ಸಿಡ್ನಿ (ಆಸ್ಟ್ರೇಲಿಯಾ) – ಆಸ್ಟ್ರೇಲಿಯಾದಲ್ಲಿ ಖಲಿಸ್ತಾನ್ ಬೆಂಬಲಿಗರು ನಿರಂತರವಾಗಿ ಭಾರತೀಯರನ್ನು ಗುರಿಯಾಗಿಸಿದ್ದಾರೆ. ಇಲ್ಲಿನ ಮೇರಿಲ್ಯಾಂಡ್‌ಸ ಈ ಉಪನಗರದಲ್ಲಿ ಖಾಲಿಸ್ತಾನ್ ಬೆಂಬಲಿಗರು ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಕಬ್ಬಿಣದ ಸಲಾಕೆಯಿಂದ ಅಮಾನುಷವಾಗಿ ಥಳಿಸಿದ್ದಾರೆ.
ಭಾರತೀಯ ವಿದ್ಯಾರ್ಥಿಯು ಓದುವುದರ ಜೊತೆಗೆ ಡ್ರೈವರ್ ಆಗಿ ಕೆಲಸ ಮಾಡುತ್ತಾನೆ. ಜುಲೈ ೧೪ ರಂದು ಆತ ಬೆಳಿಗ್ಗೆ ೫:೩೦ ಕ್ಕೆ ಕೆಲಸದಲ್ಲಿರುವಾಗ ೪-೫ ಖಲಿಸ್ತಾನ್ ಬೆಂಬಲಿಗರು ಅವನ ಮೇಲೆ ದಾಳಿ ಮಾಡಿದರು. ಈತ ಕಾರಿನಲ್ಲಿರುವಾಗಲೇ ವಿದ್ಯಾರ್ಥಿಯ ಕೆನ್ನೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದಿದ್ದಾರೆ. ಬಳಿಕ ವಿದ್ಯಾರ್ಥಿಯನ್ನು ವಾಹನದಿಂದ ಕೆಳಗಿಳಿಸಿ ಹೊಡೆದಿದ್ದಾರೆ. ಈ ವಿದ್ಯಾರ್ಥಿಯು, ಇಬ್ಬರು ಹೊಡೆಯುತ್ತಿರುವುದನ್ನು ವಿಡಿಯೊ ಮಾಡುತ್ತಿದ್ದರೇ ಉಳಿದವರು ಹೊಡೆಯುತ್ತಿದ್ದರು ಎಂದು ಹೇಳಿದ್ದಾನೆ. ಈ ಹಲ್ಲೆಯಲ್ಲಿ ವಿದ್ಯಾರ್ಥಿ ಗಾಯಗೊಂಡಿದ್ದು, ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಈ ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
(ಸೌಜನ್ಯ :Oneindia News)
ಸಂಪಾದಕರ ನಿಲುವುಪ್ರಧಾನಿ ಮೋದಿಯವರು ಇತ್ತೀಚೆಗಷ್ಟೇ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಪ್ರಧಾನ ಮಂತ್ರಿಯವರು ಭಾರತೀಯರಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದರು, ಅದು ಎಷ್ಟು ಹಗುರವಾಗಿ ಪರಿಗಣಿಸಿದ್ದಾರೆ ಎನ್ನುವುದನ್ನು ಈ ಘಟನೆಯಿಂದ ಗಮನಕ್ಕೆ ಬರುತ್ತದೆ ! ಈಗ ಭಾರತವು ಆಸ್ಟ್ರೇಲಿಯಾವನ್ನು ಪ್ರಶ್ನೀಸುತ್ತದೆಯೇ ? |