ಶ್ರೀ ಕೃಷ್ಣ ಜನ್ಮ ಭೂಮಿಯಲ್ಲಿನ ಈದ್ಗಾ ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸುವ ಬೇಡಿಕೆಯ ಅರ್ಜಿ ಅಲಹಾಬಾದ್ ಉಚ್ಚ ನ್ಯಾಯಾಲದಿಂದ ತಿರಸ್ಕಾರ

ಪ್ರಯಾಗರಾಜ (ಉತ್ತರಪ್ರದೇಶ) – ಈದ್ಗಾ ಮಸೀದಿ ಆಡಳಿತ ಸಮಿತಿ ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಇವರಿಂದ ಶ್ರೀಕೃಷ್ಣಜನ್ಮಭೂಮಿಯ ಮೊಕದ್ದಮೆಯ ಕುರಿತಾದ ಆಕ್ಷೇಪದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಮೊದಲು ಮಥೂರಾದಲ್ಲಿನ ದಿವಾಣಿ ನ್ಯಾಯಾಲಯಕ್ಕೆ ಶ್ರೀಕೃಷ್ಣಜನ್ಮ ಭೂಮಿಯಲ್ಲಿನ ಈದ್ಗಾಹ ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸುವ ಅರ್ಜಿಯ ಕುರಿತು ನಿರ್ಣಯ ತೆಗೆದುಕೊಳ್ಳಲು ಆದೇಶ ನೀಡುವಂತೆ ಹಿಂದೂ ಪಕ್ಷವು ನೀಡಿದ್ದ ಅರ್ಜಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

ಜನವರಿ ೨೦೨೩ ರಂದು ಮಥುರಾದಲ್ಲಿನ ದಿವಾಣಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿ ಶ್ರೀ ಕೃಷ್ಣ ಜನ್ಮ ಭೂಮಿಯನ್ನು ಶಾಹಿ ಈದ್ಗಾ ಮಸೀದಿಯ ಸ್ಥಳದಲ್ಲಿ ಪುನರ್ಸ್ಥಾಪಿತಗೊಳಿಸುವಂತೆ ಬೇಡಿಕೆ ಸಲ್ಲಿಸಲಾಗಿತ್ತು. ಅದಕ್ಕೆ ಶಾಹಿ ಈದ್ಗಾ ಮಸೀದಿ ಆಡಳಿತ ಸಮಿತಿ ಮತ್ತು ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ದಿಂದ ಉಚ್ಚ ನ್ಯಾಯಾಲಯದಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.