ಹಸಿವಿನಿಂದ ಕಂಗೆಟ್ಟಿರುವ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿದೇಶಿ ಸಂಸ್ಥೆಯು ನಡೆಸಲಿದೆ !

ಇಸ್ಲಾಮಾಬಾದ (ಪಾಕಿಸ್ತಾನ) – ಹಸಿವಿನಿಂದ ಕಂಗೆಟ್ಟಿರುವ ಹಾಗೂ ಸಾಲದ ಹೊರೆಯಿಂದ ತತ್ತರಿಸಿರುವ ಜಿಹಾದಿ ಪಾಕಿಸ್ತಾನಕ್ಕೆ ತನ್ನ ರಾಜಧಾನಿಯಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿದೇಶಿ ಸಂಸ್ಥೆಗೆ ನಡೆಸಲು ನೀಡುವ ಪ್ರಮೇಯ ಬಂದಿದೆ. ಇದಕ್ಕಾಗಿ ಅದು ಒಂದು ಸಮಿತಿಯನ್ನು ಸ್ಥಾಪಿಸಿದೆ. ಈ ದೃಷ್ಟಿಯಿಂದ ಪಾಕಿಸ್ತಾನವು ತನ್ನ ನಗರ ಉಡ್ಡಿಯಾನಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಜುಲೈ ತಿಂಗಳ ಒಳಗೆ ಬದಲಾವಣೆ ಮಾಡಲು ಪ್ರಯತ್ನಿಸುತ್ತಿದೆ, ಎಂಬ ಮಾಹಿತಿಯನ್ನು ಪಾಕಿಸ್ತಾನದ ಕೇಂದ್ರೀಯ ಅರ್ಥ ಮಂತ್ರಿಯಾದ ಇಷಾಕ ಡಾರರವರು ನೀಡಿದ್ದಾರೆ. ಈ ಸಂಪೂರ್ಣ ಪ್ರಕ್ರಿಯೆಯು ಆಗಸ್ಟ್ ನ 12 ರ ಮೊದಲು ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಆಗಸ್ಟ್ 12 ಗೆ ಈಗಿನ ಸರಕಾರವು ವಿಸರ್ಜನೆಗೊಳ್ಳುತ್ತಿದ್ದು ಆನಂತರ ಚುನಾವಣೆ ನಡೆಯಲಿದೆ, ಎಂಬ ಮಾಹಿತಿಯನ್ನು ಪ್ರಸಾರಮಧ್ಯಮಗಳು ನೀಡಿವೆ.