ತೆಲಂಗಾಣದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಹರಿಂದ ‘ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ಘೋಷ !
ಸಾಧನೆಯಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆಧ್ಯಾತ್ಮಿಕ ಶಕ್ತಿ ಪ್ರಾಪ್ತವಾಗುತ್ತದೆ ! ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹಿಂದೂಗಳು ಸಾಧನೆ ಮಾಡುವುದು ಅವಶ್ಯಕವಾಗಿದೆ. ಹಿಂದುಗಳು ಭಗವಂತನ ಜೊತೆಗೆ ಲೀನವಾಗಿ ಹಿಂದುತ್ವದ ಕಾರ್ಯ ಮಾಡಬೇಕಾಗಿದೆ. ಸಾಧನೆ ಮಾಡಿದರೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆಧ್ಯಾತ್ಮಿಕ ಶಕ್ತಿ ಪ್ರಾಪ್ತವಾಗುವುದು – ಶಾಸಕ ಟಿ. ರಾಜಾ ಸಿಂಹ, ತೆಲಂಗಾಣ. |
ರಾಜಕಾರಣವು ಜನರು ನಮ್ಮನ್ನು ಆಯ್ಕೆ ಮಾಡುವ ತನಕ ಇದೆ. ನನಗೆ ಹಿಂದುತ್ವಕ್ಕಾಗಿ ಬದುಕಬೇಕಿದೆ. ಧರ್ಮಕ್ಕಾಗಿ ರಾಜಕಾರಣ ತ್ಯಜಿಸಲು ನಾನು ಸಿದ್ಧ. ಇಂದಲ್ಲ ನಾಳೆ ಸಾವು ಖಚಿತ. ಹೀಗಿರುವಾಗ ಇತಿಹಾಸದಲ್ಲಿ ದಾಖಲಾಗುವಂತಹ ಸಾವು ಏಕೆ ಬೇಡ ? ದೇಶ ಮತ್ತು ಧರ್ಮ ಇವುಗಳಿಗಾಗಿ ನಾವು ಸಾಯಲೂ ಸಿದ್ಧರಾಗಿದ್ದೇವೆ. ಹಿಂದೂಗಳು ಹೆದರಬಾರದು. ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪವನ್ನು ಪೂರ್ಣಗೊಳಿಸಲು ನಾವು ಜನ್ಮಕ್ಕೆ ಬಂದಿದ್ದೇವೆ, ಎಂಬ ಪ್ರಖರ ಉದ್ಗಾರವನ್ನು ಭಾಗ್ಯನಗರದ ಪ್ರಖರ ಹಿಂದುತ್ವನಿಷ್ಠ ಶಾಸಕರಾದ ಟಿ. ರಾಜಾಸಿಂಹ ಇವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಕೊನೆಯ ದಿನದಂದು ಉದ್ಗರಿಸಿದರು.
ಶಾಸಕ ಟಿ. ರಾಜಾಸಿಂಹ ಅವರು ಮುಂದೆ ಮಾತನಾಡುತ್ತಾ,
೧. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಆಡಳಿತಗಾರರು ಮತಾಂಧರ ಓಲೈಕೆ ಮಾಡುತ್ತಿದ್ದಾರೆ. ಮುಸಲ್ಮಾನರ ಓಲೈಕೆಗಾಗಿ ಮಸೀದಿಗಳನ್ನು ನಿರ್ಮಿಸಲು, ಮದರಸಾಗಳಿಗೆ ಅನುದಾನ ನೀಡಲು, ಮೌಲ್ವಿಗಳಿಗೆ (ಇಸ್ಲಾಮ್‌ನ ಧಾರ್ಮಿಕ ನಾಯಕರಿಗೆ) ವೇತನ ನೀಡಲು ಹಣ ನೀಡಲಾಗುತ್ತದೆ; ಗೋರಕ್ಷಣೆ ಮಾಡುವ ಹಿಂದೂಗಳ ವಿರುದ್ಧ ಅಪರಾಧಗಳು ದಾಖಲಾಗುತ್ತವೆ. ಬಂಗಾಲದಂತೆ ತೆಲಂಗಾಣದಲ್ಲಿಯೂ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ.
