ರಾಜ್ಯದ ಐತಿಹಾಸಿಕ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿದ ಹೊಯ್ಸಳ ಗ್ರಾಮಕ್ಕೆ 75 ವರ್ಷಗಳ ನಂತರ ಬಸ್ ಸೇವೆ !

ಚಿಕ್ಕಮಗಳೂರು – ಸುಮಾರು 300 ವರ್ಷಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತವನ್ನು ಆಳಿದ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿದ ಹೊಯ್ಸಳ ಗ್ರಾಮದಲ್ಲಿ ಸ್ವಾತಂತ್ರ್ಯದ 75 ವರ್ಷಗಳ ನಂತರ ಬಸ್ ಸೇವೆಯನ್ನು ಪ್ರಾರಂಭವಾಗಿದೆ. ಹೊಯ್ಸಳ ವಂಶಸ್ಥರ ತವರು ಮನೆಯಾಗಿರುವ ಈ ಗ್ರಾಮದಲ್ಲಿ ಬಸ್‌ ಸಂಚಾರ ಆರಂಭಿಸಲು ಸ್ಥಳೀಯರು ಹತ್ತಾರು ವರ್ಷಗಳಿಂದ ಹೋರಾಟ, ಆಂದೋಲನ ಮತ್ತು ಮನವಿ ಸಲ್ಲಿಸುವುದು ಈ ಮೂಲಕ ಹೋರಾಟ ಮಾಡಬೇಕಾಯಿತು. ಈ ಗ್ರಾಮದಲ್ಲಿ 200 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಈ ಗ್ರಾಮ ಇಂದಿಗೂ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಈ ಗ್ರಾಮದ ಜನರು ಬಸ್ಸಿಗಾಗಿ 5 ಕಿ.ಮೀ. ನಡೆಯಬೇಕಾಗುತ್ತಿತ್ತು.