ದೆಹಲಿ ಗಲಭೆಯಲ್ಲಿ ಪೊಲೀಸ್ ಹವಾಲದಾರನ ಹತ್ಯೆ ಮಾಡಿದ್ದ ಮಹಮ್ಮದ್ ಖಾಲಿದನ ಬಂಧನ !

ನವ ದೆಹಲಿ – ದೆಹಲಿಯಲ್ಲಿ ೨೦೨೦ ರಲ್ಲಿ ಮತಾಂಧ ಮುಸಲ್ಮಾನರು ನಡೆಸಿರುವ ಗಲಭೆಯಲ್ಲಿ ಪೊಲೀಸ್ ಹವಾಲ್ದಾರ ರತನ ಲಾಲ ಇವರ ಬರ್ಬರ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಮುಖ್ಯ ಆರೋಪಿ ಮಹಮ್ಮದ್ ಖಾಲಿದ್ ಇವನನ್ನು ಮಣಿಪುರದ ಮ್ಯಾನ್ಮಾರ್ ಗಡಿಯಲ್ಲಿ ಬಂದಿಸಲಾಗಿದೆ. ಖಾಲಿದನ ಮಾಹಿತಿ ನೀಡುವವರಿಗೆ ಪೊಲೀಸರಿಂದ ೧ ಲಕ್ಷ ರೂಪಾಯಿಯ ಬಹುಮಾನ ಕೂಡ ಘೋಷಿಸಲಾಗಿತ್ತು. ಖಾಲಿದ ಇವನ ವಿಚಾರಣೆಯಲ್ಲಿ, ‘ಈ ಗಲಭೆಯ ಮೊದಲು ಅವನ ಮನೆಯಲ್ಲಿ ಒಂದು ರಹಸ್ಯ ಸಭೆ ನಡೆಸಿದ್ದರು. ಅದರಲ್ಲಿ ಮುಸಲ್ಮಾನರು ಮನೆಯಲ್ಲಿ ಕಬ್ಬಿಣದ ಸಲಾಕೆ ಮುಂತಾದ ಶಸ್ತ್ರಗಳನ್ನು ಇಡುವಂತೆ ನಿರ್ಧರಿಸಲಾಗಿತ್ತು’. ಎಂಬುದು ಒಪ್ಪಿಕೊಂಡಿದ್ದಾನೆ. ಖಲಿದನ ಸಹೋದರ ಆಯಾಝ್ ಇವನನ್ನು ಕೂಡ ಕಳೆದ ತಿಂಗಳು ಈ ಗಲಭೆಯ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಗಲಭೆಯಲ್ಲಿ ೫೦ ಜನರು ಸಾವನ್ನಪ್ಪಿದರು ಹಾಗೂ ನೂರಾರು ಜನರು ಗಾಯಗೊಂಡಿದ್ದರು ಹಾಗೂ ಕೋಟಿಗಟ್ಟಲೆ ರೂಪಾಯಿಯ ನಷ್ಟವಾಗಿತ್ತು.

ಸಂಪಾದಕೀಯ ನಿಲುವು

ಇಂತಹವರ ಮೇಲೆ ತ್ವರಿತ ಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ಆಗಲು ಸರಕಾರ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ !