ಅಜಂಗಡದಲ್ಲಿ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಿದ್ದ 5 ಕ್ರೈಸ್ತ ಮಹಿಳೆಯರ ಬಂಧನ

ಅಜಂಗಡ (ಉತ್ತರಪ್ರದೇಶ) – ಜಿಲ್ಲೆಯ ಸಿಕಂದರ ಪಟ್ಟಿ ಗ್ರಾಮದಲ್ಲಿ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸಿದ 5 ಕ್ರೈಸ್ತ ಮಹಿಳೆಯರನ್ನು ಬಂಧಿಸಲಾಗಿದೆ. ಪ್ರಾರ್ಥನಾಸಭೆಗಳ ಹೆಸರಿನಲ್ಲಿ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿರುವ ಆರೋಪ ಹೊರಿಸಲಾಗಿದೆ.

1. ಪ್ರಸಾರ ಮಾಧ್ಯಮಗಳು ನೀಡಿರುವ ಮಾಹಿತಿಯನುಸಾರ ಸಿಕಂದರ ಪಟ್ಟಿ ಗ್ರಾಮದ ಬ್ರಿಜೇಶ ಪಾಂಡಯವರು ತಮ್ಮ ಗ್ರಾಮದಲ್ಲಿ ನಡೆಯುತ್ತಿರುವ ಮತಾಂತರದ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದರು. `ವಿಜಯ ಬಿಂದ್ರಾ ಹೆಸರಿನ ವ್ಯಕ್ತಿಯ ಹೊಲದಲ್ಲಿ ನಿರ್ಮಿಸಿರುವ ಮನೆಯಲ್ಲಿ ಕೆಲವು ಜನರು ಗುಂಪುಗೂಡಿ ಹಿಂದೂ ದೇವತೆಗಳನ್ನು ಅಪಮಾನ ಮಾಡುವ ಸಂಗೀತವನ್ನು ನುಡಿಸುತ್ತಿದ್ದಾರೆ’, ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

2. ಈ ದೂರಿನ ಆಧಾರದಲ್ಲಿ ಪೊಲೀಸರು ಘಟನಾಸ್ಥಳವನ್ನು ತಲುಪಿದರು. ದಾಳಿಯ ಸಮಯದಲ್ಲಿ ಪೊಲೀಸರಿಗೆ ಕೆಲವು ಆಕ್ಷೇಪಾರ್ಹ ಸಾಮಗ್ರಿಗಳು, ಛಾಯಾಚಿತ್ರಗಳು ಮತ್ತು ವಾದ್ಯಗಳು ಪತ್ತೆಯಾದವು. ಬೆದರಿಸುವುದು ಮತ್ತು ಆಮಿಷವನ್ನೊಡ್ಡಿ ಮತಾಂತರಕ್ಕೆ ಪ್ರವೃತ್ತಗೊಳಿಸುವುದು ಈ ಆರೋಪದಡಿಯಲ್ಲಿ ಪೊಲೀಸರು 5 ಮಹಿಳೆಯರನ್ನು ಬಂಧಿಸಿದರು. ಆರೋಪಿ ಮಹಿಳೆಯರು ಸುಲ್ತಾನಪುರ ಮತ್ತು ಜೌನಪುರ ಜಿಲ್ಲೆಯವರಾಗಿದ್ದಾರೆ.

ಕ್ರೈಸ್ತ ಪಾದ್ರಿ ಹಲ್ಲೆ ನಡೆಸಿರುವುದಾಗಿ ಬಜರಂಗ ದಳದ ಪದಾಧಿಕಾರಿಯ ಆರೋಪ

ಮತ್ತೊಂದು ಘಟನೆಯಲ್ಲಿ ಬಹರಾಯಿಚ್ ಜಿಲ್ಲೆಯಲ್ಲಿ ಓರ್ವ ಪಾದ್ರಿಯು ತನ್ನ ಕೆಲವು ಸಹಚರರೊಂದಿಗೆ ಬಜರಂಗ ದಳದ ಅವಧ್ ಪ್ರಾಂತ್ಯದ ಸಂಚಾಲಕ ದೀಪಾಂಶು ಶ್ರೀವಾಸ್ತವ ಮೇಲೆ ಹಲ್ಲೆ ಮಾಡಿದ್ದಾರೆ. ಶ್ರೀವಾಸ್ತವ ಅವರು, `ಕೆಲವು ದಿನಗಳ ಹಿಂದೆ ಪಾದ್ರಿ ಅನಿಲ ವಿರುದ್ಧ ಹಿಂದೂ ದೇವತೆಗಳನ್ನು ಅಪಮಾನ ಮಾಡಿರುವ ಪ್ರಕರಣದಲ್ಲಿ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದೆನು. ಈ ಕಾರಣದಿಂದ ಪಾದ್ರಿ ಅನಿಲ ನನ್ನನ್ನು ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದನು. (ಪ್ರೀತಿ ಮತ್ತು ಶಾಂತಿಯ ಸಂದೇಶ ನೀಡುವ ಪಾದ್ರಿಗಳ ನಿಜ ರೂಪ ! – ಸಂಪಾದಕರು) ಜುಲೈ 11, 2023 ರಂದು ನಾನು ಮನೆಗೆ ಹಿಂದಿರುಗುತ್ತಿದ್ದಾಗ ಬೈಕ್ ನಿಂದ ಬಂದ 4 ಜನರು ನನ್ನ ಮೇಲೆ ದಾಳಿ ಮಾಡಿದರು’ ಎಂದು ಹೇಳಿದರು. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಸಂಪಾದಕರ ನಿಲುವು

ಉತ್ತರಪ್ರದೇಶದಲ್ಲಿ ಹಿಂದುತ್ವನಿಷ್ಠ ಭಾಜಪ ಸರಕಾರ ಇರುವಾಗ ಕ್ರೈಸ್ತ ಮಿಶನರಿಗಳು ಹಿಂದೂಗಳನ್ನು ಮತಾಂತರಗೊಳಿಸಲು ಧೈರ್ಯ ಮಾಡಬಾರದು ಎಂದೇ ಹಿಂದೂಗಳಿಗೆ ಅನಿಸುತ್ತದೆ !