ಆಡಳಿತರೂಡ ಅವಾಮಿ ಲೀಗ್‌ನ ಮೂವರು ನಾಯಕರು ಹಿಂದೂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ !

ಇನ್ನೊಂದು ಪ್ರಕರಣದಲ್ಲಿ ಅವಾಮಿ ಲೀಗ್‌ನ ನಾಯಕನು ಹಿಂದೂ ಅಂಗಡಿಯವನ ಮೇಲೆ ಹಲ್ಲೆ !

ಅವಾಮಿ ಲೀಗ್‌ನ ಚಾಲಿಕ, ಹಸನುಲ್ ಮತ್ತು ಸೈಫುಲ್

ಢಾಕಾ (ಬಾಂಗ್ಲಾದೇಶ) – ದೇಶದಲ್ಲಿ ಆಡಳಿತಾರೂಢ ಅವಾಮಿ ಲೀಗ್‌ನ ಸಿಲ್ಹೆಟ್ ಜಿಲ್ಲೆಯ ಮೌಲ್ವಿಬಜಾರ್‌ನಲ್ಲಿ ೩ ಸ್ಥಳೀಯ ಮುಖಂಡರು ಹಿಂದೂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅವಾಮಿ ಲೀಗ್‌ನ ಚಾಲಿಕ, ಹಸನುಲ್ ಮತ್ತು ಸೈಫುಲ್ ಈ ಮೂವರು ಅತ್ಯಾಚಾರಿಗಳ ಹೆಸರುಗಳಾಗಿದ್ದು ಇವರು ರಾತ್ರಿಯಿಡೀ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಗಳು’ ತನ್ನ ಟ್ವಿಟರ್ ಖಾತೆಯ ಮೂಲಕ ತಿಳಿಸಿದೆ. ಟ್ವೀಟ್ ಜೊತೆಗೆ ಘಟನೆಯ ಬಗ್ಗೆ ಮಾಹಿತಿ ನೀಡುವ ವಿಡಿಯೋವನ್ನೂ ಪ್ರಸಾರಿಸಿದ್ದಾರೆ.

https://twitter.com/BDHindu71/status/1676849229007060992

ಮತ್ತೊಂದು ಘಟನೆಯಲ್ಲಿ, ಢಾಕಾ ಬಳಿಯಿರುವ ಅಶುಲಿಯಾ ಇಲ್ಲಿನ ಸ್ಥಳೀಯ ಅವಾಮಿ ಲೀಗ್ ನಾಯಕ ಶಾಹಿದುರ್ ರೆಹಮಾನ್ ಇತನು ಬಾಬುಲ್ ಚಂದ್ರ ಶೀಲ್ ಈ ಹಿಂದೂ ಅಂಗಡಿಯವನ ಮೇಲೆ ಹಲ್ಲೆ ನಡೆಸಿದ್ದಾನೆ. ಯಾವಾಗ ಬಾಬುಲ್ ಚಂದ್ರ ಶೀಲ್‌ನು ಶಾಹಿದೂರ್‌ಗೆ ಸಾಲದ ಹಣವನ್ನು ಕೇಳಿದ್ದನು ಆಗ ಶಾಹಿದುರ್ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ಬಾಬುಲನನ್ನು ಸ್ಥಳೀಯ ಹಿಂದೂಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ‘ವೀರ್ ಬಂಗಾಲಿ’ ಹೆಸರಿನ ಟ್ವಿಟರ್ ಖಾತೆಯಿಂದ ಈ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ‘ಮುಸ್ಲಿಂ ಲೀಗ್ ತನ್ನ ಹೆಸರನ್ನು ಅವಾಮಿ (ಪಬ್ಲಿಕ್) ಲೀಗ್ ಎಂದು ಬದಲಾಯಿಸಿತು; ಆದರೆ ಅವರ ಆಲೋಚನೆಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ’ ಎಂದು ಈ ಟ್ವೀಟ್‌ನಲ್ಲಿ ಹೇಳಲಾಗಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿನ ಆಡಳಿತ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವಾಗ, ಭಾರತ ಸರಕಾರವು ಹಿಂದೂಗಳ ಭದ್ರತೆಯ ಸೂತ್ರಗಳನ್ನು ಬಾಂಗ್ಲಾದೇಶ ಸರಕಾರದ ಮುಂದೆ ಏಕೆ ಪ್ರಸ್ತಾಪಿಸುವುದಿಲ್ಲ ?