ವಿವಾದಿತ ‘ಆದಿಪುರುಷ’ ಸಿನಿಮಾದ ಲೇಖಕ ಮನೋಜ್ ಮುಂತಶೀರ್ ಇವರಿಂದ ಕ್ಷಮೆಯಾಚನೆ !

ನವದೆಹಲಿ – ‘ಆದಿಪುರುಷ’ ಈ ವಿವಾದಿತ ಚಲನಚಿತ್ರದಲ್ಲಿ ಅಯೋಗ್ಯ ಸಂಭಾಷಣೆಗಳನ್ನು ಬರೆದಿದ್ದಕ್ಕಾಗಿ ಲೇಖಕ ಮನೋಜ ಮುಂತಶೀರ ಅವರು ಕ್ಷಮೆಯಾಚಿಸಿದ್ದಾರೆ. ಮುಂತಶೀರ್ ಅವರ ಲೇಖನದಿಂದ ರಾಮಾಯಣದ ವಿಡಂಬನೆಯಾಗಿತ್ತು ಮತ್ತು ಇದರಿಂದ ಲಕ್ಷಾಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿತ್ತು. ಮುಂತಶೀರ ಅವರು ಆರಂಭದಲ್ಲಿ ಶ್ರೀ ಹನುಮಂತನ ವಿವಾದಾತ್ಮಕ ಸಂಭಾಷಣೆಯನ್ನು ಬಲವಾಗಿ ಬೆಂಬಲಿಸಿದ್ದರು. ಈಗ ಅವರಿಗೆ ಬುದ್ದಿ ಬಂದು ಕ್ಷಮೆ ಕೇಳಿದ್ದಾರೆ.

ಮುಂತಶೀರ್ ಇವರು ಜುಲೈ ೮ ರಂದು ಟ್ವೀಟ್ ಮಾಡಿ, ‘ಆದಿಪುರುಷ’ ಚಲನಚಿತ್ರದಿಂದ ಜನರ ಭಾವನೆಗಳನ್ನು ನೋಯಿಸಲಾಗಿದೆ. ಎಂಬುದನ್ನು ನಾನು ಒಪ್ಪುತ್ತೇನೆ. ನನ್ನ ಎಲ್ಲಾ ಸಹೋದರ ಸಹೋದರಿಯರು, ಹಿರಿಯರು, ಗೌರವಾನ್ವಿತ ಋಷಿ-ಮುನಿಗಳು ಮತ್ತು ಶ್ರೀರಾಮನ ಭಕ್ತರಿಗೆ ನಾನು ಕೈ ಮುಗಿದು ಕ್ಷಮೆಯಾಚಿಸುತ್ತೇನೆ.

ಭಜರಂಗಬಲಿ ನಮ್ಮೆಲ್ಲರನ್ನು ಆಶೀರ್ವದಿಸಲಿ. ನಾವೆಲ್ಲರೂ ಒಂದಾಗಿ ಮತ್ತು ಅಖಂಡವಾಗಿ ಉಳಿಯಲು ಹಾಗೂ ನಮ್ಮ ಪವಿತ್ರ ಶಾಶ್ವತ ಮತ್ತು ಶ್ರೇಷ್ಠ ದೇಶಕ್ಕೆ ಸೇವೆ ಮಾಡುವ ಶಕ್ತಿ ನೀಡಲಿ.’ ಎಂದು ಹೇಳಿದ್ದಾರೆ.

ಸಂಭಾಷಣೆ ಏನಿತ್ತು ?

‘ಆದಿಪುರುಷ’ ಸಿನಿಮಾದಲ್ಲಿ ಹನುಮಂತನು ‘ಕಪಡಾ ತೇರೆ ಬಾಪ್ ಕಾ, ಆಗ್ ತೇರೆ ಬಾಪ್ ಕಿ, ತೇಲ್ ತೇರೆ ಬಾಪ್ ಕಾ, ಜಲೇಗಿ ಭಿ ತೇರೇ ಬಾಪ್ ಕಿ’, ಎಂಬ ಆಕ್ಷೇಪಾರ್ಹ ಹೇಳಿಕೆಗಳು ಮಾತನಾಡಿರುವುದಾಗಿ ತೋರಿಸಲಾಗಿವೆ.

