ಬೆಂಗಳೂರು – 2023-24 ರ ಹಣಕಾಸು ಮುಂಗಡಪತ್ರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜುಲೈ 7 ರಂದು ವಿಧಾನಸಭೆಯಲ್ಲಿ ಮಂಡಿಸಿದರು. ಇದರಲ್ಲಿ ಹಿಂದಿನ ಭಾಜಪ ಸರಕಾರ ಘೋಷಿಸಿದ್ದ ಅನೇಕ ಜನಪ್ರಿಯ ಯೋಜನೆಗಳನ್ನು ಉಲ್ಲೇಖಿಸಿಲ್ಲ. ಭಾಜಪ ಸರಕಾರದಿಂದ ಗೋಮಾತೆಯ ರಕ್ಷಣೆಗಾಗಿ ಜಿಲ್ಲೆಗೆ ಒಂದರಂತೆ ಗೋಶಾಲೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು. ಹಾಗೆಯೇ `ವಿವೇಕ ಸಿರಿ'(ಸಮೃದ್ಧಿ) ಅಡಿಯಲ್ಲಿ ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ಶಾಲೆಯ ಕೊಠಡಿಗಳನ್ನು ಹೆಚ್ಚಿಸುವ ಯೋಜನೆಯಾಗಿತ್ತು; ಆದರೆ ಈ ಎರಡೂ ಯೋಜನೆಗಳನ್ನು ಕಾಂಗ್ರೆಸ್ ಸರಕಾರವು ಕೈಬಿಟ್ಟಿದೆ.
Karnataka Budget 2023: ಜಿಲ್ಲೆಗೊಂದು ಗೋಶಾಲೆ, ವಿವೇಕ ಸಿರಿ.. ಬಿಜೆಪಿ ಸರ್ಕಾರದ ಯೋಜನೆ ಕೈಬಿಟ್ಟ ಸಿದ್ಧರಾಮಯ್ಯ!#KarnatakaBudget2023 #Budget2023 #Siddaramaiah #BJP @BJP4Karnataka @INCKarnataka @siddaramaiah https://t.co/JrNEghdOQ2
— Asianet Suvarna News (@AsianetNewsSN) July 7, 2023
`ವಿವೇಕ ಸಿರಿ’ ಯೋಜನೆಯ ಅಡಿಯಲ್ಲಿ ರಾಜ್ಯದ ಸರಕಾರಿ ಶಾಲೆ 800 ಕೊಠಡಿಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿತ್ತು. ಹಾಗೆಯೇ ಸ್ವಾಮಿ ವಿವೇಕಾನಂದರ ಹೆಸರಿನಿಂದ ಪ್ರಸ್ತಾಪಿಸಲಾಗಿರುವ ಈ ಯೋಜನೆಯ ಅಡಿಯಲ್ಲಿ ರಾಜ್ಯದ 24 ಸಾವಿರ ಶಾಲೆಗಳಿಗೆ ಕೇಸರಿ ಬಣ್ಣವನ್ನು ಹಚ್ಚಲು ತೀರ್ಮಾನಿಸಲಾಗಿತ್ತು. ಆಗಿನ ವಿರೋಧ ಪಕ್ಷವಾಗಿದ್ದ ಹಿಂದೂದ್ವೇಷಿ ಕಾಂಗ್ರೆಸ್ ವಿರೋಧಿಸಿತ್ತು. ಈಗ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಅದನ್ನು ಕಸದಬುಟ್ಟಿಗೆ ಹಾಕಿದೆ.
ಸಂಪಾದಕೀಯ ನಿಲುವುಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಸರಕಾರ ಈ ರೀತಿ ನಿರ್ಧಾರ ತೆಗೆದುಕೊಳ್ಳುತ್ತಿದೆ. ಇದನ್ನು ಹಿಂದೂ ಸಂಘಟನೆಗಳು ಮತ್ತು ಧರ್ಮಾಭಿಮಾನಿ ಹಿಂದೂಗಳು ನ್ಯಾಯಸಮ್ಮತವಾಗಿ ವಿರೋಧಿಸುವುದು ಆವಶ್ಯಕ ! |