ಮುಸಲ್ಮಾನ ಶರಣಾರ್ಥಿಗಳಿಂದ ನೆದರಲ್ಯಾಂಡ ವಿನಾಶದ ಅಂಚಿನಲ್ಲಿದೆ ! – ಗಿರ್ಟ ವಿಲ್ಡರ್ಸ

ನೆದರಲ್ಯಾಂಡನ ಸಂಸದ ಗಿರ್ಟ ವಿಲ್ಡರ್ಸ ಇವರ ಆಕ್ರೋಶ !

ಗಿರ್ಟ ವಿಲ್ಡರ್ಸ

ಅಬಮಸ್ಟರಡಾಮ (ನೆದರ್ ಲ್ಯಾಂಡ್) – ಮುಸಲ್ಮಾನ ಶರಣಾರ್ಥಿಗಳಿಂದ ನೆದರಲ್ಯಾಂಡ ವಿನಾಶದ ಅಂಚಿನಲ್ಲಿದೆ ಇದರಿಂದ ಇಲ್ಲಿನ ಲಕ್ಷಗಟ್ಟಲೆ ನಾಗರಿಕರು ಭೀಕರ ಸಂಕಷ್ಟವನ್ನು ಸಹಿಸಬೇಕಾಗುತ್ತಿದೆ. ಇರಾನ್ ನಿಂದ ಬಂದಿರುವ ಓರ್ವ ನಿರಾಶ್ರಿತ ಮುಸಲ್ಮಾನ ವಿರುದ್ಧ ನಿನ್ನೆ ಪ್ರಕರಣವೊಂದು ನಡೆಯುತ್ತಿತ್ತು. ಅವನನ್ನು ಅವನ ದೇಶಕ್ಕೆ ಪುನಃ ಕಳುಹಿಸುವ ಬಗ್ಗೆ ಮೂರನೇ ಬಾರಿಗೆ ಪ್ರಕರಣ ನಡೆದಿತ್ತು. ಈ ಇರಾನಿ ನಿರಾಶ್ರಿತನು ಒಂದು ನಿರಾಶ್ರಿತ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ 2 ಡಚ್ ನಾಗರಿಕರ ಮೇಲೆ ಕುದಿಯುತ್ತಿರುವ ಎಣ್ಣೆಯನ್ನು ಚೆಲ್ಲಿದ್ದರಿಂದ ಅವರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಒಂದು ವೇಳೆ ಈ ಆರೋಪಿಯನ್ನು ಮೊದಲ ಪ್ರಕರಣದ ಸಮಯದಲ್ಲಿಯೇ ಮರಳಿ ಕಳುಹಿಸಿದ್ದರೆ, ಹೀಗೆ ಆಗುತ್ತಿರಲಿಲ್ಲ. ಇದು ನೆದರಲ್ಯಾಂಡ ಸರಕಾರದ ವೈಫಲ್ಯವಾಗಿದೆ. ಇದು ಅತ್ಯಂತ ಖೇದಜನಕವಾಗಿದ್ದು, ನಿರಾಶ್ರಿತರಿಂದಾಗಿ ಪರಿಸ್ಥಿತಿ ಕೈಮೀರುತ್ತಿದೆಯೆಂದು `ಪಾರ್ಟಿ ಫಾರ ಫ್ರೀಡಂ’ ಈ ರಾಜಕೀಯ ಪಕ್ಷದ ಅಧ್ಯಕ್ಷ ಮತ್ತು ಸಂಸದ ಗಿರ್ಟ ವಿಲ್ಡರ್ಸ ಇವರು ಹೇಳಿಕೆ ನೀಡಿದ್ದಾರೆ. ಅವರು ಇಲ್ಲಿ ಆಯೋಜಿಸಲಾಗಿದ್ದ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ವಿಲ್ಡರ್ಸ ಮಾತನಾಡುತ್ತಾ, ಮುಸಲ್ಮಾನ ನಿರಾಶ್ರಿತರು ಬೀದಿಯಲ್ಲಿಯೇ ಮಲವಿಸರ್ಜನೆಯನ್ನು ಮಾಡುತ್ತಾರೆ. ಓರ್ವ ನಿರಾಶ್ರಿತನು 11 ವರ್ಷದ ಡಚ್ ಬಾಲಕಿಗೆ ತನ್ನ ಜನನೇಂದ್ರಿಯವನ್ನು ತೋರಿಸಿದನು. ಈ ಜನರು ಸಾರ್ವಜನಿಕ ಸ್ಥಳದಲ್ಲಿ ಡಚ್ ಹುಡುಗಿಯರ ಎದುರು ಹಸ್ತಮೈಥುನ ಮಾಡುತ್ತಿದ್ದಾರೆ. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಶಾಲಾ ಬಾಲಕಿಯರನ್ನು ಹಿಂಬಾಲಿಸಿ ಅವರಿಗೆ ಕಿರುಕುಳ ನೀಡುವುದು ಹೆಚ್ಚಾಗಿದೆ. ನಿರಾಶ್ರಿತರಿಂದ `ಸುಪರಮಾರ್ಕೆಟ’ನಲ್ಲಿರುವ `ಕ್ಯಾಶಿಯರ್’ನ `ಕತ್ತು ಕತ್ತರಿಸುತ್ತೇವೆ’ ಚಿಹ್ನೆಗಳಿಂದ ಬೆದರಿಸಿ ಅಲ್ಲಿನ ವಸ್ತುಗಳನ್ನು ಪುಕ್ಕಟೆಯಾಗಿ ಲೂಟಿ ಮಾಡುತ್ತಿದ್ದಾರೆ. ಈ ಎಲ್ಲ ಪ್ರಕಾರಗಳಿಂದ ಡಚ್ ನಾಗರಿಕರು ರಾತ್ರಿ ಹೊರಗೆ ಬರಲು ಅಸಾಧ್ಯವಾಗಿದೆ ಎಂದು ಹೇಳಿದ್ದಾರೆ.