ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್ ಅವರಿಂದ ‘ಹಿಂದೂ ರಾಷ್ಟ್ರ’ ಸ್ಥಾಪನೆಯ ಘೋಷಣೆ!

ರಾಮನಾಥಿ, ಜೂ.22 (ವಾರ್ತೆ) – ರಾಜಕೀಯ ಎಂದರೆ ಜನರು ಆಯ್ಕೆ ಮಾಡುವವರೆಗೆ ಮಾತ್ರ. ನನಗೆ ಹಿಂದುತ್ವಕ್ಕಾಗಿ ಬದುಕುವುದಿದೆ. ಧರ್ಮಕ್ಕಾಗಿ ರಾಜಕೀಯ ಬಿಡಲು ಸಿದ್ಧನಿದ್ದೇನೆ. ಇವತ್ತೋ ನಾಳೆಯೋ ಸಾವು ಖಚಿತ ಎಂದಾದರೆ ಇತಿಹಾಸದಲ್ಲಿ ದಾಖಲಾಗುವ ಹಾಗೆ ಸಾಯಬಾರದೇಕೆ ? ದೇಶ ಮತ್ತು ಧರ್ಮಕ್ಕಾಗಿ ಸಾಯಲೂ ಸಿದ್ಧನಿದ್ದೇನೆ. ಹಿಂದೂಗಳು ಹೆದರಬಾರದು. ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪವನ್ನು ಈಡೇರಿಸಲು ನಾವು ಹುಟ್ಟಿದ್ದೇವೆ ಎಂದು ಭಾಗ್ಯನಗರದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಗ್ ಇವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ವೇದಿಕೆಯ ಗರ್ಜಿಸಿದರು. ಈ ಸಂದರ್ಭದಲ್ಲಿ ಪ್ರಖರ ಹಿಂದುತ್ವನಿಷ್ಠ ಪತ್ರಿಕೆಯಾದ ‘ಸನಾತನ ಪ್ರಭಾತ’ನ ದೈನಿಕದ ಸಹ ಸಂಪಾದಕರಾದ ಶ್ರೀ. ಸಂದೀಪ ಶಿಂದೆ, ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಮುನ್ನಾ ಕುಮಾರ ಶರ್ಮಾ (ನವದೆಹಲಿ), ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಸದ್ಗುರು ನೀಲೇಶ ಸಿಂಗಬಾಳ ಇವರು ಉಪಸ್ಥಿತರಿದ್ದರು.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman