ಅಮೇರಿಕಾವು ಪಾಕಿಸ್ತಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಯುದ್ಧ ಸಾಮಗ್ರಿ ಪೂರೈಸಿದೆ. ಆದ್ದರಿಂದ ಭಾರತದ ಸುರಕ್ಷೆ ಅಪಾಯದಲ್ಲಿದೆ, ಈ ಬಗ್ಗೆ ಏನು ?
ಇಸ್ಲಾಮಾಬಾದ – ಇತ್ತೀಚಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕಾದ ಪ್ರವಾಸಕ್ಕೆ ಹೋಗಿದ್ದರು. ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರ ಜೊತೆಗೆ ಅವರು ದ್ವಿಪಕ್ಷಿಯ ಚರ್ಚೆ ಕೂಡ ನಡೆಸಿದರು. ಈ ಪ್ರವಾಸದಲ್ಲಿ ಅಮೆರಿಕಾದ ಜೊತೆಗೆ ಭಾರತದ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಅದರಲ್ಲಿ ಭಾರತವು ಯುದ್ಧ ವಿಮಾನ ತೇಜಸ್ ಗಾಗಿ ಭಾರತದಲ್ಲಿ ಜಿಈ ಇಂಜಿನ ನಿರ್ಮಾಣ ಮಾಡುವುದು, ಭಾರತಕ್ಕೆ ಅತ್ಯಾಧುನಿಕ ಡ್ರೋನ್ ಪೂರೈಕೆ, ರಕ್ಷಣಾ ಸಾಮಗ್ರಿಗಳ ತಂತ್ರಜ್ಞಾನ ಹಸ್ತಾಂತರ ಮಾಡುವುದು ಮುಂತಾದ ಒಪ್ಪಂದಗಳ ಮೇಲೆ ಸಹಿ ಮಾಡಲಾಗಿದೆ. ಇದರಿಂದ ಪಾಕಿಸ್ತಾನಕ್ಕೆ ಆಘಾತವಾಗಿದೆ. ‘ಭಾರತ ಮತ್ತು ಅಮೆರಿಕ ಇವರಲ್ಲಿನ ಈ ರಕ್ಷಣಾ ಒಪ್ಪಂದ ಮತ್ತು ಪರಸ್ಪರ ಸಹಕಾರವು ನಮ್ಮ ಸುರಕ್ಷತೆಗೆ ಅಪಾಯಕಾರಿಯಾಗಿದೆ’, ಎಂದು ಪಾಕಿಸ್ತಾನ ಹೇಳಿದೆ. ಅಮೇರಿಕಾವು ಪಾಕಿಸ್ತಾನದ ವಿರುದ್ಧ ಭಾರತವನ್ನು ಓಲೈಸುವ ಹೇಳಿಕೆ ನೀಡಬಾರದು, ಎಂದು ಈ ಪದಗಳಲ್ಲಿ ಪಾಕಿಸ್ತಾನವು ಈ ಹಿಂದೆ ಕೂಡ ಅದರ ಆಕ್ರೋಶ ವ್ಯಕ್ತಪಡಿಸಿತ್ತು.
(ಸೌಜನ್ಯ : Time Now)
ಪಾಕಿಸ್ತಾನದಿಂದ ಅಮೆರಿಕಾಗೆ ಸಂದೇಶ ರವಾನೆ
ಅಮೇರಿಕಾವು ಪಾಕಿಸ್ತಾನದ ಚಿಂತೆಯ ಬಗ್ಗೆ ಗಮನಹರಿಸಬೇಕು, ಈ ಚಿಂತೆಯನ್ನು ನಿರ್ಲಕ್ಷಿಸಿ ಭಾರತಕ್ಕೆ ಅತ್ಯಾಧುನಿಕ ಸೈನಿಕಿ ತಂತ್ರಜ್ಞಾನ ದೊರೆತರೆ ದಕ್ಷಿಣ ಏಷ್ಯಾದಲ್ಲಿ ಅಸ್ಥಿರತೆ ಹೆಚ್ಚಾಗುವುದು ಮತ್ತು ಸಾಂಪ್ರದಾಯಿಕ ಸಮತೋಲನ ಹಲಗೆಡುವುದು. (ಕಳ್ಳನ್ಗೊಂದು ಪಿಳ್ಳೆ ನೆವ ! ಏಷ್ಯಾ ಖಂಡದಲ್ಲಿ ಅಸ್ಥಿರತೆ ಭಾರತದಿಂದ ಅಲ್ಲ, ಪಾಕಿಸ್ತಾನದಿಂದ ಹೆಚ್ಚುತ್ತದೆ, ಇದನ್ನು ಅದು ತಿಳಿದುಕೊಳ್ಳಬೇಕು ! – ಸಂಪಾದಕರು) ತಂತ್ರಜ್ಞಾನ ಹಸ್ತಾಂತರಣದಿಂದ ಭಾರತ ಸದೃಢವಾಗುವುದು. ಇದರಿಂದ ಪಾಕಿಸ್ತಾನದ ರಾಷ್ಟ್ರೀಯ ಸುರಕ್ಷತೆಗೆ ಅಪಾಯ ಆಗಬಹುದು ಎಂದು ಪಾಕಿಸ್ತಾನ ಅಮೆರಿಕಕ್ಕೆ ಕಳುಹಿಸಿರುವ ಸಂದೇಶದಲ್ಲಿ ಹೇಳಿದೆ.
Spooked By India-US Deal, Pakistan Begs For Combat Drones From China?#TNDIGITALVIDEOS #Pakistan #China #India #US pic.twitter.com/8QvJYsuXJ6
— TIMES NOW (@TimesNow) June 27, 2023