ದೆಹಲಿಯಲ್ಲಿ ಅನಧಿಕೃತ ಧಾರ್ಮಿಕ ಸ್ಥಳಗಳ ಮೇಲೆ ಆಡಳಿತದಿಂದ ಕಾರ್ಯಾಚರಣೆ

ದೇವಾಲಯಗಳು ಮತ್ತು ಮಜಾರಗಳ (ಮುಸಲ್ಮಾನರ ಗೋರಿ) ಮೇಲೆ ಕ್ರಮ !

ನವ ದೆಹಲಿ – ಇಲ್ಲಿ ಆಡಳಿತದಿಂದ ಅನಧಿಕೃತ ಧಾರ್ಮಿಕ ಸ್ಥಳಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಇಲ್ಲಿನ ಭಜನಪುರ ಪ್ರದೇಶದಲ್ಲಿ ಕೇಂದ್ರೀಯ ಮೀಸಲು ಪೊಲೀಸ ಪಡೆ ಮತ್ತು ದೆಹಲಿ ಪೊಲೀಸರ ಮೇಲ್ವಿಚಾರಣೆಯಲ್ಲಿ ಹನುಮಾನ ದೇವಸ್ಥಾನ ಮತ್ತು ಮಜರ ಅನ್ನು ತೆಗೆದುಹಾಕಲಾಯಿತು. ರಸ್ತೆ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆ ಈ ಕ್ರಮ ಕೈಗೊಂಡಿದೆ. ಯಾವುದೇ ದೊಂಬಿ ಸಂಭವಿಸಬಾರದು; ಆದ್ದರಿಂದ, ಕಾರ್ಯಾಚರಣೆಯ ಸಮಯದಲ್ಲಿ, ಇಡೀ ಪ್ರದೇಶವನ್ನು ಡ್ರೋನ್‌ಗಳ ಮೂಲಕ ನಿಗಾ ಇರಿಸಲಾಗಿತ್ತು. ಅಪರ ಜಿಲ್ಲಾಧಿಕಾರಿ ಸುಬೋಧ ಗೋಸ್ವಾಮಿ ಅವರು ದೇವಾಲಯವನ್ನು ತೆರವುಗೊಳಿಸುವ ಮೊದಲು ಹನುಮಂತ ದೇವರಿಗೆ ಪೂಜೆ ಸಲ್ಲಿಸಿದರು. ಭಜನಪುರದಲ್ಲಿ ತುಗು ಸೇತುವೆ ನಿರ್ಮಿಸಲಾಗುತ್ತಿದೆ. ಅಲ್ಲಿ ದೇವಸ್ಥಾನ ಹಾಗೂ ಮಜಾರಿನದಿಂದ ದಿನನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಹಾಗಾಗಿ ಸ್ಥಳೀಯರ ಒಪ್ಪಿಗೆ ಮೇರೆಗೆ ಅದನ್ನು ತೆಗೆದುಹಾಕಲಾಯಿತು.

ಸ್ಥಳೀಯ ಜನರ ಸಹಕಾರದಿಂದ ಎರಡೂ ಧಾರ್ಮಿಕ ಸ್ಥಳಗಳನ್ನು ಶಾಂತಿಯುತವಾಗಿ ತೆಗೆದುಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಜಾಯ್ ಎನ್. ತಿರ್ಕಿ ಅವರು ಹೇಳಿದರು. ಎರಡೂ ನಿರ್ಮಾಣಗಳನ್ನು ಪರಸ್ಪರ ಒಪ್ಪಿಗೆಯಿಂದ ತೆಗೆದು ಹಾಕಲಾಗಿದೆ. ದೇವಸ್ಥಾನದ ಅರ್ಚಕರೇ ವಿಗ್ರಹಗಳನ್ನು ಕಾರಿನಲ್ಲಿಟ್ಟಿದ್ದರು.

ಧಾರ್ಮಿಕ ಸ್ಥಳಗಳ ಧ್ವಂಸ ತಪ್ಪು ! – ಆಮ್ ಆದ್ಮಿ ಪಕ್ಷ

ದೆಹಲಿ ಸರಕಾರದಲ್ಲಿನ ಲೋಕೋಪಯೋಗಿ ಸಚಿವ ಅತಿಶೀ ಅವರು ಈ ಕ್ರಮವನ್ನು ವಿರೋಧಿಸಿದ್ದಾರೆ. ಅವರು ಟ್ವೀಟ್ ಮಾಡುತ್ತಾ, “ಉಪ ರಾಜ್ಯಪಾಲರು, ನಾನು ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ದೇವಾಲಯಗಳು ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ಕೆಡವುವ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ನಿಮಗೆ ಪತ್ರ ಬರೆದಿದ್ದೇನೆ. ಆದರೂ ಇಂದು ನಿಮ್ಮ ಆದೇಶದ ಮೇರೆಗೆ ಭಜನಪುರದ ದೇವಸ್ಥಾನವನ್ನು ಕೆಡವಲಾಯಿತು. ದೆಹಲಿಯಲ್ಲಿ ದೇವಾಲಯಗಳು ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ಕೆಡವಬೇಡಿ ಎಂದು ನಾನು ವಿನಂತಿಸುತ್ತೇನೆ. ಜನರ ಶ್ರದ್ಧೆಯು ಅವುಗಳೊಂದಿಗೆ ಜೊಡಿಸಲ್ಪಟಿವೆ.