2 ಗುಂಪುಗಳು ಪರಸ್ಪರರ ಮೇಲೆ ಕಲ್ಲು ತೂರುತ್ತಾ ಬಾಂಬ್ ಎಸೆದರು : ಕರ್ಫ್ಯೂ ಜಾರಿ
ಧನಬಾದ – ಕತರಾಸನಲ್ಲಿ ಜೂನ 30 ರಂದು ಇ-ರಿಕ್ಷಾದ ಬ್ಯಾಟರಿ ಕಳ್ಳತನವಾಗಿರುವ ಪ್ರಕರಣದಲ್ಲಿ 2 ಗುಂಪುಗಳ ನಡುವೆ ವಿವಾದ ನಡೆಯಿತು. ತದನಂತರ 2 ಗುಂಪುಗಳಲ್ಲಿ ಕಲ್ಲುತೂರಾಟ ನಡೆಸಿದ್ದಲ್ಲದೇ ಒಬ್ಬರಿಗೊಬ್ಬರು ಬಾಂಬ್ ಎಸೆದರು. ಈ ಗಲಭೆಯಲ್ಲಿ 12 ಜನರು ಗಾಯಗೊಂಡಿದ್ದಾರೆ. ಪೊಲೀಸರು ಇಲ್ಲಿಯವರೆಗೆ 20 ಜನರನ್ನು ಬಂಧಿಸಲಾಗಿದ್ದು, ಇದರಲ್ಲಿ ಓರ್ವ ಮಹಿಳೆಯೂ ಸೇರಿದ್ದಾಳೆ.
ಈ ಘಟನೆಯ ಬಳಿಕ ಪರಿಸರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಒಂದು ವಾರ್ತಾಪತ್ರಿಕೆಯು ನೀಡಿದ ಮಾಹಿತಿಯನುಸಾರ ಇ-ಬ್ಯಾಟರಿಯ ಕಳ್ಳತನದ ಪ್ರಕರಣದಲ್ಲಿ 2 ಗುಂಪುಗಳ ನಡುವೆ ಹಲ್ಲೆ ನಡೆದಿದೆ. ತದನಂತರ ವಾತಾವರಣ ತಿಳಿಯಾದರೂ; 2 ಗುಂಪುಗಳಲ್ಲಿ ಪರಿಸ್ಥಿತಿ ಪುನಃ ಹಾಳಾಗಿದೆ. ಒಂದು ಗುಂಪು ಸ್ಥಳೀಯ ನಗರಸೇವಕರ ಪುತ್ತಳಿಯನ್ನು ಸುಟ್ಟಿದ್ದರಿಂದ ಮತ್ತೊಂದು ಗುಂಪಿನ ಜನರು ಆಕ್ರೋಶಗೊಂಡರು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲಗೊಂಡಿದ್ದರಿಂದ ಅವರು ಲಾಠಿಚಾರ್ಜ ನಡೆಸಿದ್ದಾರೆ.