ಶಾಲೆಯಲ್ಲಿ ಟಿಕಲಿ ಹಚ್ಚಿಕೊಂಡು ಬಂದಿದ್ದ ಹಿಂದೂ ವಿದ್ಯಾರ್ಥಿನಿಗೆ ಶಿಕ್ಷಕಿಯಿಂದ ಥಳಿತ, ಅವಮಾನ ತಾಳಲಾರದೇ ಆತ್ಮಹತ್ಯೆಗೆ ಶರಣು !

ಧನಬಾದನ ಸೇಂಟ್ ಝೆವಿಯರ್ಸ್ ಶಾಲೆಯಲ್ಲಿನ ಘಟನೆ !

ಶಿಕ್ಷಕಿ ಮತ್ತು ಮುಖ್ಯೋಪಾಧ್ಯಾಯರ ಬಂಧನ

ಧನಬಾದ (ಜಾರ್ಖಂಡ್) – ಇಲ್ಲಿಯ ತೇತುಲಮಾರಿ ಪ್ರದೇಶದಲ್ಲಿರುವ ಸೆಂಟ್ ಝೆವಿಯರ್ಸ್ ಶಾಲೆಯಲ್ಲಿ ಹಿಂದೂ ವಿಧ್ಯಾರ್ಥಿನಿಯು ಹಣೆಗೆ ಟಿಕಲಿ ಹಚ್ಚಿಕೊಂಡು ಹೋಗಿದ್ದರಿಂದ ತರಗತಿಯಲ್ಲಿ ಎಲ್ಲರ ಎದುರು ಶಿಕ್ಷಕಿಯು ಥಳಿಸಿದ್ದಾರೆ. ಈ ವಿಷಯದ ಬಗ್ಗೆ ವಿಚಾರಿಸಲು ಹೋಗಿರುವ ವಿದ್ಯಾರ್ಥಿನಿಯ ತಾಯಿಗೆ ಮುಖ್ಯೋಪಾಧ್ಯಾಯರು ಅವಮಾನಿಸಿ ಶಾಲೆಯಿಂದ ಹೊರದೂಡಿದ್ದಾರೆ. ಇದರಿಂದಾದ ಅವಮಾನ ತಾಳಲಾರದೇ ವಿದ್ಯಾರ್ಥಿನಿಯು ಮನೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಜುಲೈ ೧೦ ರಂದು ನಡೆದಿದೆ. ಆತ್ಮಹತ್ಯೆಯ ಮೊದಲು ಆ ವಿದ್ಯಾರ್ಥಿನಿ ಒಂದು ಚೀಟಿ ಬರೆದಿದ್ದಾಳೆ. ಘಟನೆಯ ನಂತರ ಗ್ರಾಮಸ್ಥರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಈ ಪ್ರಕರಣದ ದೂರು ದಾಖಲಿಸಿಕೊಂಡು ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಂಬಂಧಪಟ್ಟ ಶಿಕ್ಷಕಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ಬಗ್ಗೆ ರಾಷ್ಟ್ರೀಯ ಬಾಲ ವಿಕಾಸ ಅಧಿಕಾರ ಸಂರಕ್ಷಣಾ ಆಯೋಗವು ಕೂಡ ಗಮನಹರಿಸಿದೆ.

ಜಾರ್ಖಂಡಿನ ಭಾಜಪದ ಪ್ರದೇಶಾಧ್ಯಕ್ಷ ಬಾಬುಲಾಲ್ ಮರಾಂಡಿ ಇವರು ಟ್ವೀಟ್ ಮಾಡಿ, ಶಾಲೆಯ ಅನುಮತಿ ರದ್ದು ಪಡಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ. ಮರಾಂಡಿ ಇವರು, ಇಂತಹ ಶಾಲೆಗಳಿಗೆ ಸನಾತನದ ಪ್ರತೀಕಗಳ ಬಗ್ಗೆ ಇಷ್ಟೊಂದು ದ್ವೇಷ ಏಕೆ ಇದೆ, ಇದೇ ತಿಳಿಯುತ್ತಿಲ್ಲ. ಎಂದು ಹೇಳಿದ್ದಾರೆ.

ಸಂಪಾದಕರ ನಿಲುವು 

* ಬಹುಸಂಖ್ಯಾತ ಹಿಂದೂ ದೇಶದಲ್ಲಿ ಇಂತಹ ಶಾಲೆಗಳಿಂದ ಹಿಂದೂ ವಿದ್ಯಾರ್ಥಿನಿಯರಿಗೆ ಟಿಕಲಿ ಹಚ್ಚಿಕೊಳ್ಳಲು ನಿರಂತರ ನಡೆಯುವ ವಿರೋಧವು ಹಿಂದುಗಳಿಗೆ ಲಚ್ಚಾಸ್ಪದ !

* ಹಿಂದುಗಳು ಅವರ ಮಕ್ಕಳಿಗೆ ಇಂತಹ ಮಾನಸಿಕತೆಯ ಶಾಲೆಯಲ್ಲಿ ಕಲಿಯಲು ಕಳಿಸುವುದು ಸ್ವಂತ ಸಂಸ್ಕೃತಿ ಮತ್ತು ಧರ್ಮಾಚರಣೆಯಿಂದ ದೂರ ಹೋಗುತ್ತಿದ್ದಾರೆ ಮತ್ತು ಇದೇ ಅವರ ಅಧೋಗತಿಗೆ ಕಾರಣವಾಗುತ್ತಿದೆ. ಇದು ಹಿಂದುಗಳ ಗಮನಕ್ಕೆ ಬರುವ ಸಾಧ್ಯತೆ ಇಲ್ಲದಿರುವುದರಿಂದ ಈ ಸ್ಥಿತಿ ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !