ವಿವಾಹದ ಮೊದಲು ನೌಕರಿ ಮಾಡುವ ಮಹಿಳೆಗೆ ವಿಚ್ಛೇದನದ ನಂತರ ಪತಿಯಿಂದ ಸಂಪೂರ್ಣ ಜೀವನಾಂಶ ಕೇಳಬಾರದು ! – ಕರ್ನಾಟಕ ಉಚ್ಚ ನ್ಯಾಯಾಲಯ

ಬೆಂಗಳೂರು – ವಿವಾಹದ ಮೊದಲು ನೌಕರಿ ಮಾಡುವ ಮಹಿಳೆ ವಿಚ್ಛೇದನ ಪಡೆದ ನಂತರ ನೌಕರಿ ಮಾಡದೆ ನಿರುದ್ಯೋಗಿ ಎಂದು ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಮತ್ತು ಪತಿಯಿಂದ ಸಂಪೂರ್ಣ ಜೀವನಾಂಶ ಕೇಳಲು ಸಾಧ್ಯವಿಲ್ಲ. ಆಕೆ ತನ್ನ ಉದರ ನಿರ್ವಾಹಕ್ಕೆ ಸ್ವತಃ ಪ್ರಯತ್ನ ಮಾಡಬೇಕು, ಎಂದು ಕರ್ನಾಟಕದ ಉಚ್ಚ ನ್ಯಾಯಾಲಯ ಒಂದು ಅರ್ಜಿಯ ವಿಚಾರಣೆಯ ಸಮಯದಲ್ಲಿ. ಅಭಿಪ್ರಾಯ ವ್ಯಕ್ತಪಡಿಸಿದೆ. ವಿಚ್ಛೇದನ ಪಡೆದಿರುವ ಮಹಿಳೆ ಆಕೆಯ ಜೀವನಾಂಶದಲ್ಲಿ ಕಡಿತಗೊಳಿಸಿರುವುದರಿಂದ ಸತ್ರ ನ್ಯಾಯಾಲಯದ ತೀರ್ಪಿಗೆ ಉಚ್ಚ ನ್ಯಾಯಾಲಯದಲ್ಲಿ ಆವಾಹನೆ ನೀಡಿದ್ದರು. ಈ ಆವಾಹನೆಯ ಅರ್ಜಿಯನ್ನು ಪರಿಶೀಲಿಸುತ್ತಾ ಉಚ್ಚ ನ್ಯಾಯಾಲಯವು ಮೇಲಿನ ಅಭಿಪ್ರಾಯ ವ್ಯಕ್ತಪಡಿಸುತ್ತಾ ತಳ್ಳಿ ಹಾಕಿದೆ. ಉಚ್ಚ ನ್ಯಾಯಾಲಯದಲ್ಲಿ ಈ ಮಹಿಳೆಗೆ ಪ್ರತಿ ತಿಂಗಳು ೧೦ ಸಾವಿರ ರೂಪಾಯಿ ಕಡಿತಗೊಳಿಸಿ ೫ ಸಾವಿರ ರೂಪಾಯಿ ಹಾಗೂ ಪರಿಹಾರವೆಂದು ೩ ಲಕ್ಷ ರೂಪಾಯಿ ಕಡಿಮೆ ಮಾಡಿ ೨ ಲಕ್ಷ ರೂಪಾಯಿ ಮಾಡಿತ್ತು.

ಉಚ್ಚ ನ್ಯಾಯಾಲಯವು, ಮಹಿಳೆ ವಿವಾಹದ ಮೊದಲು ನೌಕರಿ ಮಾಡುತ್ತಿದ್ದಳು; ಆದರೆ ಆಕೆ ಈಗ ನೌಕರಿ ಏಕೆ ಮಾಡುತ್ತಿಲ್ಲ ?, ಈ ಬಗ್ಗೆ ಸ್ಪಷ್ಟೀಕರಣವನ್ನು ಆಕೆ ಅರ್ಜಿಯಲ್ಲಿ ನೀಡಿಲ್ಲ. ಈ ರೀತಿ ನಿರುದ್ಯೋಗಿ ಎಂದು ಆಕೆ ಪತಿಯ ಬಳಿ ಸಂಪೂರ್ಣ ಜೀವನಾಂಶ ಕೇಳಲು ಸಾಧ್ಯವಿಲ್ಲ. ಆಕೆ ತನ್ನ ಜೀವನದ ಉದರ ನಿರ್ವಾಹಕ್ಕಾಗಿ ನೌಕರಿ ಮಾಡುವುದು ಕಾನೂನ ರೀತಿಯಲ್ಲಿ ಅನಿವಾರ್ಯವಿದೆ. ಆಕೆ ವಿಚ್ಛೇದನ ಪಡೆದ ನಂತರ ಪತಿಯ ಬಳಿ ಕೇವಲ ಸಹಾಯ ಎಂದು ಖರ್ಚು ಕೇಳಬಹುದು ಎಂದು ಹೇಳಿದೆ.