೨. ಸಾಮಾಜಿಕ ಜಾಲತಾಣದ ಮೂಲಕ ಹಿಂದೂಗಳನ್ನು ಜಾಗರೂಕ ಮಾಡಬಹುದು; ಆದರೆ ಸಾಮಾಜಿಕ ಜಾಲತಾಣದ ಮೂಲಕ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಲಾಗುವುದಿಲ್ಲ. ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದಕ್ಕೆ ಪ್ರತಿಯೊಬ್ಬ ಹಿಂದೂವೂ ಯೋಗದಾನ ನೀಡಬೇಕು.
೩. ಭಾರತದಲ್ಲಿ ೧೦೦ ಕೋಟಿ ಹಿಂದೂಗಳಿದ್ದರೂ ೧ ಕೋಟಿ ಹಿಂದೂಗಳನ್ನು ಧರ್ಮಕಾರ್ಯಕ್ಕಾಗಿ ಒಗ್ಗೂಡಿಸಲು ಸಾಧ್ಯವಾಗಿಲ್ಲ. ಮುಂಬರುವ ಸಂಕಷ್ಟದ ಬಗ್ಗೆ ಹಿಂದುಗಳು ಅಜಾಗರೂಕರಿದ್ದಾರೆ. ಅನೇಕ ರಾಜ್ಯಗಳಲ್ಲಿ ಹಿಂದೂಗಳ ಹತ್ಯೆಯಾಗುತ್ತಿದೆ. ಹಿಂದೂಗಳು ಕೇವಲ ಮತಾಂಧರಿಂದ ಸಾಯಲು ಜೀವಂತವಾಗಿದ್ದಾರೆಯೇ ?
೪. ಎಲ್ಲಾ ಹಿಂದೂಗಳು ಒಟ್ಟು ಸೇರಿ ಭಾರತವನ್ನು ಹಿಂದೂ ರಾಷ್ಟ್ರ ವೆಂದು ಘೋಷಿಸಲು ಒತ್ತಾಯಿಸಿದರೆ ಭಾರತ ದೇಶವು ಹಿಂದೂ ರಾಷ್ಟ್ರವಾಗಲು ಸಮಯ ಬೇಕಾಗುವುದಿಲ್ಲ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂಗಳು ಸರಕಾರದ ಮೇಲೆ ಒತ್ತಡ ತರಬೇಕು.
೫. ಹಿಂದುತ್ವಕಾಗಿ ಕಾರ್ಯ ಮಾಡಲು ಹಿಂದೂಗಳು ರಾಜಕಾರಣಿಗಳನ್ನು ಅಧಿಕಾರಕ್ಕೆ ತಂದಿದ್ದಾರೆ. ಹಿಂದುತ್ವಕ್ಕಾಗಿ ಕೆಲಸ ಮಾಡದಿದ್ದರೆ ಅಧಿಕಾರದಿಂದ ಕೆಳಗೆ ಇಳಿಸುವೆವು ಇದನ್ನು ಹಿಂದುಗಳು ರಾಜಕಾರಣಿಗಳಿಗೆ ಹೇಳುವುದು ಅವಶ್ಯಕವಾಗಿದೆ.
೬. ನನಗೆ ವಿಕಾಸಕಾರ್ಯ ಮಾಡುವುದಕ್ಕಾಗಿ ಖುರ್ಚಿ (ಸ್ಥಾನ) ಬೇಡ, ಆದರೆ ಹಿಂದೂ ಧರ್ಮದ ಮೇಲಿನ ಆಘಾತ ತಡೆಯುವುದಕ್ಕಾಗಿ ಮತ್ತು ಹಿಂದುತ್ವದ ರಕ್ಷಣೆಗಾಗಿ ಹಿಂದೂ ಗಳು ನನ್ನನ್ನು ಆರಿಸಿ ಕಳಿಸಿದ್ದಾರೆ. ಎಲ್ಲಾ ರಾಜಕೀಯ ನಾಯಕರು ಹಿಂದುತ್ವದ ಕಾರ್ಯ ಮಾಡಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಜಿ ಇವರಿಂದ ಪ್ರೇರಣೆ ಪಡೆಯುವ ಅವಶ್ಯಕತೆ ಇದೆ.
