ಮಥುರಾದ ರಾಧಾರಾಣಿ ದೇವಾಲಯದಲ್ಲಿ ತುಂಡು ಬಟ್ಟೆಯಲ್ಲಿ ಪ್ರವೇಶ ನಿಷೇಧ

ಮಥುರಾದ ರಾಧಾರಾಣಿ ದೇವಾಲಯ

ಮಥುರಾ (ಉತ್ತರ ಪ್ರದೇಶ) – ಮಥುರಾ ಜಿಲ್ಲೆಯಲ್ಲಿನ ಬರ್ಸಾನಾದಲ್ಲಿರುವ ರಾಧಾರಾಣಿ ದೇವಸ್ಥಾನದಲ್ಲಿ, ತುಂಡು ಉಡುಪು, ಅಂದರೆ. ಶಾರ್ಟ್ಸ್, ನೈಟ್ ಸೂಟ್, ಮಿನಿ ಸ್ಕರ್ಟ್, ಹಾಫ್ ಪ್ಯಾಂಟ್, ಬರ್ಮುಡಾ ಇತ್ಯಾದಿಗಳನ್ನು ಭಕ್ತರು ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ದೇವಸ್ಥಾನದ ಹೊರಗೆ ಇಂತಹ ಸೂಚನೆಯನ್ನು ಹಾಕಲಾಗಿದೆ. ಈ ನಿಯಮವನ್ನು ಒಂದು ವಾರದ ನಂತರ ಮಾಡಲಾಗುವುದು ಎಂದು ದೇವಸ್ಥಾನ ಸಮಿತಿಯ ಪದಾಧಿಕಾರಿ ರಾಸ್ ಬಿಹಾರಿ ಗೋಸ್ವಾಮಿ ಇವರು ತಿಳಿಸಿದರು. ಕೆಲವು ತಿಂಗಳ ಹಿಂದೆ, ರಾಜ್ಯದ ರಾಧಾ ದಾಮೋದರ ದೇವಸ್ಥಾನ, ಅದೇ ರೀತಿ ಬದಾಯು ಜಿಲ್ಲೆಯ ಬಿರುವಾ ಬಾಡಿ ದೇವಸ್ಥಾನದಲ್ಲಿ ಇದೇ ರೀತಿಯ ನಿಯಮವನ್ನು ಜಾರಿಗೆ ತರಲಾಗಿದೆ.

ಭಕ್ತರು ಯಾವ ಉಡುಗೆಯಲ್ಲಿ ಬರಬೇಕೆಂದು ದೇಶದ ಅನೇಕ ದೇವಾಲಯಗಳು ನಿಯಮಗಳನ್ನು ರೂಪಿಸಿವೆ. ನಾವು ಕೂಡ ಅವರಂತೆಯೇ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಉತ್ತರ ಪ್ರದೇಶದ ದೇವಸ್ಥಾನದ ಆಡಳಿತ ಮಂಡಳಿಯವರು ಹೇಳಿದ್ದಾರೆ.

ಸಂಪಾದಕರ ನಿಲುವು

ದೇಶದ ಪ್ರತಿಯೊಂದು ದೇವಸ್ಥಾನದಲ್ಲೂ ಇಂತಹ ನಿಷೇಧ ಹೇರುವುದರೊಂದಿಗೆ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದನ್ನೂ ಪ್ರಾರಂಭಿಸಬೇಕು !