ಭಾರತದಿಂದ ಕದ್ದ 100 ಕ್ಕಿಂತಲೂ ಹೆಚ್ಚು ಪ್ರಾಚೀನ ಕಲಾಕೃತಿಗಳನ್ನು ಅಮೇರಿಕಾ ಮರಳಿಸಲಿದೆ !

ನವದೆಹಲಿ – ಭಾರತದಿಂದ ಕಳ್ಳತನ ಮಾಡಿ ಅಮೇರಿಕಾಗೆ ತೆಗೆದುಕೊಂಡು ಹೋಗಿದ್ದ 100 ಕ್ಕಿಂತಲೂ ಹೆಚ್ಚು ಕಲಾಕೃತಿಗಳನ್ನು ಅಮೇರಿಕಾ ಭಾರತಕ್ಕೆ ಮರಳಿಸಲಿದೆ. ಅಮೇರಿಕಾದ ಪ್ರವಾಸದಲ್ಲಿರುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಅಮೇರಿಕಾವು ಈ ಕುರಿತು ಘೋಷಣೆ ಮಾಡಿತು. ಇದಕ್ಕೆ ಪ್ರಧಾನಮಂತ್ರಿ ಮೋದಿಯವರು ಅಮೇರಿಕಾಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಪ್ರಧಾನಮಂತ್ರಿ ಮೋದಿಯವರ ವಿದೇಶ ಪ್ರವಾಸದಿಂದ ಇಲ್ಲಿಯವರೆಗೆ ನೂರಾರು ಭಾರತೀಯ ಕಲಾಕೃತಿಗಳು ವಿದೇಶದಿಂದ ಮರಳಿ ತರಲಾಗಿದೆ. 2022 ರಲ್ಲಿ ಅಮೇರಿಕಾವು 307 ಕಲಾಕೃತಿಗಳನ್ನು ಭಾರತಕ್ಕೆ ಮರಳಿಸಿತ್ತು. ಇವುಗಳನ್ನು ಕಳ್ಳಸಾಗಾಣಿಕೆದಾರರು ಅಮೇರಿಕಾಗೆ ತೆಗೆದುಕೊಂಡು ಹೋಗಿದ್ದರು. ಇದರ ಬೆಲೆ 33 ಕೋಟಿ ರೂಪಾಯಿಗಳಷ್ಟಿತ್ತು. ಇದರಲ್ಲಿ ಬಹುತೇಕ ಕಲಾಕೃತಿಗಳನ್ನು ಕಳ್ಳಸಾಗಾಣಿಕೆದಾರ ಸುಭಾಷ ಕಪೂರನು ಭಾರತದಿಂದ ಕಳ್ಳತನಮಾಡಿ ತೆಗೆದುಕೊಂಡು ಹೋಗಿದ್ದನು. ಅವನು ಭಾರತ ಮಾತ್ರವಲ್ಲದೇ ಅಫಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಮ್ಯಾನ್ ಮಾರ್, ಥೈಲೆಂಡ, ಕಂಬೋಡಿಯಾ, ಇಂಡೋನೇಶಿಯಾ ಮತ್ತು ಇತರೆ ದೇಶಗಳಿಂದಲೂ ಕಲಾಕೃತಿಗಳನ್ನು ಕಳ್ಳಸಾಗಾಣಿಕೆ ಮಾಡಿದ್ದನು.

ಗೂಗಲ, ಅಮೇಜಾನ್ ಮುಂತಾದ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲಿದೆ !

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಮೇರಿಕಾ ಪ್ರವಾಸದ ಸಮಯದಲ್ಲಿ ಗೂಗಲ, ಮೈಕ್ರೋಸಾಫ್ಟ, ಅಮೆಜಾನ್ ಮುಂತಾದ ಕಂಪನಿಗಳ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ಈ ಅಧಿಕಾರಿಗಳು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಗೂಗಲ ವತಿಯಿಂದ 91 ಸಾವಿರ 957 ಕೋಟಿ ರೂಪಾಯಿಗಳು, ಅಮೆಜಾನ್ 1 ಲಕ್ಷ 23 ಸಾವಿರ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡುವುದಾಗಿ ತಿಳಿಸಿವೆ

ಸಂಪಾದಕೀಯ ನಿಲುವು

ಇಷ್ಟು ಕಲಾಕೃತಿ ದೇಶದ ಹೊರಗೆ ಹೇಗೆ ಹೋಯಿತು ? ಪುರಾತತ್ವ ಇಲಾಖೆ ಮಲಗಿತ್ತೇ ? ಭಾರತದ ಐತಿಹಾಸಿಕ ಮತ್ತು ಪ್ರಾಚೀನ ವಸ್ತುಗಳನ್ನು ರಕ್ಷಿಸುವಲ್ಲಿ ನಿರಂತರವಾಗಿ ವಿಫಲರಾಗಿರುವ ಪುರಾತತ್ವ ಇಲಾಖೆ ವಿಸರ್ಜಿಸಿ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಪುರಾತತ್ವ ವಿಶೇಷಜ್ಞರ ನೇಮಕಾತಿಯನ್ನು ಮಾಡುವುದು ಆವಶ್ಯಕ !