ಯುರೋಪಿಯನ್ ಸಂಸತ್ತಿನಲ್ಲಿ ಮಣಿಪುರ ಗಲಭೆಯ ಕುರಿತಾದ ಠರಾವು ಎಂದರೆ, ‘ವಸಾಹತುಶಾಹಿ ಮಾನಸಿಕತೆ’ ! – ಭಾರತ

ಮಣಿಪುರದಲ್ಲಿ ಬುಗಿಲೆದ್ದಿರುವ ಗಲಭೆ ಪ್ರಕರಣ

ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ ಬಾಗಚಿ

ನವ ದೆಹಲಿ – ಮಣಿಪುರದಲ್ಲಿ ನಡೆಯುತ್ತಿರುವ ಕುಕಿ ಮತ್ತು ಮೈತೆಯಿ ಜನಾಂಗದಲ್ಲಿನ ಘರ್ಷನೆಯ ಕುರಿತು ಯುರೋಪಿಯನ್ ಸಂಸತ್ತಿನಲ್ಲಿ ಭಾರತದ ವಿರುದ್ಧ ಠರಾವು ಅಂಗೀಕರಿಸಿದೆ. ಭಾರತ ಇದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಾ ಯುರೋಪಿಯನ್ ಸಂಸತ್ತಿಗೆ ಪ್ರತಿಕ್ರಿಯೆ ನೀಡುವಾಗ, ಇದು ವಸಾಹತುಶಾಹಿ ಮಾನಸಿಕತೆಯ ದರ್ಶನ’, ಎಂದು ಹೇಳಿದೆ. ಭಾರತದ ಅಂತರಿಕ ಅಂಶಗಳಲ್ಲಿ ಮೂಗು ತೂರಿಸುವದು ಖಂಡನೀಯವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರಾದ ಅರಿಂದಮ ಬಾಗಚಿ ಇವರು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

೧. ಬಾಗಚಿ ಮಾತು ಮುಂದುವರೆಸಿ, ಭಾರತದ ನ್ಯಾಯ ವ್ಯವಸ್ಥೆಯ ಸಹಿತ ಎಲ್ಲಾ ಹಂತದಲ್ಲಿ ಸರಕಾರಿ ವ್ಯವಸ್ಥೆ ಮಣಿಪುರದಲ್ಲಿನ ಚಟುವಟಿಕೆಯ ಬಗ್ಗೆ ನಿಗಾವಹಿಸಿದೆ. ನಾವು ಎಲ್ಲಾ ರೀತಿಯಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕೆ ಕಟಿಬದ್ಧರಾಗಿದ್ದೇವೆ. ಆದ್ದರಿಂದ ಯುರೋಪಿಯನ್ ಸಂಸತ್ತಿನಲ್ಲಿ ಅವರು ತಮ್ಮ ಸಮಯವನ್ನು ತಮ್ಮ ಸಮಸ್ಯೆಗಳ ಬಗ್ಗೆ ಗಮನಹರಿಸುವುದಕ್ಕಾಗಿ ಪರಿಣಾಮಕಾರಿಯಾಗಿ ಉಪಯೋಗಿಸಬೇಕು.

೨. ಯುರೋಪಿಯನ್ ಸಂಸತ್ತಿನಲ್ಲಿ ಜುಲೈ ೧೩ ರಂದು ಮಣಿಪುರದಲ್ಲಿನ ಚಟುವಟಿಕೆಯ ಬಗ್ಗೆ ಚರ್ಚೆ ನಡೆಸಿ ಇದರ ಕುರಿತು ಆಪತ್ಕಾಲಿನ ಠರಾವು ಅಂಗೀಕರಿಸಿತು. ಫ್ರಾನ್ಸಿನ ಸ್ಟ್ಯಾಟ್ಸಬರ್ಗ ಇಲ್ಲಿ ಆಯೋಜಿಸಲಾದ ಸಂಸತ್ ಅಧಿವೇಶನದಲ್ಲಿ ಭಾರತದಲ್ಲಿನ ತಥಾಕಥಿತ ಮಾನವ ಹಕ್ಕುಗಳ ಆಗುತ್ತಿರುವ ಹನನದ ಬಗ್ಗೆ ಚರ್ಚೆ ಆಯೋಜಿಸಲಾಗಿತ್ತು.

೩. ಕಳೆದ ಕೆಲವು ತಿಂಗಳಿಂದ ಮಣಿಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಕ್ರೈಸ್ತರಾಗಿರುವ ಕುಕಿ ಜನಾಂಗದ ಜನರು ಮೈತೆಯಿ ಈ ಹಿಂದೂ ಜನಾಂಗದ ಜನರ ಮೇಲೆ ದಾಳಿ ನಡೆಸುತ್ತಿದ್ದಾರೆ. ಎರಡು ಗುಂಪುಗಳ ಘರ್ಷಣೆ ಆರಂಭವಾಗಿ ಇಲ್ಲಿಯವರೆಗೆ ೧೫೦ ಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ಅಂತರಿಕ ವಿಷಯಗಳಲ್ಲಿ ಮೂಗು ತೂರಿಸುವ ಯುರೋಪಿಯನ್ ಯೂನಿಯನಿಗೆ ಕೇವಲ ಖಂಡತುಂಡಾಗಿ ಉತ್ತರ ನೀಡುವ ಬದಲು ಅದಕ್ಕೆ ಪಾಠ ಕಲಿಸುವುದು ಅವಶ್ಯಕ !