ಅಬುಧಾಬಿ (ಸಂಯುಕ್ತ ಅರಬ ಎಮಿರಾಟ್) – ಇಲ್ಲಿಯ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿ ನಮಾಜ ಅಥವಾ ಇತರೆ ಕೃತ್ಯಗಳನ್ನು ಮಾಡುವವರಿಗೆ 1 ಸಾವಿರ ದಿರಹಾಮ್ (22 ಸಾವಿರ 314 ರೂಪಾಯಿಗಳು) ದಂಡವನ್ನು ವಿಧಿಸಲಾಗುವುದೆಂದು ಪೊಲೀಸರು ಆದೇಶವನ್ನು ಹೊರಡಿಸಿದ್ದಾರೆ. ಪೊಲೀಸರ ಹೇಳಿಕೆಯಂತೆ, ರಸ್ತೆಯ ಮೇಲೆ ನಮಾಜ ಅಥವಾ ಇತರೆ ಯಾವುದೇ ಕೃತ್ಯಗಳನ್ನು ಜನರಿಗಾಗಿ ಮತ್ತು ನಮಾಜ ಮಾಡುವವರಿಗೆ ಅಪಾಯಕಾರಿಯಾಗಿದೆ. ಈ ಸಂದರ್ಭದಲ್ಲಿ ಪೊಲೀಸರಿಂದ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
अबू धाबी में सड़क किनारे नमाज पढ़ने वालों पर होगा सख्त एक्शन
भरना पड़ेगा एक हजार दिरहम का जुर्माना #AbuDhabi #Namaz pic.twitter.com/1QKtBNTLVE
— TheRitamApp | द ऋतम् एप (@TheRitamApp) June 20, 2023
1. ಅಬುಧಾಬಿಯ ರಸ್ತೆ ಸಾರಿಗೆ ಇಲಾಖೆಯ ಉಪಮಹಾನಿರ್ದೇಶಕ ಲೆ. ಕರ್ನಲ್ ಸಲಾಹ್ ಅಬ್ದುಲ್ಲಾ ಅಲ್ ಹಮೈರಿಯವರು, ಜನರು ವಿಶ್ರಾಂತಿಗೃಹ, ಪೆಟ್ರೋಲಪಂಪ, ಮಸೀದಿ ಮುಂತಾದ ಸ್ಥಳಗಳಿಗೆ ಹೋಗಿ ನಮಾಜ ಮಾಡಬೇಕು ರಸ್ತೆಯ ಬದಿಯಲ್ಲಿ ನಮಾಜ ಮಾಡಬಾರದು.
2. ಅಬುಧಾಬಿಯ ಪೊಲೀಸ ಮಹಾನಿರ್ದೇಶಕರ ಪ್ರಕಾರ, ಜನರು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ನಮಾಜ ಅಥವಾ ಇನ್ನಿತರೆ ಕೆಲಸವನ್ನು ಮಾಡುತ್ತಾರೆ. ಇದರಿಂದಲೇ ಈ ಆದೇಶವನ್ನು ಜಾರಿಗೊಳಿಸಲಾಗಿದೆ.
3. ರಸ್ತೆಯ ಬದಿಯಲ್ಲಿ ಗಾಡಿಯನ್ನು ನಿಲ್ಲಿಸುವುದು, ವೃತ್ತದಲ್ಲಿ ವಾಹನವನ್ನು ನಿಲ್ಲಿಸುವುದು, ಅಯೋಗ್ಯ ಪದ್ಧತಿಯಲ್ಲಿ ವಾಹನಗಳನ್ನು ನಿಲ್ಲಿಸುವುದು, ವಾಹನ ರಸ್ತೆಯಲ್ಲಿ ಕೆಟ್ಟು ನಿಂತರೆ ಸುರಕ್ಷತೆಯ ಉಪಾಯವನ್ನು ಮಾಡದೇ ಇರುವುದು ಮುಂತಾದವುಗಳಿಗೆ ದಂಡವನ್ನು ವಿಧಿಸಲಾಗುತ್ತಿದೆ.
ಸಂಪಾದಕೀಯ ನಿಲುವುಇಸ್ಲಾಮಿ ದೇಶಗಳಲ್ಲಿ ಇಂತಹ ನಿಯಮಗಳನ್ನು ಜಾರಿಗೊಳಸಬಹುದಾಗಿದ್ದರೆ, ಜಾತ್ಯತೀತ ಭಾರತದಲ್ಲಿ ಏಕೆ ಸಾಧ್ಯವಿಲ್ಲ ? ಇಂತಹ ನಿಯಮಗಳನ್ನು ರಚಿಸಲು ಭಾರತಿಯರು ಪೊಲೀಸ, ಆಡಳಿತ ವರ್ಗ ಮತ್ತು ಸರಕಾರದ ಮೇಲೆ ಒತ್ತಡವನ್ನು ಹೇರಬೇಕಾಗಿದೆ. |