ಮುಂತಶೀರ ಅವಕಾಶವಾದಿ ! – ಸಾರ್ವಜನಿಕರಿಂದ ಖೇದಕರ ಪ್ರತಿಕ್ರಿಯೆ

ಮನೋಜ್ ಮುಂತಶೀರ ಅವರ ಕ್ಷಮೆಯಾಚನೆಯ ಟ್ವೀಟ್‌ನಲ್ಲಿ ವೈರಲ್ ಆದ ನಂತರ, ಅನೇಕ ಟ್ವಿಟ್ಟರ್ ಬಳಕೆದಾರರು ಮುಂತಶೀರ ಅವರನ್ನು ಕಟುವಾದ ಪದಗಳಲ್ಲಿ ಟೀಕಿಸಿದ್ದಾರೆ. ಓರ್ವ ‘ಸಂಭಾಷಣೆ ಬರೆಯುವ ಮುನ್ನ ಯೋಚಿಸಬೇಕಿತ್ತು’ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ‘ನೀವು ಅವಕಾಶವಾದಿ’ ಎಂದು ಕಪಾಳಮೋಕ್ಷ ಮಾಡಿದ್ದಾರೆ.

ಸಂಪಾದಕರ ನಿಲುವು

  • ಇವು ಮೊಸಳೆಯ ಕಣ್ಣೀರು, ಇದನ್ನು ತಿಳಿದುಕೊಳ್ಳಿ ! ಸಿನಿಮಾದ ಮೂಲಕ ಕೋಟಿಗಟ್ಟಲೆ ರಾಪಾಯಿಗಳನ್ನು ಗಳಿಸಿ ಈಗ ಕ್ಷಮೆ ಕೇಳುವುದು ಇದು ಹಿಂದೂಗಳ ಗಾಯದ ಮೇಲೆ ಬರೆ ಎಳೆಯುವಂತೆ ! ಇಂತಹವರ ಚಲನಚಿತ್ರಗಳನ್ನು ಹಿಂದೂಗಳು ಬಹಿಷ್ಕರಿಸಬೇಕು, ಹಾಗೆಯೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳವಂತೆ ಪ್ರಯತ್ನಿಸಬೇಕು !
  • ಅಯೋಗ್ಯ ಸಂಭಾಷಣಕ್ಕೆ ಮಾನ್ಯತೆ ನೀಡುವ ಸೆನ್ಸರ್ ಬೋರ್ಡ್ ನಿದ್ದೆ ಮಾಡುತ್ತಿದೆಯೇ ? ಭವಿಷ್ಯದಲ್ಲಿ ಧಾರ್ಮಿಕ ಮತ್ತು ಐತಿಹಾಸಿಕ ಘಟನೆಗಳು ವಿರೂಪಗೊಳ್ಳಬಾರದು, ಅದಕ್ಕಾಗಿ ಕೇಂದ್ರ ಸರಕಾರವು ಸೂಕ್ತ ಪರಿಹಾರೋಪಾಗಳನ್ನು ಯೋಜಿಸುವ ಅಪೇಕ್ಷೆಯಿದೆ.
  • ಹನುಮಂತನಿಂದ ತಪ್ಪು ಸಂಭಾಷಣೆ ತೋರಿಸುವ ಮನೋಜ್ ಮುಂತಶೀರ ಇತರ ಪಂಥೀಯರ ಶ್ರದ್ಧಾಸ್ಥಾನಗಳನ್ನು ಅಣಕಿಸುವ ಧೈರ್ಯ ಮಾಡುವುದಿಲ್ಲ ಎಂಬುದನ್ನು ಗಮನಿಸಿ !