ಸರ್ವೋಚ್ಚ ನ್ಯಾಯಾಲಯದಿಂದ ಈ ಹಿಂದೆ ಕೂಡ ೫ ಸಾರಿ ಸಮಯ ಮಿತಿ ಹೆಚ್ಚಳ !
(ಪ್ಲೇಸಸ್ ಆಫ್ ವರ್ಷಿಪ್ ಆಕ್ಟ್ ಎಂದರೆ ಆಗಸ್ಟ್ ೧೫,೧೯೪೭ ರಲ್ಲಿ ದೇಶದಲ್ಲಿನ ಧಾರ್ಮಿಕ ಸ್ಥಳಗಳ ಸ್ಥಿತಿ ಹೇಗಿತ್ತೋ ಅದನ್ನು ಹಾಗೆಯೇ ಇಡಬೇಕು, ಎನ್ನುವ ಬಗ್ಗೆ ೧೯೯೦ ರಲ್ಲಿ ರೂಪಿಸಿರುವ ಕಾನೂನು)
ನವದೆಹಲಿ – ಪ್ಲೇಸಸ್ ಆಫ್ ವರ್ಷಿಪ್ ಆಕ್ಟ್ ೧೯೯೦ ರ ವಿರೋಧಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿರುವ ಮನವಿಯ ಬಗ್ಗೆ ಕೇಂದ್ರ ಸರಕಾರ ಪ್ರಾಮಿಸರಿ ನೋಟ್ ಪ್ರಸ್ತುತಪಡಿಸುವುದಕ್ಕಾಗಿ ಮತ್ತೊಮ್ಮೆ ಹೆಚ್ಚಿನ ಕಾಲಾವಕಾಶ ಕೋರಿದೆ. ಇದಕ್ಕೆ ನ್ಯಾಯಾಲಯವು ಅಕ್ಟೋಬರ್ ೩೧ ರ ವರೆಗೆ ಹೆಚ್ಚಿನ ಕಾಲಾವಕಾಶ ನೀಡಿದೆ.
೧. ಕೇಂದ್ರ ಸರಕಾರದ ಪರವಾಗಿ ಅಭಿಪ್ರಾಯವನ್ನು ಮಂಡಿಸುವಾಗ ಭಾರತದ ಸಾಲಿಸಿಟರ ಜನರಲ್ ತುಷಾರ ಮೆಹತಾ ಇವರು, ನಮ್ಮ ಎದುರು ಕಾನೂನಿಗೆ ಸವಾಲು ಹಾಕುವಂತಹ ಅರ್ಜಿ ಇದ್ದು ಸರಕಾರಕ್ಕೆ ಇದರ ಹಿನ್ನೆಲೆಯಲ್ಲಿ ಪ್ರಾಮಿಸಲಿ ನೋಟ್ ಪ್ರಸ್ತುತ ಪಡಿಸಬೇಕಾಗಿದೆ. ವಿಷಯದ ಗಾಂಭೀರ್ಯತೆಯನ್ನು ಗಮನಿಸಿ ನಮಗೆ ಈ ಕುರಿತು ಇನ್ನು ಸ್ವಲ್ಪ ಕಾಲಾವಕಾಶ ಬೇಕಾಗಿದೆ ಎಂದು ನ್ಯಾಯಾಲಯಕ್ಕೆ ಹೇಳಿದರು.
೨. ಸರ್ವೋಚ್ಚ ನ್ಯಾಯಾಲಯವು ಸಾಮಾನ್ಯವಾಗಿ ಎರಡೂಕಾಲು ವರ್ಷಗಳ ಹಿಂದೆ ಮಾರ್ಚ್ ೧೨,೨೦೨೧ ರಂದು ಇದರ ಉತ್ತರ ನೀಡಲು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಅದರ ನಂತರ ಸಪ್ಟೆಂಬರ್ ೯,೨೦೨೨, ಅಕ್ಟೋಬರ್ ೧೨,೨೦೨೨, ನವಂಬರ್ ೧೪,೨೦೨೨, ಜನವರಿ ೯,೨೦೨೩ ಮತ್ತು ಏಪ್ರಿಲ್ ೫,.೨೦೨೩ ರಂದು ಸರಕಾರಕ್ಕೆ ಹೆಚ್ಚಿನ ಕಾಲಾವಕಾಶ ಒದಗಿಸಿದೆ.
प्लेसेज ऑफ वर्शिप एक्ट-1991 : सुप्रीम कोर्ट ने केंद्र को जवाब दाखिल करने के लिए 31 अक्टूबर तक का समय दिया https://t.co/BdRdIpKU6r #places_of_worship_act_1991 #SupremeCourt #ModiGovt #October31
— Lagatar News (@lagatarIN) July 11, 2023