ಭಾಜಪ ಏಕರೂಪ ನಾಗರಿಕ ಸಂಹಿತೆ ಗೊಂದಲ ನಿವಾರಿಸಲಿದೆ ! – ಪ್ರಧಾನಿ ಮೋದಿ

೫ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಚಾಲನೆ !

ಪ್ರಧಾನಿ ಮೋದಿ

ಭೋಪಾಲ್ (ಮಧ್ಯಪ್ರದೇಶ) – ಇಸ್ಲಾಂನ ತ್ರಿವಳಿ ತಲಾಕ್ ಗೆ ಯಾವುದೇ ಸಂಬಂಧವಿಲ್ಲ. ಅದನ್ನು ಬೆಂಬಲಿಸುವವರು ಮತಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ. ಒಂದೇ ಮನೆಯಲ್ಲಿ ಎರಡು ಕಾಯದೆ ಇರಲು ಸಾಧ್ಯವಿಲ್ಲ. ಏಕರೂಪ ನಾಗರಿಕ ಸಂಹಿತೆ ಕುರಿತ ಗೊಂದಲವನ್ನು ಭಾಜಪ ಹೋಗಲಾಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಪಾದಿಸಿದರು. ಅವರು ಇಲ್ಲಿನ ರಾಣಿ ಕಮಲಾಪತಿ ರೈಲು ನಿಲ್ದಾಣದಿಂದ ದೇಶದ ೫ ನೇ ವಂದೇ ಭಾರತ್ ಎಕ್ಸ್‌ಪ್ರೇಸ್‌ಗೆ ಹಸಿರು ನಿಶಾನೆ ತೋರಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿಯವರು, ಬಿಹಾರದಲ್ಲಿ ನಡೆದ ದೇಶದ ವಿರೋಧ ಪಕ್ಷಗಳ ನಾಯಕರ ಸಭೆಯನ್ನೂ ಟೀಕಿಸಿದರು. ‘ಈ ಎಲ್ಲ ಪಕ್ಷಗಳ ಹಗರಣಗಳನ್ನು ಲೆಕ್ಕ ಹಾಕಿದರೆ ೨೦ ಲಕ್ಷ ಕೋಟಿ ರೂಪಾಯಿ ಹಗರಣ ನಡೆಯುವುದು ಖಚಿತ’ ಎಂದು ಹೇಳಿದರು.

ಈ ಕಾರ್ಯಕ್ರಮದ ನಂತರ, ಪ್ರಧಾನಿ ಮೋದಿಯವರು ಮೋತಿಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾಜಪದ ‘ಮೇರಾ ಬೂಥ ಸಬಸೇ ಮಜಬೂತ’ ಈ ಅಭಿಯಾನದ ಅಡಿಯಲ್ಲಿ ಮಧ್ಯಪ್ರದೇಶದ ೫೪೩ ಲೋಕಸಭೆ ಮತ್ತು ೬೪ ಸಾವಿರ ಬೂಥಗಳ ೧೦ ಲಕ್ಷ ಕಾರ್ಯಕರ್ತರನ್ನು ಉದ್ದೇಶಿಸಿ ಡಿಜಿಟಲ್ ಪದ್ಧತಿಯಲ್ಲಿ ಮಾತನಾಡಿದರು. ಎಲ್ಲ ರಾಜ್ಯಗಳ ವಿಧಾನಸಭಾ ಮತದಾರರ ಸಂಘಗಳಲ್ಲಿನ ೩ ಸಾವಿರ ಕಾರ್ಯಕರ್ತರು ಕೂಡ ಹಾಜರಿದ್ದರು.

೫ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್

ಮಧ್ಯಪ್ರದೇಶಕ್ಕೆ ಭೋಪಾಲ್-ಇಂಧೋರ್ ಮತ್ತು ರಾಣಿ ಕಮಲಾಪತಿ-ಜಬಲ್ಪುರ್ ಎಂಬ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ಮಾರ್ಗಗಳಿವೆ. ರಾಂಚಿ-ಪಾಟ್ನಾ, ಧಾರವಾಡ-ಬೆಂಗಳೂರು ಮತ್ತು ಮಡಗಾಂವ್-ಮುಂಬಯಿ ಈ ಉಳಿದ ೩ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳಿವೆ. ಪ್ರಸ್ತುತ ದೇಶದಲ್ಲಿ ಒಟ್ಟು ೧೮ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಓಡುತ್ತಿವೆ.