‘ನಾನು ಪಾಕಿಸ್ತಾನಕ್ಕೆ ಹಿಂತಿರುಗಿದರೆ ನನ್ನನ್ನು ಕೊಲ್ಲುವರು’ !

ನೋಯ್ಡಾ (ಉತ್ತರ ಪ್ರದೇಶ) – ‘ಸೀಮಾ ಹೈದರ ಇವಳನ್ನು ಇನ್ನು 3 ದಿನಗಳಲ್ಲಿ ಭಾರತದಿಂದ ಹೊರಹಾಕದಿದ್ದರೆ, ನಾವು ತಿವ್ರ ಪ್ರತಿಭಟನೆ ನಡೆಸುತ್ತೇವೆ’, ಎಂದು ಗೋರಕ್ಷ ಹಿಂದೂ ದಳದ ರಾಷ್ಟ್ರೀಯ ಅಧ್ಯಕ್ಷ ವೇದ ನಾಗರ ಇವರು ವೀಡಿಯೋ ಮುಖಾಂತರ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಉಗ್ರ ನಿಗ್ರಹ ದಳ ತನಿಖೆ ನಡೆಸುತ್ತಿದೆ.

(ಸೌಜನ್ಯ – TV9 Bharatvarsh)

1. ಪಾಕಿಸ್ತಾನಿ ಸೀಮಾ ಹೈದರ ವಿವಾಹಿತ ಮಹಿಳೆಯು ತನ್ನ 4 ಮಕ್ಕಳೊಂದಿಗೆ ಪರಾರಿಯಾಗಿ ಭಾರತಕ್ಕೆ ಬಂದಿದ್ದು, ಸದ್ಯ ನೋಯ್ಡಾದಲ್ಲಿ ಸಚಿನ ಎಂಬ ತನ್ನ ಪ್ರೇಮಿಯೊಂದಿಗೆ ನೆಲೆಸಿದ್ದಾಳೆ. ಇಬ್ಬರು ಆನ್‌ಲೈನ್ ಗೇಮ್ PUBG ಮೂಲಕ ಪರಸ್ಪರ ಪರಿಚಯವಾದರು ಮತ್ತು ಅದರಿಂದ ಪ್ರೀತಿ ಹುಟ್ಟಿತು. ಇದರಿಂದ ಸೀಮಾ ಕರಾಚಿಯಿಂದ ದುಬೈಗೆ, ದುಬೈನಿಂದ ನೇಪಾಳಕ್ಕೆ ಮತ್ತು ನೇಪಾಳದಿಂದ ದೆಹಲಿಗೆ ಬಂದಿದ್ದಾಳೆ. ಆಕೆ ಹಿಂದೂ ಧರ್ಮವನ್ನು ಸ್ವೀಕರಿಸಿ ಸಚಿ‌ನನ್ನು ಮದುವೆಯಾಗಲು ಹೊರಟಿದ್ದಳು. ಈ ಮಾಹಿತಿ ಸಿಕ್ಕ ನಂತರ ಪೊಲೀಸರು ಸೀಮಾ ಮತ್ತು ಸಚಿ‌ನನ್ನು ಬಂಧಿಸಿದ್ದಾರೆ. ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದರಿಂದ ಸದ್ಯ ಅವರಿಬ್ಬರು ಹೊರಗಿದ್ದಾರೆ.

2. ನಾಗರ ಅವರು, ಸೀಮಾ ಹೈದರ ಇವಳು ಸಾಮಾನ್ಯ ಮಹಿಳೆ ಅಲ್ಲ ಎಂದು ಹೇಳಿದ್ದಾರೆ. ಇವಳು ಪಾಕಿಸ್ತಾನದ ಗೂಢಚಾರೆಯಾಗಿದ್ದು. ಇವಳು ದೇಶಕ್ಕೆ ದೊಡ್ಡ ಅಪಾಯ ತಂದೊಡ್ಡಬಹುದು. 5ನೇ ತರಗತಿಯಲ್ಲಿ ಅನುತ್ತೀರ್ಣಳಾದ ಈ ಮಹಿಳೆ ಇಂಗ್ಲಿಷ‌ನಲ್ಲಿ ಸಹಜವಾಗಿ ಹೇಗೆ ಮಾತನಾಡಲು ಸಾಧ್ಯ ?

3. ಮತ್ತೊಂದೆಡೆ, ಸೀಮಾ ಹೈದರ್, ನಾನು ಮತ್ತೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ, ಏಕೆಂದರೆ ನಾನು ಅಲ್ಲಿಗೆ ಹೋದರೆ ನನ್ನನ್ನು ಕೊಲ್ಲಬಹುದು. ಏನೇ ಆಗಲಿ ನಾನು ಭಾರತದಲ್ಲಿಯೇ ಇರುತ್ತೇನೆ. ನಾನು ಸಚಿನ ಜೊತೆ ಇರಲು ಬಯಸುತ್ತೇನೆ ಎಂದು ಹೇಳಿದ್ದಾಳೆ.