ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ !
ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಪ್ರವೇಶ ಶುಕ್ಲಾ ಎಂಬ ಯುವಕ ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದನಂತರ, ಆತನನ್ನು ಬಂಧಿಸಲಾಗಿದೆ. ಆತನ ಮನೆಯನ್ನು ಬುಲ್ಡೋಜರ್‌ನಿಂದ ಕೆಡವಲಾಯಿತು. ಇದೀಗ ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇವರು ಸಂತ್ರಸ್ತ ಆದಿವಾಸಿ ವ್ಯಕ್ತಿ ಮತ್ತು ಆತನ ಕುಟುಂಬದವರನ್ನು ತಮ್ಮ ನಿವಾಸಕ್ಕೆ ಕರೆದಿದ್ದಾರೆ. ಸಂತ್ರಸ್ತ ವ್ಯಕ್ತಿಯನ್ನು ಕುರ್ಚಿಯ ಮೇಲೆ ಕೂಡಿಸಿ ಆತನ ಪಾದಗಳನ್ನು ತೊಳೆದರು. ಹಣೆಗೆ ತಿಲಕವಿಟ್ಟು ಆತನಿಗೆ ಆರತಿ ಮಾಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇವರು, ನಡೆದ ಘಟನೆಯಿಂದ ನನಗೆ ದುಃಖವಾಗಿದೆ ನಾನು ನಿಮ್ಮ ಕ್ಷಮೆಯನ್ನು ಬೇಡುತ್ತೇನೆ. ನಿಮ್ಮಂಥವರು ನನಗೆ ದೇವರಂತೆ ಎಂದು ಸಂತ್ರಸ್ತ ವ್ಯಕ್ತೀಗೆ ಹೇಳಿದರು.
#LIVE मुख्यमंत्री शिवराज ने पेशाब कांड पीड़ित आदिवासी के पैर धोए: हाथ पकड़कर CM हाउस ले गए, आरती उतारी और बोले- माफी मांगता हूं#MadhyaPradesh #ShivrajSinghChouhan https://t.co/vcEFPiye6u pic.twitter.com/5IKHsxYqZB
— Dainik Bhaskar (@DainikBhaskar) July 6, 2023