ಸಿಂಗಾಪುರದಲ್ಲಿ ಹತ್ಯೆಗೆ ಸಹಾಯ ಮಾಡಿದ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ 22 ತಿಂಗಳ ಜೈಲು ಶಿಕ್ಷೆ !

ಸಿಂಗಾಪುರ – ಜುಲೈ ೧೧ ರಂದು ಸಿಂಗಾಪುರ ನ್ಯಾಯಾಲಯವು ಭಾರತೀಯ ಮೂಲದ ಎಸ್. ಮಗೇಶ್ವವರನ್ ಹೆಸರಿನ ಅಪರಾಧಿಗೆ 22 ತಿಂಗಳ ಜೈಲು ಶಿಕ್ಷೆ ವಿಧಿಸಿತು. ‘ಮಗೇಶ್ವರನ್ ವ್ಯಕ್ತಿ ಒಬ್ಬರಿಗೆ ನೀಡಿದ ಈಟಿಯಿಂದ ಆ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿರುವ ಆರೋಪ ಸಾಬೀತಾಗಿದೆ.’ ಈ ಹಿಂದೆಯೂ ಮಗೇಶ್ವರನ್ ಅನೇಕ ಅಪರಾಧಗಳನ್ನು ಮಾಡಿದ್ದು, ಅದರಲ್ಲಿ ಜನರಿಗೆ ತೊಂದರೆ ಕೊಡುವುದು, ಈಟಿ ಹೊಂದಿರುವುದು ಮತ್ತು ಸಂಚಾರಕ್ಕೆ ಸಂಬಂಧಿಸಿದ ಅನೇಕ ಅಪರಾಧಗಳು ಅವನ ಮೇಲಿದೆ.

ಇದಕ್ಕೂ ಮೊದಲು ಈಟಿ ಹೊಂದಿದ ಪ್ರಕರಣದಲ್ಲಿ ೨೦೧೯ ರಲ್ಲಿ ೩ ವರ್ಷ ೩ ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ೨೦೨೦ ರಲ್ಲಿ ಅವನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಜೂನ್ ೨೦೨೨ ರಲ್ಲಿ ಶೆರನ್ ರಾಜ ಬಾಲಸುಬ್ರಮಣ್ಯಂ ಹೆಸರಿನ ವ್ಯಕ್ತಿಗೆ ಈಟಿಯನ್ನು ಕೊಟ್ಟಿದ್ದನು. ಇದನ್ನು ಉಪಯೋಗಿಸಿ ಬಾಲಸುಬ್ರಹ್ಮಣ್ಯಂ ಮತ್ತೊಬ್ಬ ವ್ಯಕ್ತಿಯ ಹತ್ಯೆ ಮಾಡಿದ್ದನು.