ಇಸ್ಲಾಮಿಕ್ ಸ್ಟೇಟ್ ಗೆ ಸೇರಲು ಯುವಕರ ಬ್ರೈನ್ ವಾಶ್ ಮಾಡುವ ಮತಾಂಧ ಇಂಜಿನಿಯರನ ಪುಣೆಯಲ್ಲಿ ಬಂಧನ !

ಜುಬೈರ್ ಶೇಖ್ ನನ್ನು ಎನ್ಐಎ ಬಂಧಿಸಿದ ಕೊಂಧ್ವಾದಲ್ಲಿರುವ ವಜೀರ್ ಕ್ಯಾಸ್ಕೇಡ್ ಕೋಆಪರೇಟಿವ್ ಹೌಸಿಂಗ್ ಸೊಸೈಟಿಯ ಪ್ರವೇಶದ್ವಾರ

ಪುಣೆ – ನಿಷೇಧಿತ ‘ಇಸ್ಲಾಮಿಕ್ ಸ್ಟೇಟ್’ ಈ ಭಯೋತ್ಪಾದಕ ಸಂಘಟನೆಯಲ್ಲಿ ಯುವಕರನ್ನು ಸೇರಿಸಲು ಜುಬೇರ ನೂರ್ ಮಹಮ್ಮದ್ ಶೇಖ ಇವನು ಸಾಮಾಜಿಕ ಜಾಲತಾಣದಲ್ಲಿ ಯುವಕರ ಬ್ರೈನ್ ವಾಶ್ ಮಾಡುತ್ತಿದ್ದನು. ಜುಬೇರ್ ನನ್ನು ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ.) ಪುಣೆಯ ಕೊಂಡವಾ ಪ್ರದೇಶದಿಂದ ಬಂದಿಸಲಾಗಿದೆ. ವಿವಿಧ ರಾಜ್ಯಗಳಲ್ಲಿನ ೨೦ ಜನರು ಅವನ ಸಂಪರ್ಕದಲ್ಲಿದ್ದರು ಎಂಬುದು ತಿಳಿದು ಬಂದಿದೆ. ಜುಬೇರ ಶೇಖ ಇವನು ಮೂಲತಃ ಸಾತರಾ ಜಿಲ್ಲೆಯ ಕರಾಡದಲ್ಲಿನ ನಿವಾಸಿಯಾಗಿದ್ದು ಅವನು ಸಾಫ್ಟವೇರ್ ಇಂಜಿನಿಯರ್ ಆಗಿದ್ದಾನೆ.

ಹಿಂಜವಡಿಯಲ್ಲಿ ಒಂದು ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನದ ಕಂಪನಿಯಲ್ಲಿ ಅವನು ನೌಕರಿ ಮಾಡುತ್ತಿದ್ದಾನೆ. ವರ್ಷಕ್ಕೆ ೧೫ ಲಕ್ಷದ ‘ಪ್ಯಾಕೇಜ್’ ಕೂಡ ಇದೆ, ಆದರೂ ‘instagram’, ‘ಫೇಸ್ಬುಕ್’, ‘ವಾಟ್ಸಾಪ್’ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ‘ಅಬು ನುಸೈಬಾ’ ಈ ಹೆಸರಿನಿಂದ ಪರಿಚಿತನು. ‘ನಮ್ಮ ಧರ್ಮ ಯಾವ ರೀತಿ ಶ್ರೇಷ್ಠವಾಗಿದೆ ಮತ್ತು ಇತರ ಧರ್ಮ ಯಾವ ರೀತಿಯಲ್ಲಿ ಕೀಳಾಗಿದೆ ?’, ಇದರ ಬಗ್ಗೆ ಮಾಹಿತಿ ಅಲ್ಪಸಂಖ್ಯಾತ ಯುವಕರಿಗೆ ಅವನು ನೀಡುತ್ತಿದ್ದನು ಹಾಗೂ ಪ್ರಚೋದನಕಾರಿ ಮಾಹಿತಿ ಪ್ರಸಾರ ಮಾಡುತ್ತಿದ್ದನು. ಎನ್.ಐ.ಎ. ಇಂದ ಅವನ ಮನೆಯ ಮೇಲೆ ದಾಳಿ ನಡೆಸಿದಾಗ ಅಲ್ಲಿ ಇಸ್ಲಾಮಿಕ್ ಸ್ಟೇಟ್ ಜೊತೆಗೆ ನಂಟಿರುವ ಮಹತ್ವಪೂರ್ಣ ದಾಖಲೆ, ಸಾಹಿತ್ಯ, ‘ಲ್ಯಾಪ್ಟಾಪ್’, ‘ಮೆಮೊರಿ ಕಾರ್ಡ್’, ಮೊಬೈಲ್ ಮುಂತಾದ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ.

ಸಂಪಾದಕರ ನಿಲುವು

ಮುಸಲ್ಮಾನರಿಗೆ ಶಿಕ್ಷಣ ಇಲ್ಲದಿರುವುದರಿಂದ ಹಾಗೂ ಅವರು ಬಡವರಾಗಿರುವುದರಿಂದ ಭಯೋತ್ಪಾದನೆಯ ಕಡೆಗೆ ಹೊರಳುತ್ತಾರೆ ಎಂದು ಹೇಳುವವರು ಇಂಜಿನಿಯರ್ ಭಯೋತ್ಪಾದಕ ಆಗಿರುವುದರ ಬಗ್ಗೆ ಏನು ಹೇಳುವರು ?

ಕಳೆದ ಕೆಲವು ಸಮಯದಿಂದ ಪುಣೆಯಂತಹ ಸ್ಥಳದಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚಾಗಿರುವುದು ಬೆಳಕಿಗೆ ಬರುತ್ತಿದೆ. ಸಾಂಸ್ಕೃತಿಕ ತವರಾಗಿರುವ ಈಗ ಭಯೋತ್ಪಾದಕರ ಕೇಂದ್ರವಾಗುವುದು ಇದು ಭಾರತಕ್ಕೆ ಅಪಾಯದ ಗಂಟೆ ಆಗಿದೆ !