ಇರಾನನಲ್ಲಿ ೨೦೨೩ ರ ಮೊದಲು ೬ ತಿಂಗಳಲ್ಲಿ ೩೫೪ ಜನರಿಗೆ ಗಲ್ಲು ಶಿಕ್ಷೆ !

ತೆಹರಾನ್ (ಇರಾನ್) – ಇರಾನಿನಲ್ಲಿ ಕಳೆದ ಆರು ತಿಂಗಳಲ್ಲಿ ೩೫೪ ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ೨೦೨೨ ರಲ್ಲಿ ಮೊದಲ ಆರು ತಿಂಗಳಲ್ಲಿ ೨೬೧ ಜನರಿಗೆ ನೇಣುಗಂಬಕ್ಕೆ ಏರಿಸಲಾಗಿದ್ದರೇ ಇಡೀ ವರ್ಷದಲ್ಲಿ ಈ ಸಂಖ್ಯೆ ೫೮೨ ರಷ್ಟು ಆಗಿತ್ತು. ಮೊದಲ ಆರ ತಿಂಗಳ ತುಲನೆಯಲ್ಲಿ ಈ ವರ್ಷದ ಸಂಖ್ಯೆ ಶೇಕಡಾ ೩೬ ಕ್ಕಿಂತಲೂ ಹೆಚ್ಚಾಗಿದೆ, ಎಂದು ನಾರ್ವೇಯಲ್ಲಿನ, ‘ಇರಾನ್ ಹ್ಯೂಮನ್ ರೈಟ್ಸ್’ ಹೆಸರಿನ ಸಂಘಟನೆಯು ಮಾಹಿತಿ ನೀಡಿದೆ. ಸಂಘಟನೆಯ ವಿರುದ್ಧದ ಪ್ರತಿಭಟನೆಗಳನ್ನು ತಡೆಯುವುದಕ್ಕಾಗಿ ಹಾಗೂ ಜನರಲ್ಲಿ ಭಯ ನಿರ್ಮಾಣ ಮಾಡುವುದಕ್ಕಾಗಿ ಗಲ್ಲು ಶಿಕ್ಷೆಯನ್ನು ಹೆಚ್ಚಿಸಲಾಗಿದೆ.
ಕಳೆದ ವರ್ಷ ಹಿಜಾಬ್ ಧರಿಸದೇ ಇದ್ದರಿಂದ ಬಂಧಿಸಲಾಗಿರುವ ಮಹಾಸ ಇರಾನಿ ಈ ಮಹಿಳೆಯು ಪೊಲೀಸರ ಥಳಿತದಿಂದ ಸಾವನ್ನಪ್ಪಿದ್ದಳು. ಇದರಿಂದ ಕಳೆದ ಅನೇಕ ತಿಂಗಳಿಂದ ದೇಶಾದ್ಯಂತ ಸರಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಗಳನ್ನು ತಡೆಯುವುದಕ್ಕಾಗಿ ಗಲ್ಲು ಶಿಕ್ಷೆ ಹೆಚ್ಚಿಸಲಾಗಿದೆ. ನಿಜವೆಂದರೆ ಮಾದಕ ಪದಾರ್ಥಗಳ ಮಾರಾಟದ ಆರೋಪದಲ್ಲಿ ಸಂಬಂಧಿತರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇದರಲ್ಲಿನ ಶೇಕಡ ೨೦ ರಷ್ಟು ಜನರು ಬಲೂಚಿ ಅಲ್ಪಸಂಖ್ಯಾತರಾಗಿದ್ದಾರೆ.

‘ಇರಾನ ಹ್ಯೂಮನ್ ರೈಟ್ಸ್’ನ ಮಾಹಿತಿಯ ಪ್ರಕಾರ ೨೦೨೦ ರಲ್ಲಿ ನೀಡಿರುವ ಗಲ್ಲು ಶಿಕ್ಷೆಯ ಸಂಖ್ಯೆ ೨೦೧೫ ನಂತರ ಎಲ್ಲಕ್ಕಿಂತ ಹೆಚ್ಚಾಗಿತ್ತು. ೨೦೨೧ ರಲ್ಲಿ ಈ ಸಂಖ್ಯೆ ಕಡಿಮೆ ಎಂದರೆ ೩೩೩ ರಷ್ಟಿತ್ತು.

ಸಂಪಾದಕರ ನಿಲುವು

ಜನರಲ್ಲಿ ಭಯ ನಿರ್ಮಾಣ ಮಾಡುವುದಕ್ಕಾಗಿ ಮತ್ತು ಸರಕಾರದ ವಿರುದ್ಧ ನಡೆಯುವ ಪ್ರತಿಭಟನೆಗಳನ್ನು ತಡೆಯುವುದಕ್ಕಾಗಿ ಕಳೆದ ವರ್ಷದ ತುಲನೆಯಲ್ಲಿ ಗಲ್ಲು ಶಿಕ್ಷೆಯಲ್ಲಿ ಶೇಕಡ ೩೬ ಹೆಚ್ಚಳ !