ಭಯೋತ್ಪಾದನೆಯ ಸವಾಲಿನ ಮೇಲೆ ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ !

ಶಾಂಘೈ ಸಹಕಾರ ಪರಿಷತ್ತಿನಲ್ಲಿ ಪ್ರಧಾನಮಂತ್ರಿ ಮೋದಿಯವರಿಂದ ಕರೆ

ನವ ದೆಹಲಿ – ಕೆಲವು ದೇಶಗಳು ಭಯೋತ್ಪಾದನೆ ತಮ್ಮ ದೇಶದ ನೀತಿಯೆನ್ನುವಂತೆ ಇತರೆ ದೇಶಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿವೆ. ಅವರು ಭಯೋತ್ಪಾದಕರಿಗೆ ಆಶ್ರಯವನ್ನು ನೀಡುತ್ತಿವೆ. ಭಯೋತ್ಪಾದನೆಯನ್ನು ಬೆಂಬಲಿಸವವರ ಬಗ್ಗೆ ದ್ವಂದ್ವ ನಿಲುವು ತಾಳಬಾರದು. ಭಯೋತ್ಪಾದನೆ ಜಾಗತಿಕ ಮತ್ತು ಪ್ರಾದೇಶಿಕ ಕಾರ್ಯಾಚರಣೆಗಳಿಗೆ ಅಪಾಯವಾಗಿ ಪರಿಣಮಿಸಿದೆ. ಈ ಸವಾಲಿನ ಬಗ್ಗೆ ನಿರ್ಣಾಯಕ ಕ್ರಮ ಕೈಕೊಳ್ಳುವುದು ಆವಶ್ಯಕವಾಗಿದೆಯೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಾಂಘೈ ಸಹಕಾರ ಪರಿಷತ್ತಿನಲ್ಲಿ ಮಾತನಾಡುವಾಗ ಹೇಳಿದರು. ಈ ಪರಿಷತ್ತು ಜುಲೈ 4 ರಂದು ಆನ್ ಲೈನ್ ನಲ್ಲಿ ನಡೆಸಲಾಯಿತು. ಇದರಲ್ಲಿ ಚೀನಾದ ಅಧ್ಯಕ್ಷ ಶೀ ಜಿನ್ ಪಿಂಗ್, ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುಟಿನ್, ಪಾಕಿಸ್ತಾನ ಪ್ರಧಾನಮಂತ್ರಿ ಶಾಹಬಾಜ ಶರೀಫ ಮತ್ತು ಇತರೆ ದೇಶಗಳ ಮುಖಂಡರು ಉಪಸ್ಥಿತರಿದ್ದರು. ಈ ಪರಿಷತ್ತನ್ನು ಭಾರತವು ಆಯೋಜಿಸಿತ್ತು.

1. ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಸಂದರ್ಭದಲ್ಲಿ, ಪರಿಷತ್ತನ್ನು ಆಯೋಜಿಸಿದ್ದಕ್ಕಾಗಿ ಪ್ರಧಾನಮಂತ್ರಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು. ವಿದೇಶ ನೀತಿಗಳ ಕುರಿತು ಭಾರತದ ದೃಷ್ಟಿಕೋನವನ್ನು ರಷ್ಯಾ ಬೆಂಬಲಿಸುತ್ತದೆ, ನಮಗೆ ಈ ಪರಿಷತ್ತಿನ ಸದಸ್ಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸುವುದನ್ನು ಮುಂದುವರೆಸಬೇಕಾಗಿದೆ. ಈ ಪರಿಷತ್ತಿನ ಮುಖ್ಯ ಅಂಶ ಅಫಘಾನಿಸ್ತಾನದ ಸಧ್ಯದ ಸ್ಥಿತಿಯಾಗಿದೆ. ನಮ್ಮೆಲ್ಲರ ಆದ್ಯತೆ ಭಯೋತ್ಪಾದನೆ, ಕಟ್ಟರವಾದ ಮತ್ತು ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ವಿರುದ್ಧದ ಹೋರಾಟವಾಗಿದೆ.

2. ಚೀನಾದ ರಾಷ್ಟ್ರಾಧ್ಯಕ್ಷ ಶೀ ಜಿನ್ ಪಿಂಗ್ ಆರ್ಥಿಕ ಸಹಕಾರದ ಕುರಿತು ಮಾತನಾಡಿದರೇ ಪಾಕಿಸ್ತಾನದ ಪ್ರಧಾನಿ ಶಾಹಬಾಜ ಶರೀಫ ಇವರು ಅಫಘಾನಿಸ್ತಾನಕ್ಕೆ ಸಹಾಯ ಮಾಡುವಂತೆ ಕರೆ ನೀಡಿದರು.

ಸಂಪಾದಕರ ನಿಲುವು

ಭಯೋತ್ಪಾದನೆಯ ವಿರುದ್ಧ ನಿರ್ಣಾಯಕ ಕ್ರಮಕ್ಕಾಗಿ ಭಾರತವು ಮುಂದಾಳತ್ವವನ್ನು ವಹಿಸಿ ಪಾಕಿಸ್ತಾನವನ್ನು ಮುಗಿಸುವುದು ಆವಶ್ಯಕವಾಗಿದೆ. `ಬೇರೆಯವರಿಂದ ಈ ಕ್ರಮ ಆಗಬಹುದು’, ಎನ್ನುವ ಭ್ರಮೆಯ ನಿರೀಕ್ಷೆಯನ್ನು ಹೊಂದದೆ, ತನ್ನ ಜವಾಬ್ದಾರಿಯೆಂದು ಪರಿಗಣಿಸಿ ಭಾರತವೇ ಇದನ್ನು ಮಾಡುವುದು ಆವಶ್ಯಕವಾಗಿದೆ !