ಉತ್ತರ ಪ್ರದೇಶದಲ್ಲಿ ಜಿಹಾದಿ ಭಯೋತ್ಪಾದಕರು ಟ್ರಕ್‌ಗಳ ಮೂಲಕ ದಾಳಿ ಮಾಡಿ ಜನರನ್ನು ಹತ್ತಿಕ್ಕಲು ನಿಯೋಜಿಸಿದ್ದರು !

ಭಯೋತ್ಪಾದಕ ಸದ್ದಾಂ ಶೇಖ್

ಗೊಂಡಾ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಉಗ್ರ ನಿಗ್ರಹ ದಳವು ಜುಲೈ ೨ ರಂದು ಲಕ್ಷ್ಮಣಪುರಿಯಲ್ಲಿದ್ದ ಸದ್ದಾಂ ಶೇಖ್‌ನನ್ನು ಬಂಧಿಸಿದ್ದರು. ಸದ್ದಾಂ ಇತನು ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ಟ್ರಕ್ ಮೂಲಕ ಜನರ ಮೇಲೆ ದಾಳಿ ಮಾಡಲು ಯೋಜಿಸಿದ್ದ. ಅದಕ್ಕಾಗಿ ಇತ ಟ್ರಕ್ ಗಳ ಮೂಲಕ ಭಯೋತ್ಪಾದಕರು ನಡೆಸಿರುವ ದಾಳಿಯ ವಿಡಿಯೋಗಳನ್ನು ಪ್ರತಿದಿನ ನೋಡುತ್ತಿದ್ದ. ಜನಸಂದಣಿ ಇರುವ ಸ್ಥಳಗಳಲ್ಲಿ ಜನರ ಮೇಲೆ ಟ್ರಕ್ ಚಲಾಯಿಸಿ ಅವರನ್ನು ಹತ್ತಿಕ್ಕಿ ಸಾಯಿಸುವ ಯೋಜನೆ ಮಾಡಿದ್ದನು. ಜುಲೈ ೨೦೧೬ ರಲ್ಲಿ, ಫ್ರಾನ್ಸ್‌ನಲ್ಲಿ ಒಂದು ಹಬ್ಬದ ಸಮಯದಲ್ಲಿ ಒಬ್ಬ ಭಯೋತ್ಪಾದಕನು ಸರಕು ಟ್ರಕ್ ಅನ್ನು ಜನರ ಮೇಲೆ ಚಲಾಯಿಸಿದ್ದನು. ಇದರಲ್ಲಿ ೮೬ ಮಂದಿ ಸಾವನ್ನಪಿದ್ದರು. ಸದ್ದಾಂ ಭಾರತದಲ್ಲಿಯೂ ಇದೆ ರೀತಿಯ ದಾಳಿಯನ್ನು ಮಾಡಲು ಪ್ರಯತ್ನಿಸಿದ್ದನು.

ಸದ್ದಾಂನ ವಿಚಾರಣೆಯ ಸಮಯದಲ್ಲಿ, ಒಸಾಮಾ ಬಿನ್ ಲಾದೆನ್, ಜಾಕಿರ್ ಮೂಸಾ, ರಿಯಾಜ್ ನಾಯಕೂ, ನವೇದ ಜಟ್ಟರ್, ಸಮೀರ ಟಾಯಗರ ಮೊದಲಾದ ಭಯೋತ್ಪಾದಕರಿಂದ ಪ್ರಭಾವಿತನಾಗಿದ್ದನು ಎಂದು ತಿಳಿಸಿದ್ದಾನೆ. ಸದ್ದಾಂನ ಮೊಬೈಲ್ ಫೋನ್‌ನಲ್ಲಿ ಇವರೆಲ್ಲರ ವೀಡಿಯೊಗಳು ಮತ್ತು ಛಾಯಾಚಿತ್ರಗಳು ಸಿಕ್ಕಿವೆ. ಸದ್ದಾಂ ಬೆಂಗಳೂರಿನ ಕಂಪನಿಯೊಂದರಲ್ಲಿ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸಾಮಾಜಿಕ ಜಾಲತಾಣಗಳು ಮತ್ತು ಆಪಗಳ ಮೂಲಕ ಪಾಕಿಸ್ತಾನದ ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿದ್ದನು.

ಸಂಪಾದಕೀಯ ನಿಲುವು

ಇಂತಹ ಭಯೋತ್ಪಾದಕರಿಗೆ ಆದಷ್ಟು ಬೇಗ ಕ್ರಮಕೈಗೊಂಡು ಗಲ್ಲು ಶಿಕ್ಷೆ ವಿಧಿಸಿದರೇ, ಇತರರು ಎಚ್ಚೇತ್ತುಕೊಳ್ಳುತ್ತಾರೆ !