೭. ತಮ್ಮ ರಕ್ಷಣೆಗಾಗಿ ಹಿಂದೂ ಯುವಕ ಮತ್ತು ಯುವತಿಯರು ಶಸ್ತ್ರವಿದ್ಯೆ ಕಲಿಯುವುದು ಅತ್ಯಂತ ಅವಶ್ಯಕವಾಗಿದೆ. ಶಸ್ತ್ರವಿದ್ಯೆ ಕಲಿತರೆ ಮಾತ್ರ ಹಿಂದುಗಳು ತಮ್ಮ ಮತ್ತು ಧರ್ಮದ ರಕ್ಷಣೆ ಮಾಡಬಹುದು.
೮. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಲು ೨೦೨೪ ರಲ್ಲಿ ಭಾರತದ ಪ್ರತಿಯೊಬ್ಬ ಹಿಂದೂವೂ ಧ್ವನಿ ಎತ್ತು ವರು. ಹಿಂದೂಗಳು ಜಾಗೃತವಾದಾಗ ಮತಾಂಧರು ಕೂಡ ಶಾಂತವಾಗಿರುವುದಿಲ್ಲ. ಆ ಸಮಯದಲ್ಲಿ ಏನು ಮಾಡಬೇಕೆಂಬ ಯೋಜನೆಯನ್ನು ಮತಾಂಧರು ಮೊದಲೇ ತಯಾರಿಸಿದ್ದಾರೆ.
೯. ಹಿಂದುಗಳ ಸಂಖ್ಯೆ ಎಲ್ಲಿ ಕಡಿಮೆ ಇದೆ ?, ಯಾವ ಪ್ರದೇಶದಲ್ಲಿ ಜಾತ್ಯತೀತ ಹಿಂದುಗಳಿದ್ದಾರೆ ? ಅಂತಹ ಸ್ಥಳದ ಮಾಹಿತಿಯು ಮತಾಂಧರ ಬಳಿ ಇದೆ. ಮತಾಂಧ ಆಕ್ರಮಕರಾದಾಗ ಹಿಂದೂಗಳು ಸಾವೀಗೀಡಾಗುವರು. ಆದ್ದರಿಂದ ಹಿಂದೂಗಳು ಕುಂಭಕರ್ಣನ ನಿದ್ದೆಯಿಂದ ಎಳುವುದಲ್ಲ; ಸಮಯ ಇರುವಾಗಲೇ ಜಾಗೃತರಾಗಬೇಕು.
೧೦. ಮತಾಂಧರು ಭಯೋತ್ಪಾದಕರ ರೂಪ ತಾಳಿ ಹಿಂದೂ ಗಳನ್ನು ಕೊಲ್ಲುವುದಕ್ಕೆ ಸಿದ್ಧರಿದ್ದಾರೆ. ಸ್ವರಕ್ಷಣೆಗಾಗಿ ಪ್ರತಿಯೊಂದು ಗ್ರಾಮದ ಹಿಂದೂಗಳು ಶಸ್ತ್ರ ವಿದ್ಯೆ ಕಲಿಯಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಮತಾಂಧರಿಂದ ಹಿಂದೂಗಳು ಹತರಾಗುವರು.
೧೧. ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದುತ್ವನಿಷ್ಠ ಸಂಘಟನೆ ಗಳು ಅಹಂಕಾರ ಬಿಟ್ಟು ಒಟ್ಟಾಗಿ ಕಾರ್ಯ ಮಾಡುವುದು ಆವಶ್ಯಕವಾಗಿದೆ.